ಬ್ಯಾಂಕ್ ಕೆಲಸಗಳಿದ್ದರೆ ಇಂದೇ ಮಾಡಿಸಿಕೊಳ್ಳಿ!!ನವೆಂಬರ್ ತಿಂಗಳಿನಲ್ಲಿ ಬರೋಬ್ಬರಿ 17 ದಿನ ದೇಶಾದ್ಯಂತ ಮುಚ್ಚಿರಲಿದೆ ವಿದೇಶಿ,ಸಹಕಾರಿ ಸಹಿತ ಪ್ರಾದೇಶಿಕ ಬ್ಯಾಂಕ್

ನವೆಂಬರ್ ತಿಂಗಳಿನಲ್ಲಿ ಅತಿಹೆಚ್ಚು ದಿನ ಹಬ್ಬಗಳ ದಿನವಾಗಿದ್ದು ಈ ನಡುವೆ ಅಗತ್ಯ ಕೆಲಸಕ್ಕಾಗಿ ಬ್ಯಾಂಕ್ ಗೆ ತೆರಳಲಿರುವವರು ಇದೊಂದು ಮಾಹಿತಿಯನ್ನು ಗಮನದಲ್ಲಿಟ್ಟುಕೊಳ್ಳಿ.

 

ಈಗಾಗಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರಜೆಯನ್ನು ಮೂರು ವಿಧಾನಗಳಲ್ಲಿ ವಿಂಗಡಿಸಲಾಗಿದೆ. ಒಟ್ಟಿನಲ್ಲಿ ರಾಜ್ಯದ ಹಾಗೂ ಪ್ರದೇಶಕ್ಕನುಗುಣವಾಗಿ 17 ದಿನಗಳ ಕಾಲ ಬ್ಯಾಂಕ್ ಮುಚ್ಚಿಲ್ಪಡುತ್ತದೆ.

ಬ್ಯಾಂಕ್ ರಜೆಯ ದಿನಗಳು ಹೀಗಿವೆ:
ನವೆಂಬರ್ 1: ಕನ್ನಡ ರಾಜ್ಯೋತ್ಸವ/ಕುತ್(ಕರ್ನಾಟಕ ಹಾಗೂ ಈಂಫಾಲದ ಎಲ್ಲಾ ಬ್ಯಾಂಕ್ ಶಾಖೆಗಳು ಮುಚ್ಚಿರಲಿವೆ)

ನವೆಂಬರ್ 3: ನರಕ ಚತುರ್ದಶಿ(ಕರ್ನಾಟಕದಲ್ಲಿ ಬ್ಯಾಂಕ್‌ಗಳು ಮುಚ್ಚಿರಲಿವೆ)

ನವೆಂಬರ್ 4: ದೀಪಾವಳಿ ಅಮವಾಸ್ಯೆ (ಲಕ್ಷ್ಮೀ ಪೂಜೆ)/ದೀಪಾವಳಿ/ಕಾಳಿ ಪೂಜೆ(ಅಗರ್ತಲಾ, ಅಹಮದಾಬಾದ್, ಐಜ್ವಾಲ್, ಬೇಲಾಪುರ್, ಭೋಪಾಲ್, ಭುವನೇಶ್ವರ್, ಚಂಡೀಗಢ, ಚೆನ್ನೈ, ಡೆಹ್ರಾಡೂನ್, ಗ್ಯಾಂಗ್ಟಾಕ್, ಗುವಾಹಟಿ, ಹೈದರಾಬಾದ್, ಇಂಫಾಲ್, ಜೈಪುರ, ಜಮ್ಮು, ಕಾನ್ಪುರ್, ಕೊಚ್ಚಿ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಣಜಿ, ಪಾಟ್ನಾ, ರಾಯ್ಪುರ್ , ರಾಂಚಿ, ಶಿಲ್ಲಾಂಗ್, ಶಿಮ್ಲಾ, ಶ್ರೀನಗರ ಮತ್ತು ತಿರುವನಂತಪುರಂ ವ್ಯಾಪ್ತಿಗೊಳಪಡುವ ಬ್ಯಾಂಕ್‌ಗಳು ಮುಚ್ಚಲಿವೆ)

