ಇಲ್ಲಿ ಮೇಕೆ ಹಾಲಿಗೆ ಭರ್ಜರಿ ಡಿಮ್ಯಾಂಡ್ | ಒಂದು ಲೀಟರ್ ಆಡಿನ ಹಾಲಿನ ಬೆಲೆ ಕೇಳಿದರೆ ನೀವು ದಂಗಾಗುವುದಂತೂ ನಿಜ!!
ಪ್ರಪಂಚ ಎಷ್ಟೇ ಮುಂದುವರಿದರೂ ಹಿಂದಿನ ಕಾಲದ ಬಳಕೆಯೇ ಇಂದಿಗೂ ಸೂಕ್ತವಾದ ಉಪಯೋಗವಾಗಿದೆ.ವಸ್ತುಗಳಿಂದ ಹಿಡಿದು ಮದ್ದಿನವರೆಗೂ ಉಪಯೋಗಿಸುತ್ತಿದ್ದೇವೆ. ಅದರಲ್ಲೂ ಇಂದಿನ ಇಂಗ್ಲಿಷ್ ಮಾತ್ರೆಗಳಿಗಿಂತ ಮನೆಮದ್ದುಗಳೇ ಪ್ರಸಿದ್ಧಿ ಹೊಂದಿದೆ.
ಇದೀಗ ರಾಜಧಾನಿ ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ ಏಕಾಏಕಿ ಡೆಂಗ್ಯೂ ಜ್ವರ ಹೆಚ್ಚಾಗುತ್ತಿದ್ದಂತೆ, ಜನರಲ್ಲಿ ಭೀತಿ ಆವರಿಸಿದೆ. ಕೊರೊನಾ ಅವಧಿಯಲ್ಲಿ ಆರೋಗ್ಯ ಸೌಲಭ್ಯಗಳ ಸ್ಥಿತಿಯನ್ನ ನೋಡಿದ ಮಂದಿ, ವೈದ್ಯರು ಮತ್ತು ಆಸ್ಪತ್ರೆಗಳನ್ನ ಅವಲಂಬಿಸಿದ್ದಾರೆ.ಆದ್ರೆ, ಮನೆಮದ್ದುಗಳನ್ನ ಪ್ರಯತ್ನಿಸುವುದರಿಂದ ಹಿಂದೆ ಸರಿಯುವುದಿಲ್ಲ.
ಅದ್ರಂತೆ, ಇದೀಗ ಡೆಂಗ್ಯೂ ತಡೆಗಟ್ಟಲು ಮೇಕೆ ಹಾಲಿಗೆ ಬೇಡಿಕೆ ಹೆಚ್ಚಾಗಲು ಇದೇ ಕಾರಣವಾಗಿದೆ. ಹೌದು, ಇಂದಿನ ದಿನಗಳಲ್ಲಿ ಆಡಿನ ಹಾಲಿನ ಬೆಲೆ ಗಗನ ಮುಟ್ಟುತ್ತಿದೆ. ದೆಹಲಿ ಮತ್ತು NCR ನಗರಗಳಲ್ಲಿ ಮೇಕೆ ಹಾಲನ್ನ ಪ್ರತಿ ಲೀಟರ್‌ಗೆ 1500 ರಿಂದ 4000 ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ವೈದ್ಯರು ಹೇಳುತ್ತಾರೋ ಇಲ್ಲವೋ, ಡೆಂಗ್ಯೂ ರೋಗಿಗಳ ಸಂಬಂಧಿಕರು, ಎಲ್ಲೆಂದರಲ್ಲಿ ಆಡಿನ ಹಾಲನ್ನ ಹುಡುಕುತ್ತಿದ್ದಾರೆ. ದೆಹಲಿಯಲ್ಲಿ ಅದು ಲಭ್ಯವಿಲ್ಲದಿದ್ರೆ, ಜನರು ಗಾಜಿಯಾಬಾದ್, ನೋಯ್ಡಾ, ದಾದ್ರಿ, ಫರಿದಾಬಾದ್ ಮತ್ತು ಬಾಗ್‌ಪತ್‌ನಂತಹ ಸ್ಥಳಗಳಿಂದ ಮೇಕೆ ಹಾಲನ್ನ ಖರೀದಿಸುತ್ತಿದ್ದಾರೆ. ಆನ್‌ಲೈನ್ ಶಾಪಿಂಗ್ ಆಪ್‌ಗಳಲ್ಲಿ ಕೂಡ ಮೇಕೆ ಹಾಲು ಸಿಗುವುದು ತುಂಬಾ ಕಷ್ಟಕರವಾಗಿದೆ.
ಮೇಕೆ ಹಾಲಿನ ಬೆಲೆ ಹೆಚ್ಚುತ್ತಿರುವ ಬಗ್ಗೆ ಮೇಕೆ ಸಾಕಾಣಿಕೆದಾರರು, ಉತ್ಪಾದನೆಗಿಂತ ಹೆಚ್ಚು ಬೇಡಿಕೆ ಇದೆ ಎನ್ನುತ್ತಾರೆ. ಡೆಂಗ್ಯೂ ರೋಗಿಗಳ ದೇಹದಲ್ಲಿ ಈ ಕಾಯಿಲೆಯಿಂದಾಗಿ, ಪ್ಲೇಟ್‌ಲೆಟ್‌ಗಳ ಸಂಖ್ಯೆ ಬಹಳ ವೇಗವಾಗಿ ಕುಸಿಯುತ್ತದೆ. ಆಡಿನ ಹಾಲು ಅಥವಾ ಪಪ್ಪಾಯಿ ಎಲೆಗಳ ರಸವನ್ನು ಕುಡಿಯುವುದರಿಂದ ಪ್ಲೇಟ್ಲೆಟ್ಗಳ ಸಂಖ್ಯೆಯನ್ನ ಹೆಚ್ಚಿಸಬಹುದು ಎಂದು ನಂಬಲಾಗಿದೆ. ಆದ್ದರಿಂದ, ದೆಹಲಿ-ಎನ್‌ಸಿಆರ್ ಸೇರಿದಂತೆ ದೇಶದ ಇತರ ರಾಜ್ಯಗಳಾದ ಬಿಹಾರ, ಉತ್ತರ ಪ್ರದೇಶ, ಹರಿಯಾಣಗಳಲ್ಲಿ ಮೇಕೆ ಹಾಲಿನ ಬೇಡಿಕೆ ಹೆಚ್ಚಾಗಿದೆ.
