ಕೊರಗಜ್ಜನ ಕಾರ್ಣಿಕಕ್ಕೆ ತಲೆಬಾಗಿದ ಸ್ಟಾರ್ ದಂಪತಿ | ಇಷ್ಟಾರ್ಥ ನೆರವೇರಿಸಿದ ಕೊರಗಜ್ಜನಿಗೆ ಹರಕೆ ಸಲ್ಲಿಸಿದ ರಕ್ಷಿತಾ-ಪ್ರೇಮ್ !!

ಮಂಗಳೂರು: ದೈವ ದೇವರುಗಳ ಕಾರ್ಣಿಕ ಶಕ್ತಿ ಮೊದಲಿಂದಲೂ ಇದೆ. ಆದ್ರೆ ಇತ್ತೀಚಿಗೆ ನಂಬುವವರ ಸಂಖ್ಯೆ ಹೆಚ್ಚಾಗಿದೆ ಎಂದರೆ ತಪ್ಪಲ್ಲ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಣಿಕ ದೈವಗಳಲ್ಲಿ ಒಂದಾದ ಕೊರಗಜ್ಜನನ್ನು ಜನಸಾಮಾನ್ಯರು ಮಾತ್ರವಲ್ಲದೆ ಸೆಲೆಬ್ರಿಟಿಗಳು ಕೂಡ ನಂಬುತ್ತಾರೆ. ತಮ್ಮ ಇಷ್ಟಾರ್ಥ ನೆರವೇರಿಸಿದ ಬಳಿಕ ಪುಣ್ಯ ಸ್ಥಳಕ್ಕೆ ಬಂದು ಅಜ್ಜನಿಗೆ ಹರಕೆಗಳನ್ನು ಸಲ್ಲಿಸುತ್ತಾರೆ.

 

ಅಂತೆಯೇ ಇದೀಗ ಸ್ಯಾಂಡಲ್‍ವುಡ್ ನಿರ್ದೇಶಕ ಪ್ರೇಮ್ ಹಾಗೂ ಪತ್ನಿ ರಕ್ಷಿತಾ ಪ್ರೇಮ್ ಕೂಡ ಅಜ್ಜನಿಗೆ ಹರಕೆ ಸಲ್ಲಿಸಿದ್ದಾರೆ.ಹೌದು. ತಮ್ಮ ಇಷ್ಟಾರ್ಥ ನೆರವೇರಿಸಿದ ಅಜ್ಜನ ಸನ್ನಿಧಿಗೆ ಬಂದು ದಂಪತಿ ಆಶೀರ್ವಾದ ಪಡೆದಿದ್ದಾರೆ. ಅಲ್ಲದೆ ತಮ್ಮ ಕೋರಿಕೆಯನ್ನು ನೆರವೇರಿಸಿದ ಅಜ್ಜನಿಗೆ ಹರಕೆಯನ್ನು ನೀಡಿದ್ದಾರೆ.

ಪ್ರೇಮ್, ರಕ್ಷಿತಾ ದಂಪತಿ ಬುಧವಾರ ಮಂಗಳೂರು ಸಮೀಪದ ಕುತ್ತಾರು ಕೊರಗಜ್ಜ ದೈವದ ಆದಿಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ. ಅಲ್ಲದೆ ತಾವು ಅಂದುಕೊಂಡಿದ್ದನ್ನು ನೆರವೇರಿಸಿದ ಅಜ್ಜನಿಗೆ ಹರಕೆಯ ರೂಪವಾಗಿ ಬೆಳ್ಳಿಯ ದೀಪ ಹಾಗೂ ಗಂಟೆಯನ್ನು ಅರ್ಪಿಸಿದ್ದಾರೆ.

ಇದಕ್ಕೂ ಮೊದಲು ಪೊಳಲಿ ರಾಜರಾಜೇಶ್ವರಿ ಮತ್ತು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಗಳಿಗೂ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ನಂತರ ಕೊರಗಜ್ಜನ ಸನ್ನಿಧಿಗೆ ತೆರಳಿ ತಮ್ಮ ಹರಕೆ ಸಲ್ಲಿಸಿದ್ದಾರೆ. ಬಳಿಕ ಬೀಚ್ ಗೆ ತೆರಳಿ ಎಂಜಾಯ್ ಮಾಡಿದ್ದಾರೆ.

ಸೆಲೆಬ್ರಿಟಿ ದಂಪತಿಗೆ ನಟ ಕಿಶೋರ್ ಡಿ.ಕೆ, ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಲ್ಲಿ ಮಿಂಚಿದ್ದ ಕಲಾವಿದರಾದ ಧೀರಜ್ ನೀರುಮಾರ್ಗ, ಸೂರಜ್ ಪಾಂಡೇಶ್ವರ, ಬೆಂಗಳೂರಿನ ಖ್ಯಾತ ಕೊರಿಯೋಗ್ರಾಫರ್ ರಾಹುಲ್ ಸಾಥ್ ನೀಡಿದರು.

Leave A Reply

Your email address will not be published.