ಕಡಬ:ಕೊಂಬಾರಿನಲ್ಲಿ ಬಾವಿಗೆ ಬಿದ್ದ ಚಿರತೆಯ ರಕ್ಷಣೆ ಸಂದರ್ಭ ಅನ್ಯಮತೀಯ ಯುವಕರಿಂದ ಅಸಹ್ಯ ವರ್ತನೆ!! ಸ್ಥಳದಲ್ಲಿದ್ದ ಯುವತಿಯರ ಫೋಟೋ ತೆಗೆದ ತಪ್ಪಿಗೆ ಯುವಕರಿಗೆ ಸಾರ್ವಜನಿಕರಿಂದ ಬಿತ್ತು ಧರ್ಮದೇಟು

Share the Article

ಕಡಬ ತಾಲೂಕಿನ ಕೊಂಬಾರು ಎಂಬಲ್ಲಿ ಬಾವಿಗೆ ಬಿದ್ದ ಚಿರತೆಯ ರಕ್ಷಣೆಯ ಕಾರ್ಯವನ್ನು ವೀಕ್ಷಿಸಲು ಬಂದಿದ್ದ ಸ್ಥಳೀಯ ಅನ್ಯಮತೀಯ ಯುವಕರ ತಂಡವೊಂದು ಅಲ್ಲಿದ್ದ ಕೆಲ ಹಿಂದೂ ಯುವತಿಯರ ಫೋಟೋ ತೆಗೆದಿದ್ದು,ವಿಚಾರ ಗಮನಕ್ಕೆ ಬರುತ್ತಿದ್ದಂತೆ ಸಾರ್ವಜನಿಕರು ಯುವಕರನ್ನು ಹಿಗ್ಗಾಮುಗ್ಗ ಥಳಿಸಿದ ಘಟನೆ ಇಂದು ನಡೆದಿದೆ.

ಸುಂಕದಕಟ್ಟೆ ಅಡ್ಯನಡ್ಕ ನಿವಾಸಿಗಳಾದ ಅನ್ಯಮತೀಯ ಯುವಕರ ಈ ಕೃತ್ಯಕ್ಕೆ ಸಾರ್ವಜನಿಕರು ತಕ್ಕ ಶಾಸ್ತಿ ಮಾಡಿದ್ದು, ಆ ಬಳಿಕ ಯುವಕರು ತಪ್ಪಿನ ಬಗ್ಗೆ ಯುವತಿಯರಲ್ಲಿ ಕ್ಷಮೆ ಕೇಳಿದ್ದರಿಂದ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಯುವಕರ ಈ ನೀಚ ವರ್ತನೆಗೆ ಎಲ್ಲೆಡೆಯಿಂದಲೂ ಆಕ್ರೋಶ ವ್ಯಕ್ತವಾಗಿದೆ.

Leave A Reply