ಚೆನ್ನಾವರ : ಮುಹಿಯ್ಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಮಾಸಿಕ ಮಜ್ಲಿಸ್ , ಮಸೀದಿ ನವೀಕರಣಕ್ಕೆ ಸಹಕಾರ ನೀಡಿದವರಿಗೆ ಗೌರವಾರ್ಪಣೆ

Share the Article

ಸವಣೂರು : ಪಾಲ್ತಾಡಿ ಗ್ರಾಮದ ಚೆನ್ನಾವರ ಮುಹಿಯದ್ದೀನ್ ಜುಮಾ ಮಸೀದಿ , ಕಿದ್ಮತುಲ್ ಇಸ್ಲಾಂ ಜಮಾತ್ ಕಮಿಟಿ ಇದರ ವತಿಯಿಂದ ಪ್ರತೀ ತಿಂಗಳು ನಡೆಸಿಕೊಂಡು ಬರುವ ಮಾಸಿಕ ಮಲ್ಹರತುಲ್ ಬದ್ರಿಯಾ ದುವಾ ಮಜ್ಲಿಸ್ ನ.5 ರಂದು ಮಗ್ರಿಬ್ ನಮಾಜಿನ ಬಳಿಕ ಸಯ್ಯದ್ ಕುಂಞ ಕೊಯ ತಂಙಳ್ ಸುಳ್ಯ ಆವರ ನೇತೃತ್ವದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಚೆನ್ನಾವರ ಮಸೀದಿಯ ಮುದರ್ರಿಸ್ ಹಾಫೀಝ್ ನಝೀರ್ ಅಹ್ಮದ್ ಸಖಾಫಿ ಅವರು ನೇರವೇರಿಸಿದರು.

ಅಧ್ಯಕ್ಷತೆಯನ್ನು ಶಾಫಿ ಚೆನ್ನಾವರ ಅವರ ವಹಿಸಿದ್ದರು. ಮಸೀದಿಯ ನವೀಕರಣದ ಸಲುವಾಗಿ ಸಹಕಸಿದ ಹೆಲ್ಪಿಂಗ್ ಹ್ಯಾಂಡ್ ಸದಸ್ಯರಾದ ಪವಾಝ್ ಮ್ಯಾನ್ ಮೋಡ ,ಇಸ್ಮಾಯಿಲ್ ಮೂಲೆ ,ಫಿನಿಕ್ಸ್ ಬ್ರುಕ್ ಹಾಗು ಚಕ್ಕೆಂಡೆಡಿ ಬ್ರದರ್ಸ್ ಅಝೀಝ್ ಮುಕ್ಕೂರು, ಸಿ.ಪಿ. ಅಬ್ದುಲ್ಲಾ , ಹಸೈನಾರ್ ಓಟೆಚ್ಚರಿ ಅವರನ್ನು ಹೆಲ್ಪಿಂಗ್ ಹ್ಯಾಂಡ್ ವತಿಯಿಂದ ಸನ್ಮಾನಿಸಲಾಯಿತು.

ಮಸೀದಿಯ ನವೀಕರಣ ಸಲುವಾಗಿ ಸಹಕರಿಸಿದ ಹೇಲ್ಪಿಂಗ್ ಹ್ಯಾಂಡ್ ಕಾರ್ಯ ನಿರ್ವಾಹಕರಾದ ಹಂಝ ಸಿಎಂ ಚೆನ್ನಾವರ ಹಾಗೂ ಅಝೀಝ್ ಸಿ.ಎಂ ಮೂಕುಲಡ್ಕಾ ಅವರನ್ನು ಜಮಾಅತ್ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಮಸೀದಿಯ ಮಾಜಿ ಅಧ್ಯಕ್ಷರಾ ಉಸ್ಮಾನ್ ಹಾಜಿ ಚೆನ್ನಾವರ, ಸಿ.ಪಿ.ಮಹಮ್ಮದ್ ಹಾಜಿ ಚೆನ್ನಾವರ, ಕರ್ನಾಟಕ ಮುಸ್ಲಿಂ ಜಮಾತ್ ಸದಸ್ಯರಾದ ಅಬ್ಲುಲ್ ರಹ್ಮಾನ್ ಮೊಗರ್ಪನೆ, ಸಿ.ಪಿ. ಅಬೂಬಕರ್ ಮದನಿ ಚೆನ್ನಾವರ ಹಸನ್ ಸಖಾಫಿ ಬೆಳ್ಳಾರೆ, ಇಲ್ಯಾಸ್ ಮದನಿ ಖತೀಬ್ ಪಾಲ್ತಾಡು, ದಕ್ಷಿಣ ಕನ್ನಡ ಜಿಲ್ಲಾ ವಕ್ ಬೋರ್ಡ್ ಸದಸ್ಯರಾದ ಇಸ್ಮಾಯಿಲ್ ಕಾನಾವು, ಮಹಮ್ಮದ್ ರಿಯಾಝ್ ಎ.ಪಿ. ಚೆನ್ನಾವರ (ಬೆಂಗಳೂರು) ಮತ್ತು ಚೆನ್ನಾವರ ಜಮಾತ್ ಕಮಿಟಿ ಸದಸ್ಯರಾದ ಜಮಾಲುದ್ದಿನ್ ಸಿ.ವೈ, ಅಬ್ದುಲ್ ರಹಿಮಾನ್ ಪಾಲ್ತಾಡು, ಹನೀಫ್ ಇಂದ್ರಾಜೆ ,ಮಹಮ್ಮದ್ ಶರೀಫ್ ಕುಂಡಡ್ಕ ಉಪಸ್ಥಿತರಿದ್ದರು.

ಮಹಮ್ಮದ್ ಅಲಿ ಸಖಾಫಿ ಸ್ವಾಗತಿಸಿ ಅಬ್ದುಲ್ ಅಝೀಝ್ ಮುಸ್ಲಿಯಾರ್ ವಂದಿಸಿದರು

Leave A Reply