ನಾರ್ಣಕಜೆ : ರಬ್ಬರ್ ಮರ ಸಾಗಾಟದ ಲಾರಿ ಪಲ್ಟಿ ,ಚಾಲಕನಿಗೆ ಗಾಯ

Share the Article

ಸುಬ್ರಹ್ಮಣ್ಯ : ರಬ್ಬರ್ ಮರ ಹೇರಿಕೊಂಡು ಹೋಗುತ್ತಿದ್ದ ಲಾರಿ ಮಗುಚಿ ಬಿದ್ದು ಚಾಲಕ ಗಾಯಗೊಂಡ ಘಟನೆ ಎಲಿಮಲೆ ಸಮೀಪ ನಾರ್ಣಕಜೆ ಎಂಬಲ್ಲಿ ನಡೆದಿದೆ.

ಎಲಿಮಲೆಯಿಂದ ರಬ್ಬರ್ ಮರದ ತುಂಡುಗಳನ್ನು ಹೇರಿಕೊಂಡು ಕಣ್ಣೂರಿನ ತಳಿಪರಂಬಕ್ಕೆ ಹೋಗುತ್ತಿದ್ದ ಲಾರಿ ನಾರ್ಣಕಜೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಲಭಾಗದ ರಸ್ತೆಯ ಗಾರ್ಡನ್ ಗೆ ಡಿಕ್ಕಿ ಹೊಡೆದು ಮಗುಚಿ ಬಿತ್ತು. ಲಾರಿಯೊಳಗೆ ಸಿಲುಕಿದ್ದ ಇಬ್ಬರು ಎದುರಿನ ಒಡೆದ ಗ್ಲಾಸ್ ಮೂಲಕ ಹೊರಬಂದರು.

ಘಟನೆಯಲ್ಲಿ ಲಾರಿ ಚಾಲಕ ಅನೀಶ್ ಎಂಬವರಿಗೆ ಗಾಯವಾಗಿದ್ದು,ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave A Reply