ಆಟೋ, ಕ್ಯಾಬ್ ಚಾಲಕರಿಗೆ ಮಹತ್ವದ ಆದೇಶ ಹೊರಡಿಸಿದ ಸಾರಿಗೆ ಇಲಾಖೆ |ಇಂದಿನಿಂದ ಚಾಲಕರಿಗೆ ಬ್ಯಾಡ್ಜ್ ಕಡ್ಡಾಯ!!

ಬೆಂಗಳೂರು : ಆಟೋ, ಕ್ಯಾಬ್ ವಾಹನಗಳ ಚಾಲಕರಿಗೆ ರಾಜ್ಯ ಸಾರಿಗೆ ಇಲಾಖೆ ಮಹತ್ವದ ಮಾಹಿತಿ ನೀಡಿದ್ದು, ಆಟೋ, ಕ್ಯಾಬ್ ಚಾಲಕರಿಗೆ ಬ್ಯಾಡ್ಜ್ ಕಡ್ಡಾಯ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದ್ದು,ಅ.13 ರ ಇಂದಿನಿಂದಲೇ ಜಾರಿಯಾಗಲಿದೆ.

 

ಆಟೋ, ಕ್ಯಾಬ್ ಚಾಲಕರಿಗೆ ಬ್ಯಾಡ್ಜ್ ಕಡ್ಡಾಯ ಮಾಡಲಾಗಿದ್ದು, ರಾಜ್ಯದ ಎಲ್ಲ ಆರ್ ಟಿಒ ಅಧಿಕಾರಿಗಳು ಸೂಚಿಸಿದ್ದಾರೆ.ಬ್ಯಾಡ್ಜ್ ಇಲ್ಲದವರು, ಅವಧಿ ಮುಕ್ತಾಯಗೊಂಡಿರುವವರು ಬ್ಯಾಡ್ಜ್ ಪಡೆಯಬೇಕಾಗುತ್ತದೆ. ಬಾಡ್ಜ್ ಸಂಖ್ಯೆ ಪಡೆಯಲು ತಂತ್ರಾಂಶದಲ್ಲಿ ಸಾರಿಗೆ ಇಲಾಖೆ ಅವಕಾಶ ಕಲ್ಪಿಸಿದೆ ಎಂದು ಆಯುಕ್ತರು ಹೇಳಿದ್ದಾರೆ.

ಲಘು ಮೋಟಾರು ವಾಹನಗಳ ಡಿಎಲ್ ಪಡೆದವರು ಆಟೋ ರಿಕ್ಷಾವನ್ನೂ ಚಲಾಯಿಸಬಹುದು ಎಂದು ಕರ್ನಾಟಕ ಮೋಟಾರು ವಾಹನ ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ. ಹೀಗಾಗಿ ಆಟೋರಿಕ್ಷಾ ಚಾಲಕರಿಗೆ ಬ್ಯಾಡ್ಜ್ ಕಡ್ಡಾಯ ನಿಯಮವನ್ನು ತೆಗೆಯಲಾಗಿತ್ತು.ಆದರೆ ಇದೀಗ ಆಟೋ, ಕ್ಯಾಬ್ ವಾಹನಗಳ ಚಾಲಕರಿಗೆ ರಾಜ್ಯ ಸಾರಿಗೆ ಇಲಾಖೆ ಮಹತ್ವದ ಮಾಹಿತಿ ನೀಡಿದ್ದು, ಆಟೋ, ಕ್ಯಾಬ್ ಚಾಲಕರಿಗೆ ಬ್ಯಾಡ್ಜ್ ಕಡ್ಡಾಯ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

Leave A Reply

Your email address will not be published.