ಕೆಲವು ದಿನಗಳ ಹಿಂದೆ, ಮೇಕೆ ಹಾಲು ಖರೀದಿಸುವವರು ಲಭ್ಯವಿಲ್ಲದಿದ್ದಾಗ, ಜನರು ಈಗ ಆನ್‌ಲೈನ್ ಮಾರುಕಟ್ಟೆಯಲ್ಲಿ ಮೇಕೆ ಹಾಲನ್ನ ಬುಕ್ ಮಾಡುತ್ತಿದ್ದಾರೆ. ಜನರು ಮೇಕೆ ಹಾಲನ್ನ ಪ್ರತಿ ಲೀಟರ್ʼಗೆ 1500 ರೂ.ನಿಂದ 4000 ರೂ.ವರೆಗೆ ಖರೀದಿಸುತ್ತಿದ್ದಾರೆ. ಇಲ್ಲಿ ಪಪ್ಪಾಯಿ ಎಲೆಯ ಜ್ಯೂಸ್ ಮಾತ್ರೆಗಳ ಬಾಕ್ಸ್ 500 ರಿಂದ ಸಾವಿರ ರೂಪಾಯಿಗೆ ಮಾರಾಟವಾಗುತ್ತಿದೆ.
ದೆಹಲಿ-ಎನ್‌ಸಿಆರ್‌ನಲ್ಲಿ ಮೇಕೆ ಹಾಲಿನ ಬೆಲೆ ದೆಹಲಿ-ಎನ್‌ಸಿಆರ್ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಡೆಂಗ್ಯೂ ರೋಗಿಗಳ ಸಂಬಂಧಿಕರು ಮೇಕೆ ಸಾಕಣೆದಾರರನ್ನ ಹುಡುಕಿಕೊಂಡು ಅಲ್ಲಿ ಇಲ್ಲಿ ಓಡುತ್ತಿದ್ದಾರೆ. ಇದರಿಂದಾಗಿ ಹಾಲಿನ ದರ ಮತ್ತಷ್ಟು ಹೆಚ್ಚಾಗಿದೆ. ಖರೀದಿದಾರರು ಲೀಟರ್‌ಗೆ 50 ರೂಪಾಯಿ ಬದಲಿಗೆ 1500, 2000, 3000 ಮತ್ತು 4000 ಸಾವಿರ ರೂಪಾಯಿಗಳನ್ನು ಪಾವತಿಸಲು ಸಿದ್ಧರಾಗಿದ್ದಾರೆ. ದೆಹಲಿಯ ಕೆಲವು ಪ್ರದೇಶಗಳಲ್ಲಿ, ಮೇಕೆ ರೈತರಿಂದ ಮುಂಗಡ ಬುಕ್ಕಿಂಗ್ ಆರಂಭಿಸಲಾಗಿದೆ.
ಮೇಕೆ ಸಾಕಣೆದಾರರು ಈ ನಿಟ್ಟಿನಲ್ಲಿ ಕೊರೊನಾ ಮೊದಲ ಮತ್ತು ಎರಡನೇ ಅಲೆಯ ಸಮಯದಲ್ಲಿಯೂ ಮೇಕೆ ಹಾಲಿನ ಬೇಡಿಕೆ ವೇಗವಾಗಿ ಹೆಚ್ಚಾಗಿತ್ತು ಎಂದು ಹೇಳುತ್ತಿದ್ದಾರೆ. ಆಗ ಹಾಲಿನ ದರ ಸುಮಾರು 2,000 ರೂ.ಗೆ ತಲುಪಿತ್ತು. ಪೂರ್ವ ದೆಹಲಿಯ ಸುಂದರ್ ನಗರಿಯಲ್ಲಿ ವಾಸಿಸುತ್ತಿರುವ ವ್ಯಕ್ತಿಯೊಬ್ಬರು, ‘ಜನರು ಅಂಗಡಿಗಳಿಗೆ ಬಂದು ಮೇಕೆ ಹಾಲಿನ ಬಗ್ಗೆ ಕೇಳುತ್ತಿದ್ದಾರೆ. ಎರಡು-ಮೂರು ವರ್ಷಗಳ ಹಿಂದೆ ನಾವು ಮಾನವೀಯತೆಗಾಗಿ ಅನೇಕ ಜನರಿಗೆ ಉಚಿತವಾಗಿ ಹಾಲು ಹಂಚಿಕೆ ಮಾಡುತ್ತಿದ್ವು. ಆದ್ರೆ, ನಂತ್ರ ಅವರು ಆಸ್ಪತ್ರೆಗಳಿಗೆ ಹೋಗುವ ಮೂಲಕ ಸಾವಿರ, ಎರಡು ಸಾವಿರ ರೂಪಾಯಿಗಳನ್ನ ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ನಂತ್ರ ನಾವು ಕೂಡ ಈ ಬಾರಿ ಬೆಲೆಯನ್ನು ನಿಗದಿ ಮಾಡುತ್ತಿದ್ದೇವೆ ಎಂದರು.