ಹುಚ್ಚು ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ ಎಂಬುವುದಕ್ಕೆ ನೈಜ ಉದಾಹರಣೆ!! ಮಗಳ ಗಂಡನ ಜೊತೆ ಪರಾರಿಯಾದ ಇಬ್ಬರು ಮೊಮ್ಮಕ್ಕಳ ಅಜ್ಜಿ
ಮಗಳ ಮೂಲಕ ಮೊಮ್ಮಗಳನ್ನು ಕಂಡಿದ್ದ ತಾಯಿಗೆ ಅಳಿಯನ ಮೇಲೆ ಆಸೆ ಚಿಗುರಿದೆ. ಮಗಳು ಜೆಸ್ ತನ್ನ ಎರಡನೆಯ ಗರ್ಭ ಹೊತ್ತುಕೊಂಡು ತಾಯಿ ಮನೆಗೆ ಬಂದಿದ್ದಳು.ಆಕೆ ತುಂಬು ಗರ್ಭಿಣಿ. ಹಿಂದೆ ಗಂಡ ರಯಾನ್ ಜೊತೆ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಆಕೆ,ಮಗುವಿನ ಬಾಣಂತನಕ್ಕೆ ಅನುಕೂಲವಾಗಲೆಂದು ತಾಯಿ ಮನೆ ಸೇರಿಕೊಂಡ್ಡಿದ್ದಳು.ಅಲ್ಲಿಂದ ಶುರುವಾಯಿತು ನೋಡಿ ಆಕೆಯ ತಾಯಿ ಮತ್ತು ಅಳಿಯನ ಮಧ್ಯೆ ಕುಚು ಕುಚು.
ಮಗಳು ಜೆಸ್ಸಿಗೆ ತನ್ನ ಅಮ್ಮ ಮತ್ತು ಗಂಡನ ಜೊತೆ ಏನು ನಡೆಯುತ್ತಿದೆ ಎಂಬ ಅನುಮಾನವಿತ್ತು ಆದರೆ ಆಕೆ ಅದನ್ನು ನಂಬಲು ಸಿದ್ಧರಿರಲಿಲ್ಲ. ಅತ್ತೆಯ ಜೊತೆ ಅಡುಗೆಮನೆಯಲ್ಲಿ ನಗುವುದು ತಮಾಷೆ ಮಾಡಿಕೊಳ್ಳುವುದು ಅವಕಾಶ ಕಲ್ಪಿಸಿಕೊಂಡು ಮುಟ್ಟುವುದು ನಡೆದೇ ಇತ್ತು. ಎರಡು ಮೊಮ್ಮಕ್ಕಳ ಅಜ್ಜಿ ಜೋರ್ಜಿನಾ ( ಜೇಸ್ ಳ ತಾಯಿ) ಮನೆಯಲ್ಲಿ ತೆಳುವಾದ ತುಂಡು ಚಡ್ಡಿ ಹಾಕಿಕೊಂಡು ಅಳಿಯನ ಜತೆ ಫ್ಲರ್ಟ್ ಮಾಡುತ್ತಿದ್ದಳು. ಅದು ಜಾರ್ಜಿನಾಳ ಪತಿ ಎರಿಕ್ ಗೆ ಮತ್ತು ಮಗಳು ಜೆಸ್ಸ್ ಗೆ ಇರಿಸುಮುರುಸು ಉಂಟಾಗಿತ್ತು.
