ಪದವೀಧರ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಾಕಾಶ!!! ನ್ಯಾಯಾಲಯದಲ್ಲಿ ಟೈಪಿಸ್ಟ್ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನ
ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಬಯಸುವ ಪದವೀಧರ ಉದ್ಯೋಗಾಕಾಂಕ್ಷಿಗಳ ಆಯ್ಕೆಗೆ ಹೈ ಕೋರ್ಟ್ ಆದೇಶ ಹೊರಡಿಸಿದ್ದು, ನ್ಯಾಯಾಲಯದಲ್ಲಿ 150 ಟೈಪಿಸ್ಟ್ ಹುದ್ದೆಗಳ ಭರ್ತಿಗೆ ಸೂಚಿಸಿದೆ.
ಅಭ್ಯರ್ಥಿಗಳು ಸೈನ್ಸ್, ಕಾಮರ್ಸ್, ಆರ್ಟ್ಸ್, ಬಿಸಿನೆಸ್ ಮ್ಯಾನೇಜ್ಮೆಂಟ್ ಅಥವಾ ಕಂಪ್ಯೂಟರ್ ಅಪ್ಲಿಕೇಶನ್ ವಿಷಯದಲ್ಲಿ ಪದವಿ ಜೊತೆಗೆ ಕನ್ನಡ ಇಂಗ್ಲಿಷ್ ವಿಷಯದಲ್ಲಿ ಟೈಪಿಂಗ್ ಸೀನಿಯರ್ ಗ್ರೇಡ್ ಪಾಸ್ ಹಾಗೂ ಅಂಗಿಕೃತ ವಿಶ್ವವಿದ್ಯಾನಿಲಯಗಳಿಂದ ಪದವಿ ಪಡೆದಿರಬೇಕು.
ಈ ಹುದ್ದೆಗೆ ನೇಮಕಾತಿ ಬಯಸುವ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು ಅರ್ಜಿ ಶುಲ್ಕ ರೂಪಾಯಿ 350 ಹಾಗೂ ದೈಹಿಕ ಅಂಗವಿಕಲ ಅಭ್ಯರ್ಥಿಗಳಿಗೆ ರೂಪಾಯಿ 200 ಇದ್ದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದ ಯಾವುದೇ ಶಾಖೆಯಲ್ಲಿ ಹಣ ಪಾವತಿಗೆ ಅವಕಾಶವಿದೆ.
ಈ ಹುದ್ದೆಗಳಿಗೆ 25,500 ರಿಂದ 81,100 ವರೆಗೆ ವೇತನವಿದ್ದು. ಅಭ್ಯರ್ಥಿಗಳು ಕನಿಷ್ಠ 18 ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು. ಅರ್ಜಿ ಸಲ್ಲಿಸಲು ನವೆಂಬರ್ 27 ಕೊನೆಯ ದಿನವಾಗಿದ್ದು ಹಣ ಪಾವತಿಸಲು ನವೆಂಬರ್ 30 ಕೊನೆಯದಿನವಾಗಿದೆ.
ಹೆಚ್ಚಿನ ಮಾಹಿತಿಗೆ ಅಥವಾ ಅರ್ಜಿ ಸಲ್ಲಿಸಲು : https://karnatakajudiciary.kar.nic.in/recruitm