ಇನ್ಮುಂದೆ 30 ರೂಪಾಯಿಗೆ ಸಿಗಲಿದ್ಯಾ ಒಂದ್ ಕ್ವಾಟ್ರು ?! | ಸಿದ್ರಾಮು ಸೀಟಿ ರವಿ ಜಗಳದಲ್ಲಿ ಇಳೀಬೋದಾ ಮದ್ಯದ ರೇಟು ?!

ಕ್ವಾರ್ಟರ್ ಹಾಕೊಂಡ್ರು ಈ ಮಟ್ಟಿಗೆ ಕಿತ್ತಾಡಲ್ಲ ಜನ, ಅಂಥದ್ದರಲ್ಲಿ ಅತ್ತ ಕಡೆಯಿಂದ ಸೀಟಿ, ಇತ್ಕಡೆಯಿಂದ ಸಿದ್ದು ಗುದ್ದು ಜೋರಾಗಿದೆ. ಉಪಚುನಾವಣೆಯ ಗಾದಿಗಾಗಿ ನಡೆಯುತ್ತಿರುವ ಫೈಟ್ ನಲ್ಲಿ ಮೊದಲು ಸೀಟಿ ಹಾಕ್ಕೊಂಡು ಬಂದ ರವಿ ಕೈಗೆ ಸಿಕ್ಕಿದ್ದು ಶಾದಿ ಭಾಗ್ಯದ ಮ್ಯಾಟರ್.

‘ನೀವು ದೊಡ್ಡ ಜಾತ್ಯತೀತರು ಅನ್ನುತ್ತೀರಲ್ಲ ಸಿದ್ದರಾಮಯ್ಯನವರೇ, ಶಾದಿಭಾಗ್ಯವನ್ನು ಕೇವಲ ಒಂದೇ ಸಮಾಜದವರಿಗೆ ನೀಡಿದ್ದು ಏಕೆ? ಬೇರೆ ಸಮಾಜದ ಹೆಣ್ಣುಮಕ್ಕಳಿಗೂ ನೀಡಬಹುದಿತ್ತಲ್ಲವೆ? ಅದಲ್ಲದೆ ಶಾಲಾ ಮಕ್ಕಳ ಪ್ರವಾಸ ಭಾಗ್ಯದಲ್ಲಿಯೂ ಕೂಡಾ ನೀವು ಇದೇ ನಿಲುವು ಹೊಂದಿದ್ದಿರಿ. ಮಕ್ಕಳು ದೇವರಿಗೆ ಸಮಾನ, ಅವರಲ್ಲಿ ಕೂಡ ಜಾತಿಯ ವಿಷ ಬೀಜ ಬಿತ್ತಿದ್ದು ಸಿದ್ದರಾಮಯ್ಯನೇ’ ಎಂದು ಸೀಟಿ ಕಿಡಿಕಾರಿದರು.

ಆ ನಂತರ ಸಿಟಿ ರವಿ ಅವರು ಕೈಗೆತ್ತಿಕೊಂಡಿದ್ದು ಕ್ವಾರ್ಟರ್ ಅನ್ನು.
ಅಲ್ಲದೆ, ಅನ್ನಭಾಗ್ಯ ಯೋಜನೆಯಲ್ಲಿ ಕೇಂದ್ರದಿಂದ 3 ರೂಪಾಯಿಗೆ ಕೆಜಿ ಅಕ್ಕಿ ಬರುತ್ತೆ, ತಿಂಗಳಿಗೆ ಹತ್ತು ಕೆಜಿ ಅಕ್ಕಿಗೆ 30 ರೂಪಾಯಿ ಆಯ್ತು. ಆದರೆ ಒಂದು ಕ್ವಾಟರ್ ಗೆ ಆವಾಗ 55 ರೂ. ಬೆಲೆ ಇತ್ತು. ಅದನ್ನು ಏಕಾಏಕಿ 110 ರೂಪಾಯಿ ಮಾಡಿದ್ರು. ದಿನಾ ಒಂದು ಕ್ವಾಟರ್ ಅಂದ್ರೆ ತಿಂಗಳಿಗೆ ಎಷ್ಟಾಗುತ್ತೆ ಗೊತ್ತಾ ? ಇನ್ನೊಂದು ಕ್ವಾಟರ್ ಕುಡಿಯೋಕೆ ಹಣವೇ ಇರೋದಿಲ್ಲ. ಇದನ್ನೆಲ್ಲಾ ಕಿತ್ತುಕೊಂಡಿದೆ ಸಿದ್ರಾಮಯ್ಯನ ಸರ್ಕಾರ. ಮನೆ ಹಾಳು ಮಾಡೋಕೆ ಸಿದ್ದರಾಮಯ್ಯನ ಬಳಿ ಕ್ಯೂ ನಿಂತು ಕೆಳ್ಕೋಬೇಕು. ಮನೆಹಾಳು ಐಡಿಯಾ ಸಿದ್ದು ಬಳಿ ಸದಾ ಸಿದ್ಧ ಇರೋ ಸೂತ್ರ ‘ ಎಂಬಿತ್ಯದಿಯಾಗಿ ಕಿಡಿ ಉದುರಿದಿದ್ದರು ಸೀಟಿ ರವಿಯವರು.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

ಇತ್ತ ಲೋಕಲ್ ಸಿದ್ದಪ್ಪ ಒಂದು ಕ್ವಾರ್ಟರ್ ಹೊಡೆದು ಅದ್ಯಾಕೋ ಡಲ್ಲಾಗಿ ಕುಂತಿದ್ದ. ಅಷ್ಟರಲ್ಲಿ ಸೀಟಿ ರವಿ ಕ್ವಾರ್ಟರ್ ವಿಷ್ಯ ಎತ್ತಿದ್ದಂತೆ ನೆಟ್ಟಗೆ ನಿಂತು ಆತಂದು, ಕಿವಿ. ಯಲಾ ಔದಲ್ಲ, ಅಕ್ಕಿ ಮೂರಕ್ಕೆ ಕೊಟ್ರೇನು, ಕ್ವಾರ್ಟರ್ ನೂರಕ್ಕೂ ಸಿಗುವಲ್ದು. ಅವ್ನು ಹೆಚ್ಚು ಮಾಡ್ದ. ಹೋಗ್ಲಾತ್ತಾಗ್. ನಿಂಗೇನ್ ಧಾಡಿ ಮಾಡ್ ಬುಡ್ ನೋಡಾನ ಕ್ವಾರ್ಟರ್ ಗೆ 30. ನಿಂದೇ ಉಂಟಲ್ಲ ಸರ್ಕಾರ. ಆಯ್ತದಾ ನಿಂಕೈಲಿ ? ಥೂ ನಿನ್ ಜನ್ಮಕ್ಕೆ….ಅಂತ ಇಬ್ರುಗೂ ಗಂಟಲಾಳದಿಂದ ಕಫ ಬೆರೆಸಿ ಉಗ್ದು ಸೀಸೆ ಶಾಪಿನತ್ತ ನಡೆದ.

Leave a Reply

error: Content is protected !!
Scroll to Top
%d bloggers like this: