ಕರಾವಳಿಯಲ್ಲಿ ಗೋವುಗಳಿಗೆ ಚರ್ಮ ಗಂಟು ರೋಗ ,ಹೈನುಗಾರರಿಗೆ ಆತಂಕ
ಕರಾವಳಿಯಲ್ಲಿ ಕಳೆದೊಂದು ವರ್ಷದಿಂದ ಗೋವುಗಳಿಗೆ ಬಾದಿಸುತ್ತಿರುವ ಚರ್ಮಗಂಟು ರೋಗ ಹೈನುಗಾರನ್ನು ಕಂಗೆಡಿಸಿದೆ. ಹೈನುಗಾರಿಕೆಯಿಂದ ಅದಾಯ ಪಡೆಯುತ್ತಿದ್ದ ಕುಟುಂಬಗಳಿಗೆ ಆತಂಕ ಎದುರಾಗಿದೆ.
ಪಶುವೈದ್ಯಾದಿಕಾರಿಗಳ ಪ್ರಕಾರ ಬಯಲು ಸೀಮೆ, ಮಲೆನಾಡಿನಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದ್ದ ಈ ಖಾಯಿಲೆ ಕರಾವಳಿಗೆ ಇತ್ತೀಚಿನ ವರ್ಷಗಳಲ್ಲಿ ವಕ್ಕರಿಸಿದೆ. ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಯನ್ನೆ ನಂಬಿ ಬದುಕುವ ಕುಟುಂಬಕ್ಕೆ ಈ ಖಾಯಿಲೆಯಿಂದ ಬಹಲಷ್ಟು ನಷ್ಟವುಂಟಾಗುತ್ತಿದೆ.
ಏನಿದು ಚರ್ಮ ಗಂಟು ರೋಗ
ಆರಂಭದಲ್ಲಿ ಗೋವಿನ ಮೈಯಲ್ಲಿ ಒಂದರೆಡು ಕಡೆ ಚರ್ಮದಲ್ಲಿ ಗಂಟು ರೂಪದಲ್ಲಿ ಕಾಣಿಸಕೊಳ್ಳುವ ಖಾಯಿಲೆ ಕೆಲವೆ ದಿನಗಳಲ್ಲಿ ಮೈಯೆಲ್ಲ ಆವರಿಸಿಕೊಳ್ಳುತ್ತದೆ. ಬಳಿಕ ಗಂಟುಗಳು ಒಡೆದು ಕಿವು ಸೋರುತ್ತದೆ. ಖಾಯಿಲೆಯ ಆರಂಭದಲ್ಲಿ ಚಿಕಿತ್ಸೆ ನೀಡದರೆ ವಾರದೊಳಗೆ ವಾಸಿಯಾಗುತ್ತದೆ. ಇಲ್ಲವಾದಲ್ಲಿ ಸುಮಾರು ಆರು ತಿಂಗಳುಗಲೇ ತಗಲುತ್ತದೆ. ಇದೊಂದು ನೊಣಗಳಿಂದ ಹರಡುವ ಖಾಯಿಲೆಯಾಗಿರುವುದರಿಂದ ಹಟ್ಟಿಯಲ್ಲಿ ಒಟ್ಟಿಗೆ ಕಟ್ಟಿ ಹಾಕಿರುವ ಪಕ್ಕದ ಗೋವುಗಳಿಗೆ ಹರಡುವ ಸಾಧ್ಯತೆಯಿದೆ. ಹಾಗಾಗಿ ಒಂದೊಮ್ಮೆ ಒಂದು ಗೋವಿಗೆ ಖಾಯಿಲೆ ವಕ್ಕರಿಸಿದೆ ಜೊತೆಗಿರುವ ಎಲ್ಲಾ ಗೋವುಗಳಿಗೆ ಚಿಕಿತ್ಸೆ ನೀಡಬೇಕಾಗುತ್ತದೆ.
ನಿರ್ದಿಷ್ಟ ಔಷಧವಿಲ್ಲ
ಈ ಖಾಯಿಲೆಗೆ ನಿರ್ದಿಷ್ಟವಾದ ಔಷಧ ಇನ್ನೂ ಕಂಡುಹಿಡಿದಿಲ್ಲ. ಸದ್ಯ ಕುರಿಗಳಿಗೆ ನೀಡುವ ರೋಗನಿರೋದಕ ಚುಚ್ಚು ಮದ್ದನ್ನು ನೀಡಲಾಗುತ್ತದೆ. ಸದ್ಯ ಕರಾವಳಿಯಲ್ಲಿ ಈ ಚುಚ್ಚು ಮದ್ದಿನ ದಾಸ್ತಾನು ಕಡಿಮೆಯಿದೆ. ಈ ಚುಚ್ಚು ಮದ್ದು ನೀಡುವುದರಿಂದ ಹಾಲು ನೀಡುವ ಗೋವುಗಳ ಹಾಲಿನ ಪ್ರಮಾಣದಲ್ಲಿ ಏರುಪೇರಾಗುತದೆ. ಅಲ್ಲದೆ ಗರ್ಭ ಕೋಶಕ್ಕೆ ತೊಂದರೆಯಾಗುತ್ತದೆ ಎನ್ನುತ್ತಾರೆ ಪಶು ವೈದ್ಯಾಧಿಕಾರಿಗಳು.
