ಕಾಮರ್ಸ್ ಪದವೀಧರರಿಗೆ ಸಿಹಿ ಸುದ್ದಿ ಬೆಂಗಳೂರು ಮೆಟ್ರೋದಲ್ಲಿ ಹಲವು ಹುದ್ದೆ!!ಆನ್ಲೈನ್ ಅರ್ಜಿ ಸಲ್ಲಿಸಲು ಅಕ್ಟೋಬರ್ 27 ಕೊನೆಯ ದಿನ

ಬೆಂಗಳೂರು ಮೆಟ್ರೋ (BMRCL)ನಲ್ಲಿ ಡೆಪ್ಯೂಟಿ ಜನರಲ್​ ಮ್ಯಾನೇಜರ್ ಮತ್ತು ಅಸಿಸ್ಟಂಟ್​ ಜನರಲ್​ ಮ್ಯಾನೇಜರ್​ ಹುದ್ದೆಗಳು ಖಾಲಿ ಇದ್ದು, ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಈ ಹುದ್ದೆಗೆ ಕಾಮರ್ಸ್​ ಪದವಿಧರರು ಅರ್ಜಿ ಸಲ್ಲಿಸಬಹುದಾಗಿದ್ದು,ಬೆಂಗಳೂರಿನಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡಿದ ಅನುಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 27 ಆಗಿದೆ.

ಹುದ್ದೆಗಳ ವಿವರ:
ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ಮಂಡಳಿ
ಹುದ್ದೆಗಳ ಸಂಖ್ಯೆ – 3
ಹುದ್ದೆಯ ಸ್ಥಳ: ಬೆಂಗಳೂರು
ಹುದ್ದೆಗಳು, ಡೆಪ್ಯೂಟಿ ಜನರಲ್​ ಮ್ಯಾನೇಜರ್​, ಅಸಿಸ್ಟಂಟ್​ ಜನರಲ್​ ಮ್ಯಾನೇಜರ್
ಹುದ್ದೆ ಹೆಸರು ಹುದ್ದೆ ಸಂಖ್ಯೆ ವಿದ್ಯಾರ್ಹತೆ ವೇತನ
ಡೆಪ್ಯೂಟಿ ಜನರಲ್​ ಮ್ಯಾನೇಜರ್ 2 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಾಣಿಜ್ಯ ಪದವಿ ಪಡೆದಿರಬೇಕು. ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ಭಾರತದ ಅಕೌಂಟೆಂಟ್ಸ್ ನ ಸದಸ್ಯರಾಗಿರಬೇಕು,
ಅಸಿಸ್ಟಂಟ್​ ಜನರಲ್​ ಮ್ಯಾನೇಜರ್​ 1 ಮಾನ್ಯತೆ ಪಡೆದವರಿಂದವಿಶ್ವವಿದ್ಯಾಲಯ ವಾಣಿಜ್ಯ ಪದವಿ . ಎಂಬಿಎ(ಫೈನಾನ್ಸ್)​, ಎಂ ಕಾಂ,

ವಯೋಮಿತಿ (Age)
ಡೆಪ್ಯೂಟಿ ಜನರಲ್​ ಮ್ಯಾನೇಜರ್​ – 50
ಅಸಿಸ್ಟಂಟ್​ ಜನರಲ್​ ಮ್ಯಾನೇಜರ್​- 45
ಬಿಎಂಆರ್​ಸಿಎಲ್​ನ ನಿಯಮಾವಳಿಯಂತೆ ವಯೋಮಿತಿ ಸಡಿಲಿಕೆ ಇದೆ

ಆಯ್ಕೆ ವಿಧಾನ (selection type )
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು

ಅನುಭವ (experience)

ಡೆಪ್ಯೂಟಿ ಜನರಲ್​ ಮ್ಯಾನೇಜರ್​ ಹುದ್ದೆಗೆ
ಒಪ್ಪಂದದ ಹುದ್ದೆಗಳಿಗೆ ಹಣಕಾಸು ಕ್ಷೇತ್ರದಲ್ಲಿ ಮತ್ತು ಖಾತೆಗಳು / ವೆಚ್ಚಗಳ ನಿರ್ವಹಣೆಯಲ್ಲಿ ಕನಿಷ್ಠ 15 ವರ್ಷಗಳ ಅನುಭವ ಹೊಂದಿರಬೇಕು. ವ್ಯವಸ್ಥಾಪಕರ ಮಟ್ಟದಲ್ಲಿ ಅಥವಾ ಇದಕ್ಕೆ ಸಮಾನದ ಹುದ್ದೆಯಲ್ಲಿ ಕನಿಷ್ಠ 3 ವರ್ಷ ಅನುಭವ ಇರಬೇಕು
ಡೆಪ್ಯುಟೇಷನ್ ಹುದ್ದೆ ರಾಜ್ಯ ಸರ್ಕಾರದ ಕೆಲಸದಿಂದ ನಿಯೋಜನೆ ಆದವರಿಗೆ ಏಳನೇ ವೇತನ ಆಯೋಗದ 11 ಅಥವಾ ಮ್ಯಾಟ್ರಿಕ್ಸ್​ನಲ್ಲಿ 12 ಪ್ರವೀಣ್ಯತೆ ಹೊಂದಿರಬೇಕು.

ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಸಿದ ಪ್ರಿಂಟ್​​ ಔಟ್​ ಪಡೆದು, ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಂಡ ವಿಳಾಸಕ್ಕೆ ಪೋಸ್ಟ್​ ಮಾಡಬೇಕು. ಅಂಚೆ ಲಕೋಟೆಯಲ್ಲಿ ಎರಡು ಪಾಸ್​ಪೋರ್ಟ್​ ಫೋಟೋಗಳ ಜೊತೆಗೆ,ಲಕೋಟೆ ಮೇಲೆ ಯಾವ ಹುದ್ದೆಗೆ ಅರ್ಜಿ ಸಲ್ಲಿಸಲಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ :

ಜನರಲ್ ಮ್ಯಾನೇಜರ್ (HR),
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್, III ಮಹಡಿ, BMTC ಕಾಂಪ್ಲೆಕ್ಸ್, K.H ರಸ್ತೆ, ಶಾಂತಿನಗರ, ಬೆಂಗಳೂರು – 560 027

Leave A Reply

Your email address will not be published.