ಪುತ್ತೂರಿನ 45ಕ್ಕೂ ಮಿಕ್ಕಿ ಜಮಾಅತ್‌ಗೆ ಖಾಝಿಯಾಗಿ ಜಿಫ್ರಿ ತಂಞಳ್ ನೇಮಕ ?
ಪುತ್ತೂರು: ಜಿಲ್ಲೆಯ ಬಹುತೇಕ ಮೊಹಲ್ಲಾಗಳು ದ ಕ ಜಿಲ್ಲಾ ಖಾಝಿಯನ್ನಾಗಿ ಸ್ವೀಕರಿಸುತ್ತಿದ್ದರು. ಆದರೆ ಕಳೆದ ಒಂದು ವರ್ಷದಿಂದ ಜಿಲ್ಲೆಯ ಅಲ್ಲಲ್ಲಿ ಸೀಮಿತ ಮೊಹಲ್ಲಾಗಳನ್ನು ಒಟ್ಟುಗೂಡಿಸಿ ಹೊಸ ಖಾಝಿಯನ್ನು ನೇಮಕ ಮಾಡುವ ಪ್ರಕ್ರಿಯೆ ನಡೆ ಯುತ್ತಿದ್ದು, ಇದೀಗ ಪುತ್ತೂರು ಕೇಂದ್ರವಾಗಿರಿಸಿ 45ಕ್ಕೂ ಮಿಕ್ಕಿಮೊಹಲ್ಲಾಗಳಿಗೆ ಸಮಸ್ತದ ಅಧ್ಯಕ್ಷರೂ, ಇಸ್ಲಾಂ ವಿದ್ವಾಂಸರೂ ಆಗಿರುವ ಜಿಫ್ರಿ ಮುತ್ತು ಕೋಯಾ ತಂಞಳ್ ಅವರನ್ನು ಖಾಝಿಯಾಗಿ ಸ್ವೀಕರಿಸಲು ಈಗಾಗಲೇ ಒಪ್ಪಿಗೆಯನ್ನು ಸೂಚಿಸಿದ್ದು, ಮುಂದಿನ ತಿಂಗಳಿನಿಂದ ಪುತ್ತೂರಿನ ಬಹುತೇಕ ಮೊಹಲ್ಲಾಗಳಿಗೆ ಜಿಫ್ರಿ ತಂಞಳ್ ಅವರು ಅಧಿಕೃತ ಖಾಝಿಯಾಗಿ ನಿಯುಕ್ತಿಗೊಳ್ಳಲಿದ್ದಾರೆ ಎನ್ನಲಾಗಿದೆ.
ಈ ಕುರಿತು ಪತ್ರಿಕೆಯೊಂದು ವರದಿ ಪ್ರಕಟಿಸಿದ್ದು,ಬಹುತೇಕ ಜಿಫ್ರಿ ತಂಞಳ್ ಅವರನ್ನೇ ಪುತ್ತೂರು ಖಾಝಿಯಾಗಿ ನೇಮಕ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ
ಪುತ್ತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಈ ಕುರಿತು ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಬಹುತೇಕ ಮೊಹಲ್ಲಾಗಳ ಮುಖ್ಯಸ್ಥರು ಭಾಗವಹಿಸಿದ್ದಾರೆ. ಈ ಹಿಂದೆ ಮಂಗಳೂರಿನ ಖಾಝಿಯನ್ನು ಅವಲಂಬಿತರಾಗಿದ್ದಮೊಹಲ್ಲಾಗಳು ಮುಂದಿನ ದಿನಗಳಲ್ಲಿ ತಂಞಳ್ ಅವರನ್ನು ಖಾಝಿಯಾಗಿ ಸ್ವೀಕರಿಸಲಿದ್ದಾರೆ. ಪ್ರಮುಖವಾಗಿ ರಂಝಾನ್ ಸಮಯದಲ್ಲಿ ತಲಾಖ್ ಹಾಗೂ ಮದುವೆ ವಿಚಾರದಲ್ಲಿ ಮತ್ತು ಮೊಹಲ್ಲಾಗಳಲ್ಲಿ ಸಮಸ್ಯೆಗಳು ಉಂಟಾದಲ್ಲಿ ಖಾಝಿಗಳ ತೀರ್ಮಾನವೇ ಅಂತಿಮವಾಗಿರುತ್ತದೆ.
ಖಾಝಿಗಳ ತೀರ್ಮಾನಕ್ಕೆ ಪ್ರಶ್ನಿಸುವ ಅಧಿಕಾರ ಯಾರಿಗೂ ಇರುವುದಿಲ್ಲ, ಧಾರ್ಮಿಕ ವಿಧಾನಗಳಲ್ಲೇ ಅಥವಾ ಶರೀಅತ್ ನಿಯಮ ಪ್ರಕಾರ ಖಾಝಿಗಳು ಯಾವುದೇ ತೀರ್ಮಾನವನ್ನು ಕೈಗೊಳ್ಳುವ ಕಾರಣ ಅದರಲ್ಲಿ ಯಾವುದೇ ಭಿನ್ನಮತವಾಗಲಿ ಸೃಷ್ಟಿಯಾಗದೆ ಖಾಜಿಯ ಮಾತೇ ಅಂತಿಮವಾಗಿರುತ್ತದೆ.
ಹಲವು ವರ್ಷಗಳಿಂದ ಪುತ್ತೂರು ಕೇಂದ್ರವಾಗಿರಿಸಿ ಖಾಝಿಗಳ ನೇಮಕವಾಗಬೇಕೆಂಬ ಆಗ್ರಹ ವ್ಯಕ್ತವಾಗಿದ್ದು, ಈ ಬಾರಿ ಪುತ್ತೂರು ಅನ್ಸಾರುದ್ದೀನ್ ಜಮಾತ್ ಕಮಿಟಿ ಅಂತಿಮ ತೀರ್ಮಾನಕ್ಕೆ ಬಂದು ಎಲ್ಲರ ಒಪ್ಪಿಗೆಯನ್ನು ಪಡೆದು ಹೊಸ ಖಾಝಿಯನ್ನು ಸ್ವೀಕಾರ ಮಾಡುವುದೆಂದು ಘೋಷಿಸಲಾಗಿದೆ. ಮುಂದಿನ ತಿಂಗಳು ಖಾಝಿ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.
ಪುತ್ತೂರು ತಾ|ಖಾಝಿ ನೇಮಕ ವಿಚಾರದಲ್ಲಿ ತಕರಾರು ಹೊಯ್ ಕೈ ನೂಕುನುಗ್ಗಲಿನ ವಿಡಿಯೋ ವೈರಲ್