ಸಿಂದಗಿ ಉಪಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಐತಿಹಾಸಿಕ ಗೆಲುವಿನೊಂದಿಗೆ ಅರಳಿದ ಕಮಲ!!
ತೀರ್ವ ಪೈಪೋಟಿ ನೀಡಿದ್ದ ಜೆಡಿಎಸ್ ಗೆ ಭಾರೀ ಹಿನ್ನಡೆ
ವಿಜಯಪುರ: ಸಿಂದಗಿ ಅಸೆಂಬ್ಲಿ ಉಪಚುನಾವಣೆಯಲ್ಲಿಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 31088 ಮತಗಳ ಭಾರೀ ಅಂತರದಿಂದ ಐತಿಹಾಸಿಕ ವಿಜಯ ಸಾಧಿಸಿದ್ದಾರೆ.
ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ.36 ವರ್ಷದ ರಮೇಶ್ ಭೂಸನೂರ ಅವರ ಪರ ಕಾರ್ಯಕರ್ತರು ಘೋಷಣೆ ಕೂಗಿ, ಜಯಕಾರ ಹಾಕುತ್ತಿದ್ದಾರೆ. ತೀವ್ರ ಪೈಪೋಟಿ ನೀಡಿದ್ದ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಠೇವಣಿಯನ್ನೂ ವಾಪಸ್ ಗಳಿಸದೆ, ಸೋಲನ್ನೊಪ್ಪಿದ್ದಾರೆ. ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಫಲಿತಾಂಶದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ಅಭ್ಯರ್ಥಿ ರಮೇಶ್ ಭೂಸನೂರ ಸಮಾಧಾನಕರ ಅಂತರದಲ್ಲಿ ಗೆದ್ದಿದ್ದಾರೆ.
ಕರ್ನಾಟಕ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 30 ರಂದು ಉಪಚುನಾವಣೆ ನಡೆದಿತ್ತು.ನಿರಂತರವಾಗಿ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ರಮೇಶ ಭೂಸನೂರ ಅವರು ಪ್ರತಿ ಹಂತದ ಮತ ಎಣಿಕೆಯಲ್ಲೂ ಮತ ಅಂತರವನ್ನು ಹಿಗ್ಗಿಸಿಕೊಳ್ಳುತ್ತಾ ಮುನ್ನಡೆದರು. ಬಿಜೆಪಿಯ ರಮೇಶ ಭೂಸನೂರ 93380 ಮತಗಳನ್ನು ಪಡೆದರೆ, ಕಾಂಗ್ರೆಸ್ ನ ಅಶೋಕ ಮನಗೂಳಿ 62292 ಮತಗಳನ್ನು ಪಡೆದರು. ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿಗೆ ಅವರು ಕೇವಲ 4321 ಮತಗಳನ್ನಷ್ಟೇ ಪಡೆದರು.
ಒಟ್ಟಿನಲ್ಲಿ ಕೇಂದ್ರ ರಾಜ್ಯದಲ್ಲಿ ಬಿಜೆಪಿ ಪಾಳಯ ತನ್ನ ಭದ್ರಕೋಟೆಯನ್ನು ತಯಾರಿಸಿದ್ದು ಇನ್ನು ಬಿಜೆಪಿಗೆ ಸೋಲಿಲ್ಲ ಎಂಬ ಮಾತು ಸಾರ್ವಜನಿಕವಾಗಿ ಕೇಳಿಬರುತ್ತಿದೆ.