ಮಂಗಳೂರು: 24 ಪ್ರಕರಣಗಳಲ್ಲಿ ಬೇಕಾಗಿದ್ದ 7 ಮಂದಿ ದರೋಡೆಕೋರರ ಬಂಧನ

Share the Article

ಮಂಗಳೂರು : ಸರ ಕಳ್ಳತನ,ದರೋಡೆ, ದ್ವಿಚಕ್ರ ವಾಹನ ಕಳವು ಹಾಗೂ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸೇರಿದಂತೆ 24 ಪ್ರಕರಣಗಳಲ್ಲಿ ಭಾಗಿಯಾದ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು, ಚೊಕ್ಕಬೆಟ್ಟುವಿನ ಅರ್ಷದ್ (42) ಪಂಜಿಮೊಗರು ನಿವಾಸಿ ಸಫ್ವಾನ್ (29), ಕಾವೂರಿನ ಮಹಮ್ಮದ್ ತೌಸಿಫ್ (30), ಶಾಂತಿನಗರದ ಅಬ್ದುಲ್ ಖಾದರ್ ಸಿನಾನ್ (30), ಕುಂದಾಪುರದ ಕುಂಬಾಶಿಯ ಮೊಹಮ್ಮದ್ ರೆಹಮಾನ್ (23) ಕಾವೂರು ನಿವಾಸಿ ಅಬ್ದುಲ್ ಇಶಾಮ್ (26) ಮಲ್ಲೂರಿನ ಮಹಮ್ಮದ್ ಫಜಲ್ (32) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 10 ಲಕ್ಷ ಮೌಲ್ಯದ 210 ಗ್ರಾಂ ತೂಕದ ಚಿನ್ನದ ಸರ, ಕರಿಮಣಿ ಸರಗಳನ್ನು ಹಾಗೂ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು ವಿವಿಧ ಕಡೆಗಳಲ್ಲಿ ಕಳ್ಳತನ ಮಾಡಿರುವ ಚಿನ್ನಾಭರಣಗಳನ್ನು ಹಾಗೂ 5 ಕ್ಕೂ ಹೆಚ್ಚು ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲು ಬಾಕಿಯಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ

Leave A Reply