ಕೊಳ್ತಿಗೆ ಅನ್ಯಮತೀಯ ವ್ಯಕ್ತಿಯ ಮನೆಯಲ್ಲಿದ್ದ ಹಿಂದು ಯುವತಿ ಪ್ರಕರಣ | ಆಕೆಯ ಇಚ್ಚೆಯಂತೆ ಯುವತಿ ಪ್ರಿಯತಮ ಸಿದ್ದೀಕ್ ಮನೆಗೆ ಹೋಗಲು ಅವಕಾಶ

Share the Article

ಕೊಳ್ತಿಗೆ ಕುಂಟಿಕಾನದಲ್ಲಿ ಅನ್ಯಮತೀಯ ವ್ಯಕ್ತಿಯ ಮನೆಯಲ್ಲಿದ್ದ ಹಿಂದು ಯುವತಿಯು ಇದೀಗ ಆಕೆಯ ಇಚ್ಛೆಯಂತೆ

ಕೇರಳದ ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ದೇಲಂಪಾಡಿ ಕಲ್ಲಡ್ಕ ದಿಂದ ನಾಪತ್ತೆಯಾದ ಯುವತಿಯನ್ನು ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಪ್ರಿಯತಮನ ಜತೆ ಹೋಗಲು ಅವಕಾಶಕೊಡಲಾಗಿದೆ.

ದೇಲಂಪಾಡಿ ಕಲ್ಲಡ್ಕದ ಬಾಬುರವರ ಪುತ್ರಿ ಭವ್ಯಶ್ರೀ (18)ಳನ್ನು ನಿನ್ನೆ ಕಾಸರಗೋಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆಕೆಯ ಇಚ್ಛೆಯಂತೆ ಪ್ರಿಯತಮ ಕೊಳ್ತಿಗೆ ಗ್ರಾಮದ ಕುಂಟಿಕಾನದ ಅಬೂಬಕರ್ ಸಿದ್ದಿಖ್ (24) ಜೊತೆ ಹೋಗಲು ಅವಕಾಶ ಕೊಡಲಾಯಿತು.

ದೇಲಂಪಾಡಿ ಕಲ್ಲಡ್ಕ ನಿವಾಸಿ ಭವ್ಯಶ್ರೀ ಬುಧವಾರ ಬೆಳಿಗ್ಗೆ 9 ಗಂಟೆಗೆ ಮನೆಯಿಂದ ನಾಪತ್ತೆಯಾಗಿದ್ದಳು. ಈ ಹಿನ್ನೆಲೆಯಲ್ಲಿ ತಂದೆ ಬಾಬು ಆದೂರು ಪೊಲೀಸರಿಗೆ ದೂರು ನೀಡಿದ್ದರು.

ಮಧ್ಯೆ ಬೆಳ್ಳಾರೆ ಠಾಣೆಯ ವ್ಯಾಪ್ತಿಯ ಕೊಳ್ತಿಗೆ ಗ್ರಾಮದ ಕುಂಟಿಕಾನದಲ್ಲಿ ಅಬೂಬಕರ್ ಸಿದ್ದಿಕ್ ನ ಮನೆಯಲ್ಲಿ ಅನ್ಯ ಮತೀಯ ಯುವತಿ ಇದ್ದಳೆಂದು ತಿಳಿದು ಸ್ಥಳೀಯರು ಸೇರಿದ್ದು, ಮಾಹಿತಿ ತಿಳಿದು ಆಗಮಿಸಿದ ಬೆಳ್ಳಾರೆ ಪೊಲೀಸರು ಯುವಕನನ್ನು ಕೊಳ್ತಿಗೆಯಿಂದ,ಯುವತಿಯನ್ನು ಜಾಲ್ಸೂರಿನಿಂದ ವಶಪಡಿಸಿ ಠಾಣೆಗೆ ಒಯ್ದರು. ಈ ಮಧ್ಯೆ ಯುವತಿಗೆ 18 ವರ್ಷ ಪೂರ್ತಿಗೊಂಡಿಲ್ಲವೆಂಬ ಶಂಕೆಯೂ ಉಂಟಾಗಿತ್ತು.

