ಮಂಗಳೂರು: ನವೆಂಬರ್ 8 ರಂದು ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ!! ಕಳೆದ ಬಾರಿ ನೀಡಬೇಕಾಗಿದ್ದ ಪ್ರಶಸ್ತಿ ಮಹಾಮಾರಿಯಿಂದಾಗಿ ಮುಂದೂಡಲ್ಪಟ್ಟು ಈ ಬಾರಿ ಪ್ರಧಾನ
ಕಿತ್ತಳೆ ಮಾರಿ ತನ್ನ ಸಂಸಾರ ನಿಭಾಯಿಸುವುದರೊಂದಿಗೆ ತನ್ನೂರಿನ ಮಕ್ಕಳ ವಿದ್ಯಾರ್ಜನೆಗಾಗಿ ವಿದ್ಯಾ ದೇಗುಲವನ್ನೇ ನಿರ್ಮಿಸಿದ ಉದಾರ ದಾನಿ,ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ 2020ನೇ ಸಾಲಿನ ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದ್ದು, ನವಂಬರ್ 8ರಂದು ದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಗೌರವ ಸ್ವೀಕರಿಸಲಿದ್ದಾರೆ.
ನವೆಂಬರ್ ನಲ್ಲಿ ನವದೆಹಲಿಗೆ ಆಗಮಿಸುವಂತೆ ಹರೇಕಳ ಹಾಜಬ್ಬಗೆ ಪತ್ರ ಬಂದಿದ್ದು,ಈ ಹಿನ್ನೆಲೆಯಲ್ಲಿ ತನ್ನ ಸಹಾಯಕra ಜೊತೆ ಹಾಜಬ್ಬ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ನವಂಬರ್ 8ರಂದು ದೆಹಲಿಗೆ ತಲುಪಿ ಅಲ್ಲಿನ ಆಶೋಕ್ ಹೋಟೆಲ್ ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿರುವ ಹಾಜಬ್ಬರ ಹೆಸರನ್ನು 2020ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿತ್ತು. ಮಾರ್ಚ್ ತಿಂಗಳಲ್ಲಿ ಪ್ರಶಸ್ತಿ ಪ್ರದಾನವಾಗದೇಕಿತ್ತು. ಆದರೆ, ಕೊರೋನ ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಮುಂದೂಡಲ್ಪಟ್ಟಿತ್ತು. ಇದೀಗ ನವಂಬರ್ ತಿಂಗಳಲ್ಲಿ ಪ್ರಶಸ್ತಿ ಪ್ರಧಾನಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ.
ಮಂಗಳೂರು ಕೊಣಾಜೆಯ ಹರೇಕಳ ನಿವಾಸಿ ಹಾಜಬ್ಬ ಅನಕ್ಷರಸ್ಥ. ತನ್ನ ಊರಿನ ಮಕ್ಕಳು ವಿದ್ಯೆಯಿಂದ ವಂಚಿತರಾಗದಿರಲಿ ಎಂಬ ಸದುದ್ದೇಶವನ್ನಿಟ್ಟು ಸರ್ಕಾರಿ ಕಚೇರಿಗೆ ಅಲೆದು ಅಲೆದು ಸರ್ಕಾರ ನೀಡಿದ ಸ್ವಲ್ಪ ಜಾಗದಲ್ಲಿ ತನ್ನ ಕನಸನ್ನು ನನಸು ಮಾಡಲು ರಾತ್ರಿ ಸ್ವತಃ ತಾನೇ ಹಾರೆ ಗುದ್ದಲಿ ಹಿಡಿದು ಬೆವರು ಹರಿಸಿದ ಪ್ರಯತ್ನಿಸಿದ ಫಲವಾಗಿ 1999ರಲ್ಲಿ ಪುಟ್ಟದಾಗಿ ಶಾಲೆ ತೆರೆಕಂಡಿದ್ದರೂ, 2000 ನೇ ಜೂನ್ 17 ಕಿರಿಯ ಪ್ರಾಥಮಿಕ ಶಾಲೆಯಾಗಿ ತೆರೆದು, ಆ ಬಳಿಕ 10 ನೇ ತರಗತಿ ವರೆಗೆ ಸುಮಾರು 160 ಕ್ಕೂ ಹೆಚ್ಚು ಮಕ್ಕಳು ವಿದ್ಯಾರ್ಜನೆಗೈಯುತ್ತಿದ್ದಾರೆ.