ನವೆಂಬರ್ 5: ದೀಪಾವಳಿ (ಬಲಿ ಪಾಡ್ಯಮಿ)/ವಿಕ್ರಮ್ ಸಂವಂತ್ ಹೊಸ ವರ್ಷದ ದಿನ/ಗೋವರ್ಧನ ಪೂಜೆ(ಅಹಮದಾಬಾದ್, ಬೇಲಾಪುರ್, ಬೆಂಗಳೂರು, ಡೆಹ್ರಾಡೂನ್, ಗ್ಯಾಂಗ್ಟಾಕ್, ಜೈಪುರ, ಕಾನ್ಪುರ್, ಲಕ್ನೋ, ಮುಂಬೈ ಮತ್ತು ನಾಗ್ಪುರ)

ನವೆಂಬರ್ 6: ಭಾಯಿ ದೂಜ್/ಚಿತ್ರಗುಪ್ತ ಜಯಂತಿ/ಲಕ್ಷ್ಮಿ ಪೂಜೆ/ದೀಪಾವಳಿ/ನಿಂಗೋಲ್ ಚಕೌಬಾ(ಗ್ಯಾಂಗ್ಟಾಕ್, ಇಂಫಾಲ್, ಕಾನ್ಪುರ್, ಲಕ್ನೋ ಹಾಗೂ ಶಿಮ್ಲಾ)

ನವೆಂಬರ್ 10: ಛತ್ ಪೂಜೆ/ಸೂರ್ಯ ಪಷ್ಟಿ ದಲಾ ಛಾತ್/ಸಯನ್ ಅರ್ಧ್ಯ(ಪಾಟ್ನಾ, ರಾಂಚಿ)

ನವೆಂಬರ್ 11: ಛತ್ ಪೂಜೆ(ಪಾಟ್ನಾ)

ನವೆಂಬರ್ 12: ವಂಗಲ ಹಬ್ಬ(ಶಿಲ್ಲಾಂಗ್)

ನವೆಂಬರ್ 19: ಗುರುನಾನಕ್ ಜಯಂತಿ/ಕಾರ್ತಿಕ ಪೂರ್ಣಿಮಾ(ಐಜ್ವಾಲ್, ಬೇಲಾಪುರ್, ಭೋಪಾಲ್, ಚಂಡೀಗಢ, ಡೆಹ್ರಾಡೂನ್, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ್, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ರಾಯ್ಪುರ್, ರಾಂಚಿ, ಶಿಮ್ಲಾ ಮತ್ತು ಶ್ರೀನಗರ)

ನವೆಂಬರ್ 22: ಕನಕದಾಸ ಜಯಂತಿ(ಕರ್ನಾಟಕ)

ನವೆಂಬರ್ 23: ಸೆಂಗ್ ಕುಟ್ಸ್ನೆಮ್(ಶಿಲ್ಲಾಂಗ್)

ಮೇಲಿನ ರಜಾದಿನಗಳ ಜೊತೆಗೆ, ತಿಂಗಳ ನಾಲ್ಕು ಭಾನುವಾರಗಳು ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರಗಳು ಈ ದಿನಾಂಕಗಳಲ್ಲಿ ಇವೆ.

ನವೆಂಬರ್ 7: ಭಾನುವಾರ

ನವೆಂಬರ್ 13: ತಿಂಗಳ ಎರಡನೇ ಶನಿವಾರ

ನವೆಂಬರ್ 14: ಭಾನುವಾರ

ನವೆಂಬರ್ 21: ಭಾನುವಾರ

ನವೆಂಬರ್ 27: ತಿಂಗಳ ನಾಲ್ಕನೇ ಶನಿವಾರ

ನವೆಂಬರ್ 28: ಭಾನುವಾರ

Leave A Reply

Your email address will not be published.