ಮದುವೆಯಾಗಿ ಎಂಟು ವರ್ಷಗಳಾದರೂ ಒಂದು ಬಾರಿಯೂ ರೋಮ್ಯಾಂಟಿಕ್ ಆಗಿ ಪ್ರಪೋಸ್ ಮಾಡದ ಗಂಡ | ಈ ಕಾರಣಕ್ಕಾಗಿ ಪತ್ನಿ ಕೈಗೊಂಡ ತೀರ್ಮಾನವೇನು ಗೊತ್ತಾ??
ಯಾವುದೇ ಗಿಡವನ್ನು ನೆಟ್ಟ ಬಳಿಕ ಹಾಗೆ ಬಿಟ್ಟರೆ, ಅದು ಅಲ್ಲೇ ಬಾಡಿ ಹೋಗಿ ಸತ್ತು ಹೋಗುವುದು. ಸಂಬಂಧವು ಕೂಡ ಇದೇ ರೀತಿ. ಸಂಬಂಧಕ್ಕಾಗಿ ಹೆಚ್ಚು ಸಮಯ ನೀಡಬೇಕು. ಅದರಲ್ಲೂ ಗಂಡ-ಹೆಂಡತಿ ಸಂಬಂಧ. ತುಂಬಾ ಪ್ರಮುಖ ಸಂಬಂಧಗಳಲ್ಲೊಂದಾಗಿದೆ. ಒಂದು ಸಂಸಾರ ಸುಸೂತ್ರವಾಗಿ ನಡೆಯಬೇಕೆಂದರೆ ಅಲ್ಲಿ ಪತಿ-ಪತ್ನಿಯರಿಬ್ಬರ ಏಕ ಭಾವವೂ ಅಗತ್ಯ. ಮೊದಲು ಇಬ್ಬರೂ ನಾನು- ನಾನೆಂಬ ಅಹಂಕಾರವನ್ನು ತೊರೆದಿರಬೇಕು. ಗಂಡ-ಹೆಂಡತಿಯ ಮಧ್ಯೆ ಒಂದೂ ರಹಸ್ಯ ವಿಚಾರವುಳಿದಿಲ್ಲದಿದ್ದರೆ ಮಾತ್ರ ಅದು ಸುಖೀ ಸಂಸಾರವಾಗಿರಲು ಸಾಧ್ಯ.
ಗಂಡ-ಹೆಂಡತಿ ಅಂದ್ರೆ ಒಬ್ಬರಿಗೆ ಮತ್ತೊಬ್ಬರು ಸೋಲುವುದು ಎಂದರ್ಥ. ಎಷ್ಟೇ ದೊಡ್ಡ ಜಗಳಗಳಿದ್ರೂ ಒಂದು Sorry ಅನ್ನೋ ಪದ ಎಲ್ಲವನ್ನು ಸಮಸ್ಯೆಯನ್ನು ಶಮನ ಮಾಡುತ್ತೆ. ಆದ್ರೆ ಈ ಒಂದು Sorry ಮೊದಲು ಯಾರು ಹೇಳಬೇಕು ಅನ್ನೋದು ಪ್ರಶ್ನೆ. ಬದುಕಿನ ಬಂಡಿ ಸಾಗಬೇಕಾದ್ರೆ, ಇಬ್ಬರಲ್ಲಿ ಒಬ್ಬರು ಕ್ಷಮೆ ಕೇಳಲೇಬೇಕು. ಆದ್ರೂ ಒಮ್ಮೊಮ್ಮೆ ಸಣ್ಣ ಸಣ್ಣ ವಿಷಯಗಳಿಗೆ ಗಂಡ-ಹೆಂಡತಿ ನಡುವೆ ಮನಸ್ತಾಪ ಉಂಟಾಗಿ ವಿಚ್ಛೇದನ ಸಹ ಪಡೆದುಕೊಳ್ಳುತ್ತಾರೆ. ಇಲ್ಲೊಬ್ಬ ಮಹಿಳೆ ಕಳೆದ ಎಂಟು ವರ್ಷದಲ್ಲಿ ಪತಿ ಒಮ್ಮೆಯೂ ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಿಲ್ಲ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾಳೆ. ಇದರ ಜೊತೆಗೆ ಪತಿಯ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದಾಳೆ.
26 ವರ್ಷದ ಗೆರ್ಟ್ರೂಡ್ ಎನ್ಗೊಮಾ ಮತ್ತು 28 ವರ್ಷದ ಹರ್ಬರ್ಟ್ ಸಲಾಲಿಕಿ ಕಳೆದ 10 ವರ್ಷಗಳಿಂದ ರಿಲೇಶನ್ ಶಿಪ್ ನಲ್ಲಿದ್ದಾರೆ. ದಂಪತಿಗೆ ಒಂದು ಮಗು ಸಹ ಇದೆ. ರಿಲೇಶನ್ ಶಿಪ್ ಆರಂಭದಲ್ಲಿ ಹರ್ಬರ್ಟ್ ನೀಡಿದ ಎಲ್ಲ ಮಾತುಗಳನ್ನು ಮರೆಯುತ್ತಿದ್ದಾನೆ. ಮಗುವಿನ ಜವಾಬ್ದಾರಿ ಸಹ ತೆಗೆದುಕೊಳ್ಳುತ್ತಿಲ್ಲ. ಮಗುವಿನ ಲಾಲನೆ-ಪಾಲನೆಯ ವಿಷಯವಾಗಿ ಇಬ್ಬರ ಮಧ್ಯೆ ಬಿರುಕು ಮೂಡಿದೆ.
ಜವಾಬ್ದಾರಿಗಳು ಹೆಚ್ಚಾದ ನಂತರ ಹರ್ಬರ್ಟ್ ತನ್ನ ಕರ್ತವ್ಯಗಳಿಂದ ಹಿಂದೆ ಸರಿಯುತ್ತಿದ್ದಾನೆ. ಸಂಬಂಧದ ಬಗ್ಗೆ ಮೊದಲಿಗೆ ತೋರಿಸುತ್ತಿದ್ದ ಬದ್ಧತೆ ಸಹ ಇಲ್ಲ. ಮಾತು ತಪ್ಪಿದ ಹಿನ್ನೆಲೆ ಮಹಿಳೆ ನ್ಯಾಯಾಲಯದ ಮೊರೆ ಹೋಗಿದ್ದಾಳೆ. ದಶಕಗಳಾದರೂ ಒಮ್ಮೆಯೂ ಹರ್ಬರ್ಟ್ ಪ್ರಪೋಸ್ ಮಾಡಿಲ್ಲ. ಆತ ನನ್ನನ್ನು ಮೆಚ್ಚಿಸುವಲ್ಲಿ ಸಹ ವಿಫಲವಾಗಿದ್ದಾನೆ ಎಂದು ಎನ್ಗೊಮಾ ಆರೋಪಿಸಿದ್ದಾಳೆ.
ಈ ಕುರಿತು ಸ್ಥಳೀಯ ಮಾಧ್ಯಮಗಳ ಕುರಿತು ಮಾತನಾಡಿರುವ ಎನ್ಗೊಮಾ, ಒಂದು ಮಗುವಿನ ತಂದೆಯಾದ್ರೂ ಹರ್ಬರ್ಟ್ ಗೆ ಯಾವುದೇ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಿಲ್ಲ. ನಮ್ಮ ಸಂಬಂಧವನ್ನು ಸಹ ಆತ ಗಂಭೀರವಾಗಿ ಪರಿಗಣಿಸದೇ, ಎಲ್ಲ ವಿಷಯಗಳನ್ನು ಹಗುರವಾಗಿ ತೆಗೆದುಕೊಳ್ಳುತ್ತಿದ್ದಾನೆ. ಮದುವೆಯಾಗುವ ಸಂದರ್ಭದಲ್ಲಿ ಆತನಿಗೆ ವರದಕ್ಷಿಣೆ ಸಹ ನೀಡಲಾಗಿತ್ತು. ವರದಕ್ಷಿಣೆ ಪಡೆದ್ರೂ ಮದುವೆ ದಿನ ಆತ ಉಂಗುರು ಸಹ ತಂದಿರಲಿಲ್ಲ ಎಂದು ಹೇಳಿದ್ದಾಳೆ.
ಸದ್ಯ ನಮಗೆ ಒಂದು ಮಗು ಇದೆ. ಆತ ಯಾವುದೇ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಿಲ್ಲ. ನಮ್ಮಿಬ್ಬರ ಮುಂದಿನ ಭವಿಷ್ಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದೇನೆ. ಈಗಲೇ ಒಂದು ತೀರ್ಮಾನ ತೆಗೆದುಕೊಳ್ಳುವುದು ಇಬ್ಬರಿಗೂ ಸೂಕ್ತ ಎಂದು ಎನ್ಗೊಮಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.