ನವ ಜೋಡಿಗೆ ಪೆಟ್ರೋಲ್ ಉಡುಗೊರೆಯಾಗಿ ನೀಡಿದ ಸ್ನೇಹಿತರು!!

Share the Article

ಚಿಕ್ಕಮಗಳೂರು:ಇತ್ತೀಚೆಗೆ ಅಂತೂ ಮದುವೆ ಸಮಾರಂಭಗಳಲ್ಲಿ ವಧು-ವರರಿಗೆ ವಿಭಿನ್ನವಾದ ಹಾಸ್ಯಮಯವಾದ ಉಡುಗೊರೆಯನ್ನು ಕೊಡುವುದು ಮಾಮೂಲು ಆಗಿದೆ. ಆದ್ರೆ ಇಲ್ಲೊಂದು ಉಡುಗೊರೆ ನವ ಜೋಡಿಗಳನ್ನೇ ಆಶ್ಚರ್ಯಕ್ಕೆ ದೂಡಿದೆ.

ಇವಾಗ ಅಂತೂ ಪೆಟ್ರೋಲ್‌, ಡೀಸೆಲ್‌ ಬೆಲೆ ಗಗನಕ್ಕೇರಿದೆ.ಇದೇ ಸಂದರ್ಭದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿಗೆ ಸ್ನೇಹಿತರು ಪೆಟ್ರೋಲ್‌ ಅನ್ನು ಉಡುಗೊರೆಯಾಗಿ ನೀಡಿರುವ ಘಟನೆ ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದಿದೆ.

ಗ್ರಾಮ ಪಂಚಾಯಿತಿಯೊಂದರ ಸದಸ್ಯ ಸಚಿನ್‌ ಮರ್ಕಲ್‌ ಹಾಗೂ ವೈಷ್ಣವಿ ಜೋಡಿಗಳ ಮದುವೆ ಸಮಾರಂಭ ಇತ್ತು.ರಿಸೆಪ್ಷನ್‌ನಲ್ಲಿ ಇದ್ದ ಜೋಡಿ ಪೆಟ್ರೋಲ್‌ ಬಾಟಲ್‌ ನೋಡಿ ಶಾಕ್‌ ಆಗಿದ್ದಾರೆ. ಈ ವೇಳೆ ನವಜೋಡಿಗೆ ಸ್ನೇಹಿತರು ಒಂದು ಲೀಟರ್‌ ಪೆಟ್ರೋಲ್‌ ಇರುವ ಬಾಟಲ್‌ ನೀಡಿ, ಶುಭ ಹಾರೈಸಿದ್ದಾರೆ.

ವಧು ಹಾಗೂ ವರ ಇಬ್ಬರಿಗೂ ತಲಾ ಒಂದೂವರೆ ಲೀಟರ್ ಪೆಟ್ರೋಲ್ ಬಾಟಲಿಯನ್ನು ಗಿಫ್ಟ್ ರೂಪದಲ್ಲಿ ಕೊಟ್ಟಿದ್ದಾರೆ. ಸ್ನೇಹಿತರ ಕೈಯಲ್ಲಿ ಪೆಟ್ರೋಲ್ ಬಾಟಲಿ ನೋಡಿದ ವೇದಿಕೆ ಮೇಲಿದ್ದ ನೂತನ ವಧು-ವರರು ಕೂಡ ಆಶ್ಚರ್ಯಕ್ಕೀಡಾಗಿದ್ದಾರೆ.

Leave A Reply