Viral Video: ನಾಯಿಯ ಕಿವಿ ಹಿಂಡುತ್ತಿದ್ದ ವ್ಯಕ್ತಿಯಿಂದ ನಾಯಿಯನ್ನು ರಕ್ಷಿಸಲು ಧಾವಿಸಿದ ಹಸು | ಕೋಪಗೊಂಡ ಹಸುವಿನ ರಿಯಾಕ್ಷನ್ ಹೇಗಿತ್ತು ನೋಡಿ !

Share the Article

ನಾಯಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ನೋಡಿದ ಹಸು ಕೋಪಗೊಂಡು ಏನು ಮಾಡಿದೆ ಎಂದು ವಿಡಿಯೋದಲ್ಲೆ ನೋಡಿ ತಿಳಿಯಿರಿ.
ವ್ಯಕ್ತಿಯೊಬ್ಬ ನಾಯಿಗೆ ಕಿರುಕುಳ ನೀಡುತ್ತಿರುವ ದೃಶ್ಯ ಇಲ್ಲಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆತ ನಾಯಿಯ ಕಿವಿಗಳನ್ನು ಹಿಂಡುತ್ತಿದ್ದ. ಬಹುಶಃ ಅದು ಆತನ ಸಾಕು ನಾಯಿ ಅನ್ನಿಸುತ್ತಿದೆ. ಆ ದೃಶ್ಯವನ್ನು ನೋಡಿದ ಹಸುವೊಂದು ಕೋಪಗೊಂಡು ಅಸಹಾಯಕ ನಾಯಿಯ ರಕ್ಷಣೆಗೆ ಧಾವಿಸಿ ಬಂದಿದೆ. ಓಡಿ ನುಗ್ಗಿ ಬಂದ ಹಸುವು ತನ್ನ ಕೋಡಿನಿಂದ ವ್ಯಕ್ತಿಯನ್ನು ನೆಲಕ್ಕೆ ಬೀಳಿಸಿ ತಿವಿದು ಹಾಕಿದೆ. ಹಾಗೆ ಇನ್ನೊಂದು ಪ್ರಾಣಿಯ ರಕ್ಷಣೆಗೆ ಧಾವಿಸಿ ಬಂದ ವಿಡಿಯೊ ಇದೀಗ ಫುಲ್ ವೈರಲ್ ಆಗಿದೆ.

ನಾಯಿಗೆ ವ್ಯಕ್ತಿ ಕಿರುಕುಳ ನೀಡುತ್ತಿದ್ದಂತೆಯೇ ಜೋರಾಗಿ ಕಿರುಚುತ್ತಿತ್ತು, ನೋವು ಸಹಿಸಲಾಗದೇ ಒದ್ದಾಡುತ್ತಿತ್ತು. ಅದನ್ನು ನೋಡಿದ ಹಸು ಕೋಪಗೊಂಡು ಕಿರುಕುಳ ನೀಡುತ್ತಿದ್ದ ವ್ಯಕ್ತಿಗೆ ಗುದ್ದಿದೆ. ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್ ಆಗಿದೆ.

ವಿಡಿಯೊದಲ್ಲಿ ಗಮನಿಸುವಂತೆ ವ್ಯಕ್ತಿ ನಾಯಿಗೆ ಕಿರುಕುಳ ಕೊಡುತ್ತಿರುವುದನ್ನು ನೋಡಿ ಹಸು ವ್ಯಗ್ರಗೊಂಡು ಆತನ ಮೇಲೆ ಸವಾರಿ ಮಾಡಿದೆ. ವ್ಯಕ್ತಿ ನೆಲಕ್ಕೆ ಉರುಳಿ ಬಿದ್ದಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದೃಶ್ಯವನ್ನು ಭಾರತೀಯ ಅರಣ್ಯ ಅಧಿಕಾರಿ ಸುಸಂತಾ ನಂದಾ ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಕರ್ಮ ಎಂದು ಶೀರ್ಷಿಕೆ ನೀಡುವ ಮೂಲಕ ವಿಡಿಯೊ ಪೋಸ್ಟ್ ಮಾಡಿದ್ದಾರೆ.

ವಿಡಿಯೊ ಫುಲ್ ವೈರಲ್ ಆಗುತ್ತಿದ್ದಂತೆಯೇ ಸುಮಾರು 1.2 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳು ಲಭ್ಯವಾಗಿವೆ. ಸುಮಾರು 3,000 ರೀಟೀಟ್​ಗಳನ್ನು ಸಂಗ್ರಹಿಸಿದೆ. ಮೂಕ ಪ್ರಾಣಿಯಾಗಿದ್ದರೂ ಇನ್ನೊಂದು ಅಸಹಾಯಕ ಪ್ರಾಣಿಯ ಭಾವನೆಗಳು ಅರ್ಥವಾಗಿ, ಆ ನಾಯಿಯ ನೋವಿಗೆ ಸ್ಪಂದಿಸಿದ ಹಸುವಿನ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂಬಂಧ ವ್ಯಕ್ತಿ ಒಬ್ಬರು ಬರೆದ ಈ ಪೋಸ್ಟ್ ಗಮನ ಸೆಳೆಯುತ್ತಿದೆ.

An animal understood another animal pain.. when people standing around can’t do anything..

— Sharanbasav M Mannapur (@MannapurM)

https://twitter.com/susantananda3/status/1454788415396859909?s=20
Leave A Reply