ಕೇರಳ:ಈವರೆಗೂ ಬಾಗಿಲು ತೆರೆಯದ, ಭಕ್ತರಿಗೆ ದರ್ಶನ ನೀಡದ ವಿಶ್ವದ ಏಕೈಕ ಹಿಂದೂ ದೇವಾಲಯ!! ಅಲ್ಲಿನ ಆ ಒಂದು ಬಾಗಿಲು ತೆರೆದರೆ ಅಂದೇ ಜಗತ್ತು ಕೊನೆಯಾಗಬಹುದು ಎಂಬ ಭಯ!!?

ಭಾರತದಲ್ಲಿ ಅದೆಷ್ಟೋ ಪುರಾತನ, ಕಾರಣಿಕ ಹೊಂದಿದ, ಇತಿಹಾಸ ಪ್ರಸಿದ್ಧ ಹಿಂದೂ ದೇವಾಲಯಗಳು ಇದ್ದು, ಎಲ್ಲವೂ ಇಂದಿಗೂ ಬಾಗಿಲು ತೆರೆದು ನಂಬಿ ಬಂದ ಹಲವಾರು ಭಕ್ತ ಸಮೂಹಕ್ಕೆ ದರ್ಶನ ನೀಡುತ್ತಿದೆ. ಈ ನಡುವೆ ಅದೊಂದು ದೇವಾಲಯ ಮಾತ್ರ ಇಂದಿಗೂ ಬಾಗಿಲು ತೆರೆದೇ ಇಲ್ಲ.ಪ್ರಪಂಚದಲ್ಲೇ ಇದು ಮೊದಲನೇ ವಿಷಯವಾಗಿದ್ದು,ಆ ದೇವಾಲಯ ಬಾಗಿಲು ತೆರೆಯದಿರಲು,ಕಾರಣ ಏನಾಗಿರಬಹುದು? ಆ ದೇವಾಲಯದಲ್ಲಿ ನಿಧಿ ಇದೆ ಎಂಬ ಊಹಾಪೋಹಗಲು ನಿಜವೇ ಎಂಬ ಬಗ್ಗೆ ಇಲ್ಲಿದೆ ನೈಜ ಸ್ಟೋರಿ.

ಭಾರತದ ಅತ್ಯಂತ ಶ್ರೀಮಂತ ದೇವಾಲಯವಾದ ಕೇರಳದ ತಿರುವನಂತಪುರಂ ನಲ್ಲಿರುವ ಅನಂತ ಪದ್ಮನಾಭ ದೇವಾಲಯವು ಮಾತ್ರ ಇತಿಹಾಸದಲ್ಲೇ ಭಕ್ತರಿಗೆ ದರ್ಶನಕ್ಕೆ ಸಿಗದಂತಾಗಿದೆ.ಪುರಾತನ ಕಾಲದಲ್ಲಿ ದ್ರಾವಿಡ ಶೈಲಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದ್ದು, ಅಂದಿನ ತಿರುವಾಂಕೂರು ರಾಜ ಮನೆತನ ದ ಆಡಳಿತದಲ್ಲಿತ್ತು. ಸುಮಾರು ಆರು ಕಮಾನುಗಳಲ್ಲಿದ್ದ ಈ ದೇವಾಲಯ 20 ಬಿಲಿಯನ್ ಗಳಷ್ಟು ಸಂಪತ್ತು ಹೊಂದಿದ್ದು, ಒಳಗಿರುವ ವಿಷ್ಣುವಿನ ಬಂಗಾರದ ಮೂರ್ತಿಯೊಂದು 500 ಕೆಜಿ ಗೂ ಹೆಚ್ಚು ತೂಗುತ್ತದೆ ಎಂದು ಹೇಳಲಾಗುತ್ತಿದೆ.

ಈ ಮೊದಲು ನ್ಯಾಯಾಲಯ ಈ ದೇವಾಲಯದ 5 ನೆಲಮಾಳಿಗೆಗಳನ್ನು ಅಗೆಯಲು ಅದೇಶಿಸಿದ್ದು, ಅದರಲ್ಲಿ ಸುಮಾರು ಸಂಪತ್ತು ದೊರೆತಿತ್ತು. ಇಷ್ಟು ಅಪಾರ ಮೌಲ್ಯದ ನಿಧಿಯ ಬಗ್ಗೆ ಅಂದು ಹಲವೆಡೆ ಭಾರೀ ಚರ್ಚೆಯಾಗಿತ್ತು. ಇನ್ನೂ 6ನೇ ನೆಲ ಅಂತಸ್ಥನ್ನು ತೆರೆಯಲು ಸರ್ಕಾರ ಮುಂದಾದಾಗ ಅಲ್ಲಿನ ರಾಜ ಮನೆತನ ಹಾಗೂ ಅಲ್ಲಿನ ಪೂಜಾರಿ ವರ್ಗ ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದು, ಆರನೇ ನೆಲಮಾಳಿಗೆಯು ವಿಷ್ಣುವಿನ ಆಸನದ ಕೆಳಗಡೆ ಇದ್ದು, ಒಂದುವೇಳೆ ಅದನ್ನು ಕೆಡವಲು ಮುಂದಾದರೆ ಹೆಚ್ಚಿನ ಆಪತ್ತು ಜೊತೆಗೆ ಜಗತ್ತು ಕೊನೆಗೂಳ್ಳಬಹುದು ಎಂದು ಎಚ್ಚರಿಸಲಾಗುತ್ತದೆ. ಇದರಿಂದಾಗಿ ಆರನೇ ಅಂತಸ್ತನ್ನು ಕೆಡವಲು ಯಾರೂಕೂಡ ಪ್ರಯತ್ನಿಸಲಿಲ್ಲ.ಒಟ್ಟಿನಲ್ಲಿ ಈ ವರೆಗೂ ದರ್ಶನಕ್ಕೆ ಬಾಗಿಲು ತೆರೆಯದ ಆರನೇ ನೆಲಮಾಳಿಗೆಯ ಬಗೆಗೆ ಕುತೂಹಲ ಹೆಚ್ಚಿದ್ದು, ಪ್ರಪಂಚದಲ್ಲೇ ಇದು ಮೊದಲ ಘಟನೆ ಎಂದು ಹೇಳಲಾಗುತ್ತಿದೆ.

Leave A Reply

Your email address will not be published.