ಆರ್ಯವೇದ ಚಿಕಿತ್ಸೆ
10 ವೀಳ್ಯದೆಲೆ, 10 ಕಾಳು ಮೆಣಸು, ಉಪ್ಪು 10 ಗ್ರಾಂ, ಬೆಲ್ಲ 50 ಗ್ರಾಂ ಇವುಗಳನ್ನು ರುಬ್ಬಿ ದಿನಕ್ಕೆ 2 ಭಾರಿ ರೋಗ ಬಾದಿತ ಗೋವುಗಳಿಗೆ ನೀಡುವುದರಿಂದ ತಿನ್ನಿಸಬೇಕು, ಅಲ್ಲದೆ ಅರಶಿಣ 20ಗ್ರಾಂ, ಮೆಹಂದಿ ಸೊಪ್ಪು 1 ಹಿಡಿ, ಬೇವಿನ ಸೊಪ್ಪು 1 ಹಿಡಿ, ತುಳಸಿ ಎಲೆ 10 ಹಿಡಿ, ಬೆಳ್ಳುಳ್ಳಿ 10 ಎಸಳು ಇವುಗಳನ್ನು ಕೊಬ್ಬರಿ ಎಣ್ಣೆಯಲ್ಲಿ ಬೇಯಿಸಿ ತಣ್ಣಗೆ ಮಾಡಿ ಗಾಯಗಳಿಗೆ ದಿನಕ್ಕೆ ಮೂರು ಭಾರಿ ಹಚ್ಚುವುದು. ಇಂತಹ ಆರ್ಯವೇದ ಚಿಕಿತ್ಸೆ ಬಗ್ಗೆ ಪಶುವೈದ್ಯಧಾಕಾರಿಗಳು ಸಲಹೆ ನೀಡುತ್ತಾರೆ.
ಚರ್ಮ ಗಂಟು ರೋಗ ಮಾರಣಾಂತಿಕ ಖಾಯಿಲೆಯಲ್ಲ , ರೋಗದ ಆರಂಭದಲ್ಲಿ ಚುಚ್ಚುಮದ್ದು ಅಥವಾ ಆರ್ಯವೇದ ಚಿಕಿತ್ಸೆ ನೀಡಿದರೆ ವಾರದೊಳಗೆ ಗುಣಪಡಿಸಬಹುದು. ರೋಗ ಭಾದಿತ ಗೋವುನಲ್ಲಿ ಸ್ಚಚ್ಚತೆಗೆ ಆಧ್ಯತೆ ನೀಡಬೇಕು. ಮತ್ತು ಇತರೇ ಗೋವುಗಳಿಂದ ಅಂತರದಲ್ಲಿಟ್ಟುಕೊಳ್ಳಬೇಕು. ಬಯಲು ಸೀಮೆ, ಮಲೆನಾಡು ಭಾಗದಲ್ಲಿ ಇಂತಹ ಖಾಯಿಲೆಯಿದೆ. ಗೋವುಗಳನ್ನು ಆ ಭಾಗದಿಂದ ಕರಾವಳಿ ಭಾಗದ ಮಂದಿ ವಹಿವಾಟು ಮಾಡುವಾಗ ಹರಡಿರಬಹುದು.
-ಡಾ.ಅಜಿತ್, ಪಶುವೈದ್ಯಾಧಿಕಾರಿ ಕಡಬ
ಚರ್ಮ ಗಂಟು ರೋಗ ಇದೀಗ ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಕಡಬ ತಾಲೂಕಿನಾದ್ಯಂತ ಹಲವೆಡೆ ಈ ರೋಗ ಹರಡಿರುವ ಬಗ್ಗೆ ತಿಳಿದುಬಂದಿದೆ. ಒಂದೊಮ್ಮೆ ರೋಗ ಅಂಟಿಕೊಂಡರೆ ಮನೆಯಲ್ಲಿ ಸಾಕುವ ಎಲ್ಲಾ ಗೋವುಗಳಿಗೆ ಹರಡುತ್ತದೆ. ಇದಕ್ಕೆ ನಿರ್ದಿಷ್ಟ ಔಷಧವನ್ನು ಕಂಡುಹಿಡಿಯಲು ಸಂಬಂದ ಪಟ್ಟ ವರು ಪ್ರಯತ್ನಿಸಬೇಕು. ರೋಗ ಹರಡದಂತೆ ಮುಂಜಾಗೃತವಾಗಿ ಗೋವುಗಳಿಗೆ ಸಾಮೂಹಿಕ ಚುಚ್ಚು ಮದ್ದನ್ನು ಉಚಿತವಾಗಿ ನೀಡಲು ಸರ್ಕಾರ ಮುಂದಾಗಬೇಕು.
-ಶಿವಣ್ಣ ಗೌಡ ,ಹೈನುಗಾರ