ಎಟಿಎಂ ನಿಂದ ಹಣ ಹಿಂಪಡೆಯುವ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆ ಜಾರಿಗೆ ತಂದ ಎಸ್ ಬಿಐ | ಏನಿದು ಹೊಸ ವಿಧಾನ?? ಇಲ್ಲಿದೆ ಮಾಹಿತಿ
ನವದೆಹಲಿ: ಬ್ಯಾಂಕ್ ಗೆ ಸಂಬಂಧ ಪಟ್ಟಂತೆ ಗ್ರಾಹಕರಿಗೆ ಅದೆಷ್ಟೋ ವಂಚಕರಿಂದ ಮೋಸ ನಡೆಯುತ್ತಲೇ ಇದೆ. ಈ ಮೋಸದ ಜಾಲವನ್ನು ತಪ್ಪಿಸಲು ಭಾರತದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಲಕ್ಷಾಂತರ ಗ್ರಾಹಕರಿಗೆ ಬ್ಯಾಂಕಿಂಗ್ ಅನ್ನು ಹೆಚ್ಚು ಅನುಕೂಲಕರವಾಗಿಸುವ ಉದ್ದೇಶದಿಂದ ಎಟಿಎಂನಿಂದ ಹಣವನ್ನು ಹಿಂಪಡೆಯುವ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಯನ್ನು ಪರಿಚಯಿಸಿದೆ.
ಇನ್ನು ಮುಂದೆ ಎಟಿಎಂಗಳಲ್ಲಿ ಹಣ ಪಡೆಯಲು ಹೊಸ ವಿಧಾನವನ್ನು ಜಾರಿ ಮಾಡಲಾಗಿದೆ.ಬದಲಾವಣೆಯ ಭಾಗವಾಗಿ, ಎಸ್ಬಿಐ ಒಟಿಪಿ ಆಧಾರಿತ ಎಟಿಎಂ ನಗದು ಹಿಂಪಡೆಯುವಿಕೆಯನ್ನು ತಂದಿದೆ, ಇದು ವಂಚನೆಯನ್ನು ತಡೆಯಲು ಸಹಾಯ ಮಾಡುತ್ತದೆ ಎನ್ನಲಾಗಿದೆ.ಇನ್ನು ಮುಂದೆ ಹಣ ಹಿಂಪಡೆಯುವಾಗ ಒಟಿಪಿ ನಮೂದಿಸಿದ ನಂತರವೇ ನೀವು ಹಣವನ್ನು ಪಡೆಯಬಹುದು.
‘ಎಸ್ಬಿಐ ಎಟಿಎಂಗಳಲ್ಲಿ ವಹಿವಾಟುಗಳಿಗಾಗಿ ನಮ್ಮ OTP ಆಧಾರಿತ ನಗದು ಹಿಂಪಡೆಯುವ ವ್ಯವಸ್ಥೆಯು ವಂಚಕರ ವಿರುದ್ಧ ಹೋರಾಡಲು ಸಹಕಾರಿಯಾಗಿದೆ. ನಿಮ್ಮನ್ನು ವಂಚನೆಗಳಿಂದ ರಕ್ಷಿಸುವುದು ಯಾವಾಗಲೂ ನಮ್ಮ ಪ್ರಮುಖ ಆದ್ಯತೆಯಾಗಿದೆ’ ಎಂದು SBI ಟ್ವೀಟ್ನಲ್ಲಿ ತಿಳಿಸಿದೆ. 2020 ರಲ್ಲಿ, ಮೋಸದ ವಹಿವಾಟುಗಳನ್ನು ಕಡಿಮೆ ಮಾಡಲು ಎಸ್ಬಿಐ ಒಟಿಪಿ-ಮಾನ್ಯೀಕರಿಸಿದ ಎಟಿಎಂ ವಹಿವಾಟನ್ನು ಪರಿಚಯಿಸಿತು ಎಂಬುದನ್ನು ಸ್ಮರಿಸಬಹುದು.