ಬೈಕಂಪಾಡಿ |ಹಿಂದೂ ಎಂದು ನಂಬಿಸಿ ಲವ್ ಜಿಹಾದ್ ಹುನ್ನಾರ, ಫೋಟೋ ತೋರಿಸಿ ಅತ್ಯಾಚಾರದ ಬೆದರಿಕೆ, ಆರೋಪಿಯ ಬಂಧನ

ಬೈಕಂಪಾಡಿಯ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಯುವಕ ತಾನು ಹಿಂದೂ ಯುವಕ ಎಂದು ನಂಬಿಸಿ ಮಂಗಳೂರಿನ ಯುವತಿಯೋರ್ವಳಿಗೆ ಲವ್ ಜಿಹಾದ್ ಹೆಸರಿನಲ್ಲಿ ಮೋಸ ಮಾಡಿದ ಪ್ರಕರಣ ಇದೀಗ ಬಯಲಾಗಿದೆ.
ಆತ ಆಕೆಯನ್ನು ಇಸ್ಲಾಂಗೆ ಮತಾಂತರವಾಗುವಂತೆ ಪೀಡಿಸಿ, ಅದ್ರಾ ಮಧ್ಯ ಇಬ್ಬರ ಜೊತೆಗಿನ ಫೋಟೋಗಳನ್ನು ತೋರಿಸಿ ಮತಾಂತರವಾಗದಿದ್ದಲ್ಲಿ ಅತ್ಯಾಚಾರವೆಸಗುವುದಾಗಿ ಬೆದರಿಕೆಯೊಡ್ದಿದ ಪ್ರಕರಣ ಬೆಳಕಿಗೆ ಬಂದಿದೆ.

 

ಆತ ಯುವತಿಯ ಜೊತೆ ಅಸಭ್ಯ ರೀತಿಯಲ್ಲಿ ವರ್ತಿಸಿ ಕಿರುಕುಳ ನೀಡುತ್ತಿರುವ ಸುದ್ದಿ ರಾಮ್ ಸೇನಾ ಕಾರ್ಯಕರ್ತರ ಗಮನಕ್ಕೆ ಬಂದಿದ್ದು ಈ ನಿಮಿತ್ತ ಹಿಂದೂ ಯುವತಿಗೆ ನ್ಯಾಯ ಕೊಡಿಸುವ ಸಲುವಾಗಿ ರಾಮ್ ಸೇನಾ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಸ್ಥಳೀಯರನ್ನು ಸಂಪರ್ಕಿಸಿದ್ದಳು. ಆಗ ಸಹಾಯಕ್ಕೆ ಧಾವಿಸಿದ  ಘಟನೆಗೆ ರಾಮ್ ಸೇನಾ ಆಕ್ರೋಶ ವ್ಯಕ್ತಪಡಿಸಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಇಬ್ರಾಹಿಮ್ ಎಂಬ ಮುಸ್ಲಿಂ ಯುವಕನ ವಿರುದ್ಧ ಪ್ರಕರಣಕ್ಕೆ ಹಠ ಹಿಡಿದು ಕೂತು ಪ್ರಕರಣ ದಾಖಲು ಮಾಡಿಸುವಲ್ಲಿ ಯಶಸ್ವಿಯಾಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಮ್ ಸೇನಾ ದ. ಕ. ಜಿಲ್ಲಾಧ್ಯಕ್ಷರಾದ ಕಿರಣ್ ಅಮೀನ್ ಉರ್ವಸ್ಟೋರ್ ಅವರು, ಜಿಲ್ಲೆಯಲ್ಲಿ ಇಂತಹ ಕೃತ್ಯಗಳು ಹೆಚ್ಚಾಗಿ ಕಂಡುಬರುತ್ತಿದ್ದು ಪೊಲೀಸ್ ಇಲಾಖೆಯು ಇದರ ವಿರುದ್ಧ ಗಮನಹರಿಸಬೇಕು, ಹಾಗೂ ಅನ್ಯಕೋಮಿನ ಯುವಕರೇ ಪದೇ ಪದೇ ಹಿಂದೂ ಸಮಾಜವನ್ನು ಕೆಣಕುವ ದುಸ್ಸಾಹಸ ಮಾಡದಿರಿ ಮುಂದೆ ಬರುವ ಎಲ್ಲಾ ಸಮಸ್ಯೆಗಳನ್ನು ನೀವೇ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರಾಮ್ ಸೇನಾ ದ. ಕ. ಜಿಲ್ಲಾ ಮುಖಂಡರುಗಳು, ಮೂಲ್ಕಿ ತಾಲ್ಲೂಕು ಮುಖಂಡರುಗಳು, ಹಾಗೂ ರಾಮ್ ಸೇನಾ ಕಾರ್ಯಕರ್ತರು ಕಾನೂನು ಪ್ರಕ್ರಿಯೆ ಮುಗಿಯುವವರೆಗೂ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಉಪಸ್ಥಿತರಿದ್ದರು.
ಸಹಕರಿಸಿದ ಬಜರಂಗದಳ ಸುರತ್ಕಲ್ ಪ್ರಖಂಡದ ಕಾರ್ಯಕರ್ತರಿಗೂ, ತಕ್ಷಣವೆ ಆರೋಪಿಯನ್ನು ಬಂಧಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಸ್ಥಳೀಯರು ಧನ್ಯವಾದಗಳನ್ನ ಅರ್ಪಿಸಿದ್ದಾರೆ.

Leave A Reply

Your email address will not be published.