ಚೀನಾದ ಟೆಸ್ಲಾ ಕಾರನ್ನು ನಮ್ಮ ದೇಶದಲ್ಲಿ ಮಾರೋ ಹಾಗಿಲ್ಲ – ಕೇಂದ್ರ ಸಚಿವ ಗಡ್ಕರಿ ಟೆಸ್ಲಾ ಕಂಪನಿಗೆ ತಾಕೀತು
ನವದೆಹಲಿ: ಎಲೆಕ್ಟ್ರಿಕ್ ವಾಹನಗಳ ಮಾರಾಟ ಹೆಚ್ಚಿಸುವ ದೃಷ್ಟಿಯಿಂದ ಚೀನಾದಲ್ಲಿ ತಯಾರಿಸಲಾಗಿರುವ ಕಾರುಗಳನ್ನು ಭಾರತದಲ್ಲಿ ಮಾರಬೇಡಿ ಎಂದು ಟೆಸ್ಲಾ ಸಂಸ್ಥೆಗೆ ತಿಳಿಸಿರುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಭಾರತದ ಉತ್ಪನ್ನವನ್ನು ಹೆಚ್ಚಿಸಿ, ಹೆಚ್ಚು ಮಾರಾಟದ ಗುರಿ ಹಿಟ್ಟುಕೊಂಡಿದೆ.ಚೀನಾದ ಉತ್ಪಾದನೆಯ ವಾಹನಗಳ ಬಳಕೆಗೆ ಬ್ರೇಕ್ ಹಾಕಲು ನಿರ್ಧರಿಸಿದೆ.ಎಲೆಕ್ಟ್ರಿಕ್ ವಾಹನಗಳನ್ನು ಭಾರತದಲ್ಲಿಯೇ ಉತ್ಪಾದನೆ ಮಾಡಿ, ವಿದೇಶಗಳಿಗೂ ರಫ್ತು ಮಾಡಲು ಟೆಸ್ಲಾ ಸಂಸ್ಥೆಗೆ ಸೂಚಿಸಿದ್ದೇವೆ. ಅದಕ್ಕೆ ಬೇಕಾದ ಎಲ್ಲ ಸಹಕಾರ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.
2030ರ ವೇಳೆಗೆ ಎಲೆಕ್ಟ್ರಿಕ್ ಕಾರು ಮಾರಾಟ ಶೇ 30ಕ್ಕೆ, ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಮಾರಾಟ ಶೇ 70ಕ್ಕೆ ಮತ್ತು ದ್ವಿಚಕ್ರ, ತ್ರಿಚಕ್ರ ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಶೇ 80ಕ್ಕೆ ಹೆಚ್ಚಿಸಬೇಕೆಂಬ ಗುರಿ ಸರ್ಕಾರದ ಮುಂದಿದೆ ಎಂದು ಗಡ್ಕರಿ ಹೇಳಿದ್ದಾರೆ.
ನಿತಿನ್ ಗಡ್ಕರಿ 2030ರ ವೇಳೆಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮತ್ತು ಕಾರುಗಳ ಬಳಕೆ ಶೇ 40ಕ್ಕೆ ಹಾಗೂ ಎಲೆಕ್ಟ್ರಿಕ್ ಬಸ್‌ಗಳ ಬಳಕೆ ಶೇ 10ಕ್ಕೆ ಹೆಚ್ಚಳವಾದರೆ, ₹3.5 ಲಕ್ಷ ಕೋಟಿ ಮೌಲ್ಯದ 15.6 ಕೋಟಿ ಟನ್ ಕಚ್ಚಾ ತೈಲ ಬಳಕೆ ಕಡಿಮೆ ಮಾಡುವುದು ಸಾಧ್ಯವಾಗಲಿದೆ ಎಂದು ಗಡ್ಕರಿ ಹೇಳಿದ್ದಾರೆ.