ಗುರುವಿಲ್ಲದೇ ಕಲೆಯಲ್ಲಿ ಮಿಂಚಿದ ಈಕೆಯ ಸಾಧನೆಗೆ ಒಲಿಯಿತು ಹಲವಾರು ಅವಕಾಶ!!
ಚಿತ್ರಕಲೆ ಸಹಿತ ಬರಹಗಳಲ್ಲಿ ಸೆಡ್ಡು ಹೊಡೆಯಬಲ್ಲ ಅಸಾಧಾರಣ ಗ್ರಾಮೀಣ ಪ್ರತಿಭೆ ಅನುಶ್ರೀ ಎಂ
ಚಿತ್ರಕಲೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಹಲವಾರು ಚಿತ್ತಾರಗಳಿಗೆ ತನ್ನ ಪ್ರತಿಭೆಯ ಮೂಲಕ ಜೀವತುಂಬಿದ ಆಕೆ ಗುರುವಿಲ್ಲದೆಯೇ ಚಿತ್ರಕಲೆಯಲ್ಲಿ ಮಿಂಚಿದ ಗ್ರಾಮೀಣ ಪ್ರತಿಭೆ.ಎಲ್ಲಾ ವಿಧದ ಚಿತ್ತಾರಗಳನ್ನು ಸಾರಾಗವಾಗಿ ಬಿಡಿಸುವ ಆಕೆಯ ಪ್ರತಿಭೆಗೆ ಹಲವೆಡೆ ಅಭಿಮಾನಿಗಳಿದ್ದಾರೆ. ಮಣ್ಣಿನ ಮೂರ್ತಿ ಯಿಂದ ಹಿಡಿದು ಕಲರ್ ಪೇಂಟಿಂಗ್ ನಲ್ಲಿ ಆಕೆ ಮಾಡುವ ಚಾಕಚಕ್ಯತೆಗೆ ಸೋಲದವರೇ ಇಲ್ಲ. ಅಂತಹ ಅದ್ಭುತ ಪ್ರತಿಭೆ, ಪ್ರಸ್ತುತ ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸುತ್ತಿರುವ ನಮ್ಮೂರ ಗ್ರಾಮೀಣ ಪ್ರತಿಭೆ ಅನುಶ್ರೀ ಎಂ.
ಹಲವಾರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಅನುಶ್ರೀ, ಬಾಲ್ಯದಿಂದಲೇ ಚಿತ್ರಕಲೆಯ ಕಡೆಗೆ ತನ್ನ ಮನಸ್ಸು ಹಾಗೂ ಜ್ಞಾನವನ್ನು ವಾಲಿಸಿಕೊಂಡವಳು.ಮೂಲತಃ ಒಳಲಂಬೆ, ಮಣಿಯಾನ ಮನೆಯ ಸಿ.ಪಿ.ಸಿ.ಆರ್.ಐ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಂ ದುರ್ಗೇಶ್ ಹಾಗೂ ವೇದಾವತಿ ದಂಪತಿಗಳ ಪುತ್ರಿಯಾಗಿರುವ ಈಕೆ ತನ್ನ ಬಾಲ್ಯ ಶಿಕ್ಷಣವನ್ನು ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ ಹಾಗೂ
ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಪಡೆದು, ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಅಂಕ ಪಡೆದು,ಪದವಿ ಪೂರ್ವ ವ್ಯಾಸಾಂಗವನ್ನು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪಡೆದು, ಪಿಯುಸಿ ಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿ ಸದ್ಯ ಹೆಸರಾಂತ ವಿದ್ಯಾಸಂಸ್ಥೆಯಾದ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ನಡೆಸುತ್ತಿದ್ದಾರೆ.
ತನ್ನ ಹವ್ಯಾಸಗಳಾದ ಕಥೆ, ಕವನ,ಪ್ರಬಂಧ ರಚನೆಗಳಲ್ಲಿ ಎಲ್ಲರೂ ಮೆಚ್ಚುವಂತ ಈಕೆಯ ಬರಹಗಳು ಸ್ಪಷ್ಟವಾಗಿ ಮನಮುಟ್ಟುವಂತಿರುತ್ತದೆ. ನಾಯಕತ್ವ ಗುಣ ಹೊಂದಿರುವ ಈಕೆ ಶಾಲಾ ಮಟ್ಟದಿಂದಲೂ ಅನೇಕ ಬಾರಿ ಎಲ್ಲಾ ವಿಚಾರದಲ್ಲೂ ಜವಾಬ್ದಾರಿ ಹೊತ್ತ ಅನುಭವ ಉಳ್ಳವಳು.ಕೈಯಲ್ಲಿ ಪೆನ್ನು ಹಿಡಿದು ಕೂತರೆ ಏನಾದರೊಂದು ಗೀಚಿ ಅದಕ್ಕೊಂದು ಉತ್ತಮ ರೂಪ ಕೊಡುವ ಈಕೆಯ ಪ್ರತಿಭೆಗೆ ನೋಡುಗರೆಲ್ಲಾ ನಿಬ್ಬೆರಗಾಗಿರುವಂತಹ ಸಾಲುಸಾಲು ಉದಾಹರಣೆಗಳಿವೆ.
ತನಗೆ ಸಿಕ್ಕಿದ ಅವಕಾಶಗಳನ್ನು ಬಳಸಿಕೊಂಡು ಮುಂದುವರಿಯುತ್ತಿರುವ ಈಕೆ ಉತ್ತಮ ಕ್ರೀಡಾಪಾಟುವೂ ಹೌದು.ಶೈಕ್ಷಣಿಕವಾಗಿ ಮುಂದಿರುವ ಈಕೆಗೆ ಇನ್ನಷ್ಟು ಅವಕಾಶಗಳು ಒಲಿದುಬರಲಿ, ಈಕೆಯ ಕನಸಾದ ಚಾರ್ಟೆಡ್ ಅಕೌಂಟೆಂಟ್ ನಲ್ಲಿ ಉತ್ತಮ ಅಂಕ ಈಕೆಯ ಪಾಲಿಗಾಗಲಿ, ಚಿತ್ರಕಲೆಯ ಜೊತೆಗೆ ತನ್ನಲ್ಲಿರುವ ಬರಹದ ಪ್ರತಿಭೆಯೂ ಅನಾವರಣಗೊಳ್ಳಲಿ ಆ ಮೂಲಕ ಗ್ರಾಮೀಣ ಭಾಗದ ಪ್ರತಿಭೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಲಿ ಎಂಬುವುದೇ ನಮ್ಮ ಆಶಯ.
?ದೀಪಕ್ ಹೊಸ್ಮಠ