ಕನ್ನಡಕ ಧರಿಸಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುತ್ತಿದೆ ಈ ಬೆಕ್ಕು!! | ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಈ ಕ್ಯೂಟ್ ಫೋಟೋ
ಸಾಕುಪ್ರಾಣಿಗಳ ಬಗ್ಗೆ ಯಾರಿಗೆ ಒಲವಿಲ್ಲ ಹೇಳಿ. ಅವುಗಳ ತುಂಟಾಟ ನೋಡುತ್ತಲೇ ಕಣ್ತುಂಬಿಸಿಕೊಳ್ಳುವವರು ಅದೆಷ್ಟೋ ಮಂದಿ. ಈಗ ನಾಯಿ, ಬೆಕ್ಕಿಗೂ ಮನುಷ್ಯರಂತೆಯೇ ಮನೆಗಳಲ್ಲಿ ಅನುಕೂಲ ಮಾಡಿಕೊಡುವುದು ಇದೆ. ಮಲಗಲು ಹಾಸಿಗೆ, ತಿನ್ನಲು ಬಗೆಬಗೆಯ ತಿಂಡಿಗಳು ಹೀಗೆ. ಅಷ್ಟೇ ಏಕೆ ಸಾಕುಪ್ರಾಣಿಗಳಿಗಾಗಿಯೇ ಸಾಮಾಜಿಕ ಜಾಲತಾಣದ ಖಾತೆಗಳೂ ತೆರೆದಾಗಿರುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ನಾಯಿ, ಬೆಕ್ಕುಗಳ ಜೊತೆಗಿನ ವಿಡಿಯೋ, ಫೋಟೊ ಹಂಚಿಕೊಳ್ಳುವುದು ಕೂಡ ಇರುತ್ತದೆ. ಇಲ್ಲಿ ಅಂತಹುದೇ ಒಂದು ಸಾಕುಪ್ರಾಣಿಯ ವಿಶೇಷ ವಿಡಿಯೋವೊಂದು ವೈರಲ್ ಆಗಿದೆ.ಬೆಕ್ಕೊಂದು ಕಂಪ್ಯೂಟರ್ ಮುಂದೆ ಕುಳಿತು, ಕನ್ನಡಕ ಧರಿಸಿ ಹಾಯಾಗಿ ಪೋಸ್ ಕೊಟ್ಟಿದೆ. ತುಂಬಾ ಕಲಿತ, ವಿದ್ಯಾವಂತ ಬೆಕ್ಕಿನಂತೆ ಥಟ್ಟನೆ ಗೋಚರಿಸುತ್ತದೆ! ಈ ವಿಡಿಯೋ ನೋಡಿ ನಿಮ್ಮ ಮುಖದಲ್ಲಿ ನಗು ಮಿಂಚದೇ ಇರಬಹುದೇ?
ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಬೆಕ್ಕು ಕಂಪ್ಯೂಟರ್ ಮುಂದೆ ಕಷ್ಟಪಟ್ಟು ಕೆಲಸ ಮಾಡುತ್ತಿರುವ ವಿಡಿಯೋ ಹಾಗೂ ಎರಡು ಫೋಟೊಗಳನ್ನು ಇಲ್ಲಿ ಹಂಚಲಾಗಿದೆ. ವಿಡಿಯೋದಲ್ಲಿ ಬೆಕ್ಕು ಯಾರದೋ ತೊಡೆಯ ಮೇಲೆ ಕುಳಿತಿರುವುದು ಕಂಡುಬಂದಿದೆ. ಬೆಕ್ಕಿಗಾಗಿಯೇ ಸಣ್ಣ ಕನ್ನಡಕ ಮಾಡಲಾಗಿದೆ. ಅದನ್ನು ಧರಿಸಿ ಅದು ಅಚ್ಚುಕಟ್ಟಾಗಿ ಕುಳಿತುಕೊಂಡಿದೆ. ಮತ್ತೊಮ್ಮೆ ಬೆಕ್ಕು ಹಾಗೇ ಕುಳಿತು ಕಂಪ್ಯೂಟರ್ ದಿಟ್ಟಿಸುತ್ತಿರುವುದು ಕಾಣುತ್ತದೆ.
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಆದ ಬಳಿಕ, 24,000 ಕ್ಕೂ ಅಧಿಕ ಜನರು ನೋಡಿದ್ದಾರೆ, ಇನ್ನಷ್ಟು ಜನರು ನೋಡುತ್ತಿದ್ದಾರೆ. ಪೋಸ್ಟ್ಗೆ ಆಸಕ್ತಿಕರ ಕಮೆಂಟ್ಗಳು ಕೂಡ ಬಂದಿವೆ. ಬಹಳಷ್ಟು ಜನರು ಹಾರ್ಟ್ ಇಮೋಜಿಗಳ ಮೂಲಕ ಪ್ರೀತಿ ಸುರಿದಿದ್ದಾರೆ.
1