ಮದುವೆಯಾಗುತ್ತಾನೆ ಎಂದು ನಂಬಿ ದೈಹಿಕ ಸಂಪರ್ಕಕ್ಕೆ ಒಪ್ಪಿಗೆ ನೀಡಿದರೆ ಅತ್ಯಾಚಾರವಲ್ಲ!! ಯುವತಿಯರನ್ನು ನಂಬಿಸಿ ಕೊನೆಯಲ್ಲಿ ಕೈ ಕೊಟ್ಟವ ಅಪರಾಧಿಯೂ ಅಲ್ಲ
ಮದುವೆಗೆ ಮುಂಚೆಯೇ ಇಬ್ಬರೂ ಒಬ್ಬರಿಗೊಬ್ಬರು ಒಪ್ಪಿಕೊಂಡು ನಡೆಸಿದ ಲೈಂಗಿಕ ಸಂಪರ್ಕ ಅತ್ಯಾಚಾರ ಎನ್ನಲಾಗುವುದಿಲ್ಲ ಎಂದು ಚಾಮರಾಜನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮಹತ್ವದ ತೀರ್ಪೊಂದನ್ನು ಎತ್ತಿಹಿಡಿದಿದೆ.
ಮದುವೆಯಾಗುತ್ತಾನೆ ಎಂದು ನಂಬಿ ದೈಹಿಕ ಸಂಪರ್ಕಕ್ಕೆ ಅನುಮತಿ ನೀಡಿದರೆ ಅದು ಅತ್ಯಾಚಾರವಲ್ಲ, ಒಂದು ವೇಳೆ ಆತ ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದರೂ, ಕಾರಣಾಂತರಗಳಿಂದ ಅದು ಸಾಧ್ಯವಾಗುವುದಿಲ್ಲ, ಹಾಗೆಂದು ಆತನನ್ನು ಆರೋಪಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಧೀಶ ಸದಾಶಿವ ಎಸ್. ಸುಲ್ತಾನ್ ಪುರಿ ಅವರು ತೀರ್ಪು ನೀಡಿದ್ದಾರೆ.
ಘಟನೆ ವಿವರ: ಚಾಮರಾಜ ನಗರದ ಮಹಾದೇವಪುರ ಪೊಲೀಸ್ ಠಾಣೆಯ ಸಿಬ್ಬಂದಿ ವಿರುದ್ಧ ಅದೇ ಠಾಣೆಯ ಮಹಿಳಾ ಪೇದೆಯೊಬ್ಬರು ಅತ್ಯಾಚಾರ ದೂರನ್ನು ದಾಖಲಿಸಿದ್ದರು. ಆತ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿದ್ದಾನೆ ಎಂದು ದಾಖಲಾದ ದೂರಿನ ಅನ್ವಯ ಆರೋಪಿಯ ಬಂಧನವಾಗುತ್ತದೆ.
ಆರೋಪಿ ಯಾವುದೇ ದುರುದ್ದೇಶ ಇಟ್ಟು ಸಂಪರ್ಕ ಬೆಳೆಸಿದ್ದಲ್ಲ, ಇಬ್ಬರೂ ಒಬ್ಬರನ್ನೊಬ್ಬರು ಇಷ್ಟ ಪಟ್ಟು, ಆಕೆ ಸಮ್ಮತಿಸಿದ್ದರಿಂದ ಲೈಂಗಿಕ ಸಂಪರ್ಕ ಬೆಳೆದಿದೆ.ಮದುವೆಗೆ ಮೊದಲೇ ಒಬ್ಬರನ್ನೊಬ್ಬರು ಪರಸ್ಪರ ಒಪ್ಪಿಕೊಂಡು ನಡೆಸುವ ದೈಹಿಕ ಸಂಪರ್ಕ ಅತ್ಯಾಚಾರ ಎನ್ನಲಾಗುವುದಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಮಿತ್ತೂರು : ಹಿಟ್ ಆ್ಯಂಡ್ ರನ್ | ದ್ವಿಚಕ್ರ ವಾಹನ ಸವಾರ ಸಾವು ,ರಸ್ತೆಯಲ್ಲಿ ರಕ್ತದೋಕುಳಿ