ಅದೊಂದು ದಿನ ಹೆರಿಗೆಗೆಂದು 24 ವರ್ಷದ ಜೆಸ್ ಆಸ್ಪತ್ರೆಗೆ ದಾಖಲಾಗಿದ್ದಳು ಹೆರಿಗೆ ನಡೆದ ದಿನಕ್ಕೆ ಆಕೆಯ ಗೆಳೆಯ ಮೆಸೇಜ್ ಮಾಡಿ ಹೇಳಿದ್ದ : ನಾನು ನಿನ್ನ ಅನುಮಾನದ ಕಾರಣದಿಂದ ದೂರ ಹೋಗುತ್ತಿದ್ದೇನೆ ಎಂದು. ಮರುದಿನ ಮಗುವನ್ನು ಒಮ್ಮೆ ನೋಡಿಕೊಂಡು ವಾಪಸ್ಸು ಹೋದವನು ಬಾಣಂತನ ಮಾಡಬೇಕಿದ್ದ ಮಗುವಿನ ಅಜ್ಜಿಯನ್ನು ಹೊತ್ತೊಯ್ದಿದ್ದಾರೆ. ಜೆಸ್ ಗೆಳೆಯ ರಯಾನ್ ಶೆಲ್ಟನ್, ಜೆಸ್ ತಾಯಿಯೊಂದಿಗೆ ಮನೆಯಿಂದ ಓಡಿಹೋಗಿದ್ದಾನೆ. ಅಮ್ಮನನ್ನು ಕೇಳಿದರೆ, ‘ ಯಾರಿಗೆ ಯಾವಾಗ ಯಾರತ್ರ ಪ್ರೀತಿ ಉಂಟಾಗುತ್ತದೆ ಎಂಬುದನ್ನು ಹೇಳುವುದಕ್ಕಾಗುವುದಿಲ್ಲ ‘ ಎಂದಿದ್ದಾರಂತೆ.
ಹೆರಿಗೆಗಾಗಿ ಆಸ್ಪತ್ರೆಗೆ ಹೋದ ಸಂದರ್ಭದಲ್ಲಿ ರಯಾನ್, ತಾಯಿ ಜಾರ್ಜಿಯಾ ಜೊತೆ ಓಡಿ ಹೋದದಕ್ಕೆ ಪ್ರತಿಕ್ರಿಸಿದ ಮಗಳು ಜೆಸ್ಸ್, ತನ್ನ ಹಾಗೂ ತನ್ನ ಮಕ್ಕಳನ್ನು ಬಿಟ್ಟು ಹೋಗ್ತಾಳೆಂಬ ಕಲ್ಪನೆ ನನಗಿರಲಿಲ್ಲವೆಂದು ಜೆಸ್ ಹೇಳಿದ್ದಾಳೆ. ಅತ್ತ ರಯಾನ್ ಗೆ ತಾಯಿಯಿಲ್ಲ. ರಯಾನ್ ತಂದೆ ಒಂಟಿಯಾಗಿದ್ದಾರೆ. ಅವರಿಗೆ ಆಸರೆಯಾಗಬೇಕೆಂಬ ಕಾರಣಕ್ಕೆ ಅವರನ್ನು ಮದುವೆಯಾಗಿದ್ದೇನೆಂದು ಜೆಸ್ ಹೇಳಿದ್ದಾಳೆ. ಯಾರನ್ನು ಯಾರು ಬೇಕಾದ್ರೂ ಪ್ರೀತಿ ಮಾಡಬಹುದು. ಇದನ್ನು ಹೇಳಲು ಸಾಧ್ಯವಿಲ್ಲವೆಂದು ತಾಯಿ ಹೇಳಿದ್ದಾಳಂತೆ. ಅದನ್ನು ಮಗಳು ಕೂಡ ಪ್ರೂವ್ ಮಾಡಿದ್ದಾಳೆ. ಅಥವಾ ತನ್ನ ತಾಯಿಯನ್ನು ಪಟಾಯಿಸಿದ ಗೆಳೆಯನ ಮೇಲಿನ ಕೋಪದಿಂದ ಗೆಳೆಯನ ತಂದೆಯನ್ನು ಈಕೆ ಪಟಾಯಿಸಿದಲಾ. ಯಾವುದೂ ಇರಬಹುದು : ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸಂಬಂಧಗಳ ಆಯುಷ್ಯ ತೀರಾ ಕಮ್ಮಿ ಮತ್ತು ಆರ್ ಸಂಬಂಧಗಳು ಯಾವ ರೀತಿ ಬೇಕಾದರೂ ಬದಲಾಗಬಹುದು ಎಂಬುದಕ್ಕೆ ಇದೊಂದು ಉದಾಹರಣೆ.