ಪಾಕ್ ನಲ್ಲಿ ಕೆಜಿ ಸಕ್ಕರೆಗಿಂತ ಬಾಂಬ್ ಅಗ್ಗ ?! | ಅಲ್ಲಿ ಸಕ್ಕರೆಗೆ ಕೆಜಿಗೆ 150 ಏರಿದ ಬೆಲೆ !
ಇಸ್ಲಾಮಾಬಾದ್: ಇದೀಗ ಪಾಕಿಸ್ತಾನದಲ್ಲಿ ಸಕ್ಕರೆಯ ಬೆಲೆ ಆಕಾಶ ಏರಿ ಕೂತಿದೆ. ಭಾರೀ ಪ್ರಮಾಣದ ಸಾಲ ಪಾಕಿಸ್ತಾನವನ್ನು ತತ್ತರಿಸುವಂತೆ ಮಾಡಿದ್ದು, ಡಾಲರ್ ಎದುರು ಪಾಕಿಸ್ತಾನ ರೂಪಾಯಿ ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಅದರ ಎಫೆಕ್ಟ್ ಸಕ್ಕರೆ ಸೇರಿದಂತೆ ಇತರ ದಿನಬಳಕೆಯ ವಸ್ತುಗಳ ಮೇಲೆ ಆಗಿದೆ.
1 ಡಾಲರ್ 170+ ಪಾಕಿಸ್ತಾನಿ ರೂಪಾಯಿಯಾಗಿದೆ. ಅಲ್ಲಿ ಅವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಅಲ್ಲಿನ ನಾಗರಿಕರು ಮತ್ತು ಕೆಲವೇ ಕೆಲವು ಪ್ರಜ್ಞಾವಂತ ಮಾಧ್ಯಮ ಇಮ್ರಾನ್ ಖಾನ್ ನೇತೃತ್ವದ ಸರ್ಕಾರವನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ.
ಇವತ್ತು ಪಾಕಿಸ್ತಾನದ ಪರಿಸ್ಥಿತಿ ಎಷ್ಟರಮಟ್ಟಿಗೆ ಹದಗೆಟ್ಟಿದೆ ಅಂದರೆ, ಅಲ್ಲಿನ ಪ್ರಜೆಗಳು ಒಂದು ಕೆಜಿ ಸಕ್ಕರೆ ತೆಗೆದುಕೊಳ್ಳಬೇಕೆಂದರೆ 150 ರೂಪಾಯಿ ಪಾವತಿಸಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 138 ರೂಪಾಯಿ ಆಸುಪಾಸಿನಲ್ಲಿ ಬಿಕರಿಯಾಗುತ್ತಿದೆ !!
ಪಾಕಿಸ್ತಾನದ ಮಾಧ್ಯಮ ಜಿಯೋ ನ್ಯೂಸ್ ಪ್ರಕಾರ, ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ತೀವ್ರ ಏರಿಕೆಯಾಗಿದೆ. ಇತ್ತೀಚೆಗಷ್ಟೇ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಬೆಲೆ ಏರಿಕೆ ನಿಯಂತ್ರಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆದರೂ ಸಹ ಆ ವಿಶ್ವಾಸ ಈಡೇರಿಲ್ಲ. ಅಲ್ಲಿ ಸಕ್ಕರೆ ಬೆಲೆ 150 ರೂಪಾಯಿ ಗಡಿ ದಾಟಿ ಹಾಹಾಕಾರ ಎಬ್ಬಿಸಿದೆ. ಬಹುಶಃ ಪಾಕ್ ನಲ್ಲಿ ಸಕ್ಕರೆ ದುಬಾರಿ, ಬಾಂಬ್ ಸಸ್ತಾ ಎಂದು ಭಾರತದ ಸೋಷಿಯಲ್ ಮೀಡಿಯಾ ಗೇಲಿ ಮಾಡುತ್ತಿವೆ.