ಆ ಮಹಿಳೆ ಇದೀಗ ಎಂಟನೆಯ ಬಾರಿ ಗರ್ಭಿಣಿ!!ಸಾಮಾಜಿಕ ಜಾಲತಾಣದಲ್ಲಿ ಆಕೆಯ ಅನುಯಾಯಿಗಳು ಕೇಳುವ ಪ್ರಶ್ನೆಗೆ ಹೇಗೆ ಉತ್ತರಿಸಬೇಕೆಂದು ಚಿಂತೆಯಲ್ಲಿದ್ದಾಳಂತೆ ಆ ಮಹಿಳೆ
ಹಿಂದಿನ ಕಾಲಕ್ಕೂ, ಇಂದಿನ ಕಾಲಕ್ಕೂ ಅನೇಕ ವ್ಯತ್ಯಾಸಗಳಿರುವುದು ನಮಗೆಲ್ಲಾ ತಿಳಿದಿರುವ ವಾಸ್ತವದ ಸಂಗತಿ. ಹಿಂದೆ ಮನೆ ತುಂಬಾ ಮಕ್ಕಳು, ಹಿರಿಯರೆಲ್ಲಾ ಸೇರಿದ ಅವಿಭಕ್ತ ಕುಟುಂಬ. ಆದರೆ ಮುಂದುವರಿದ ಇಂದಿನ ಕಾಲಘಟ್ಟದಲ್ಲಿ ನಾವಿಬ್ಬರು, ನಮಗಿಬ್ಬರು ಎಂಬಂತಹ ವಿಭಕ್ತ ಕುಟುಂಬವಾಗಿ ಪರಿವರ್ತನೆಯಾಗಿದೆ.ಇದಕ್ಕೆಲ್ಲಾ ಜನಸಂಖ್ಯೆ ಹೆಚ್ಚಳ ಕಾರಣವಾಗಿದೆ. ಒಬ್ಬ ದಂಪತಿಗೆ ಒಂದು ಅಥವಾ ಎರಡು ಮಕ್ಕಳು ಮಾತ್ರ ಇರಬೇಕು ಎಂದು ಸರ್ಕಾರ ಕಾನೂನನ್ನು ರೂಪಿಸಿದೆ.
ಆದರೆ,ಇಲ್ಲೊಬ್ಬ ಮಹಿಳೆ ಒಂದೆರಡಲ್ಲ, ಬರೋಬ್ಬರಿ ಏಳು ಮಕ್ಕಳನ್ನು ಹೆತ್ತು, ಈಗ ಎಂಟನೆಯ ಗರ್ಭಿಣಿಯಾಗಿದ್ದಾಳೆ.ಅಮೇರಿಕಾದಲ್ಲಿನ ಏರಿಯಲ್ ಟೈಸನ್ ಮತ್ತು ಮೈಕಲ್ ದಂಪತಿ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದ್ದು, ಜಾಲತಾಣ ಪ್ರಿಯರ ಪ್ರಶ್ನೆಗಳಿಂದ ತಲೆನೋವಿನಲ್ಲಿದ್ದಾರೆ.
ಅವರಿಬ್ಬರದು ಅದೊಂದೇ ಪುಲ್ ಟೈಮ್ ಕಾಯಕ. ಜತೆಗೆ ಹಾಬಿ ಕೂಡ. ಅದು ನಿರಂತರವಾಗಿ ಮಕ್ಕಳನ್ನು ಮ್ಯಾನುಫ್ಯಾಚರ್ ಮಾಡೋದು. ಹಾಗೆ ಹಾಬಿಗಾಗಿ ಹುಟ್ಟಿದ್ದು 7 ಮಕ್ಕಳು. ಈಗ ಇನ್ನೊಂದು ಬ್ಯಾಚು ರೆಡಿ.
ಎಂಟನೆಯ ಬಾರಿ ಗರ್ಭಿಣಿಯಾದ ಟೈಸನ್ ಏಳು ಬಾರಿ ಹೆತ್ತ ಮಕ್ಕಳು ಕೂಡಾ ಗಂಡುಮಕ್ಕಳಾಗಿದ್ದು, ಅದರಲ್ಲಿ ಒಂದು ಮಗು ಸಾವನ್ನಪ್ಪಿತ್ತು. ಆದರೆ ಈಗ ಪುನಃ ಎಂಟನೆಯ ಗರ್ಭಿಣಿಯಾದ ಟೈಸನ್ ಗೆ ಜಾಲತಾಣ ಪ್ರಿಯರು ಮಕ್ಕಳನ್ನು ಹೇಗೆ ಸಾಕುತ್ತೀರಿ, ಈ ಬಾರಿ ಹೆಣ್ಣುಮಗು ಆಗಬಹುದಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇದಕ್ಕೆ ಟೈಸನ್ ಕೂಡಾ ಉತ್ತರಿಸಿದ್ದು, ಮಗು ಹೆಣ್ಣಾಗಲಿ ಗಂಡಾಗಲಿ, ಭಾರವಿಲ್ಲದೇ ಮುದ್ದಿನಿಂದ ಸಾಕುತ್ತೇವೆ ಎಂಬ ಉತ್ತರ ನೀಡಿದ್ದಾಳೆ.