ಆತ ಆಕೆಯನ್ನು ಬೇರೆಯವರ ಮೂಲಕ ಜಾಲ್ಸೂರಿಗೆ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದ ಎನ್ನಲಾಗಿದೆ. ಅಲ್ಲಿ ಸಾರ್ವಜನಿಕರು ಸಂಶಯಗೊಂಡು ಆಕೆಯನ್ನು ವಿಚಾರಿಸಿದಾಗ ಆಕೆ ಘಟನೆ ವಿವರಿಸಿದ್ದು,ಬಳಿಕ ಬೆಳ್ಳಾರೆ ಪೊಲೀಸರಿಗೆ ಮಾಹಿತಿ ನೀಡಿ ಅವರ ಸುಪರ್ದಿಗೆ ನೀಡಲಾಯಿತು ಎನ್ನಲಾಗಿದೆ.

ಇಬ್ಬರನ್ನು ಅನಂತರ ಆದೂರು ಪೊಲೀಸರಿಗೆ ಹಸ್ತಾಂತರಿಸಲಾಯಿತು.
ಆದೂರು ಪೊಲೀಸರು ನಡೆಸಿದ ತನಿಖೆಯಲ್ಲಿ ಭವ್ಯಶ್ರೀಗೆ 18 ವರ್ಷ ಪೂರ್ತಿಗೊಂಡಿದೆಯೆಂದು ತಿಳಿದು ಬಂತು. ಈ ಹಿನ್ನೆಲೆಯಲ್ಲಿ ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ತಾನು ಅಬೂಬಕರ್ ಸಿದ್ದಿಖ್ ಜತೆ ತೆರಳುವುದಾಗಿ ಆಕೆ ಹೇಳಿದ್ದಳೆನ್ನಲಾಗಿದೆ. ಆಕೆಯ ಇಚ್ಛೆಯಂತೆ ತೆರಳಲು ನ್ಯಾಯಾಲಯ ಅನುಮತಿ ನೀಡಿತು. ಈ ಪ್ರಕರಣದಿಂದ ಆದೂರಿನಲ್ಲೂ ಬೆಳ್ಳಾರೆಯಲ್ಲೂ ಬಿಗು ಪರಿಸ್ಥಿತಿಗೆ ಕಾರಣವಾಗಿದೆ.

ಹಠ ಹಿಡಿದ ಹುಡುಗಿ ,ಹಿಂದೂ ಜಾಗರಣ ವೇದಿಕೆಯಿಂದ ರಕ್ಷಣೆಗೆ ಪ್ರಯತ್ನ

ಈ ನಡುವೆ ಕೋರ್ಟ್‌ನಲ್ಲಿ ಆಕೆ ಸಿದ್ದೀಕ್ ಜತೆ ಹೋಗುವುದಾಗಿ ಹೇಳಿದ್ದರಿಂದ ಆಕೆಯ ಇಚ್ಚೆಯಂತೆಯೇ ನ್ಯಾಯಾಲಯ ಆಕೆಗೆ ಅವಕಾಶ ನೀಡಿದೆ.ಆದರೆ ಹಿಂದು ಜಾಗರಣ ವೇದಿಕೆ ಯ ಕಾರ್ಯಕರ್ತರು ಆಕೆಯನ್ನು ಅವಳ ಮನೆಯಲ್ಲೇ ಇರುವಂತೆ ಮಾಡುವಲ್ಲಿ ಪ್ರಯತ್ನ ಮಾಡಿದ್ದಾರೆ

ಹಿಂದು ಜಾಗರಣ ವೇದಿಕೆ ಯ ಕಾರ್ಯಕರ್ತರು ಅವಳನ್ನು ಹಿಂದೂ ಧರ್ಮದಲ್ಲೇ ಉಳಿಸಲು ಎಲ್ಲಾ ರೀತಿಯಲ್ಲಿಯೂ ಶಕ್ತಿ ಮೀರಿ ಪ್ರಯತ್ನ ನಡೆಸುತ್ತಿದ್ದಾರೆ.

ಈತನ್ಮದ್ಯೆ ಆಕೆ ಬಸೀರಡ್ಕ ಬಸ್ ತಂಗುದಾಣದಲ್ಲಿ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು,ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದು ಬಂದಿದೆ.

Leave A Reply