ತಮ್ಮ ಮಗುವಿಗೆ ‘ನಿಮ್ರಾನ್’ ಎಂದು ಹೆಸರಿಟ್ಟ ಪೋಷಕರು | ಈ ಹೆಸರಿಟ್ಟು ನಗೆಪಾಟಲಿಗೆ ಗುರಿಯಾಗಿದ್ದಾದರೂ ಯಾಕೆ ?? | ಹಾಗಾದರೆ ‘ನಿಮ್ರಾನ್’ ಹೆಸರಿನ ನಿಜವಾದ ಅರ್ಥವೇನು??
ಪ್ರತಿಯೊಬ್ಬ ತಂದೆ-ತಾಯಿಗೂ ತಮ್ಮ ಮಗುವಿಗೆ ಹೆಸರಿಡುವುದು ಸವಾಲಿನ ಕೆಲಸವೇ ಸರಿ. ಮಗುವಿಗೆ ನಾಮಕರಣ ಮಾಡುವುದು ಮಗುವನ್ನು ಗುರುತಿಸಲು ಒಂದು ಹೆಸರು ಬೇಕೆಂದು.ಮಗು ಹುಟ್ಟುವ ಮೊದಲೇ ಮಗುವಿನ ಹೆಸರನ್ನು ನಿಶ್ಚಯಿಸಿಕೊಂಡಿರುತ್ತಾರೆ. ಮತ್ತೆ ಕೆಲ ಪಾಲಕರಿಗೆ,ಹೆಸರಿನಲ್ಲೇನಿದೇ? ಕರೆಯಲು ಒಂದು ಹೆಸರಾದ್ರೆ ಆಯ್ತು ಎನ್ನುವವರಿದ್ದಾರೆ. ಮಗು ಹುಟ್ಟಿದ ಮೇಲೆ ಅಲ್ಲಿ-ಇಲ್ಲಿ ತಡಕಾಡಿ ಒಂದು ಹೆಸರು ಇಡ್ತಾರೆ.
ಸಾಮಾನ್ಯವಾಗಿ ಮಕ್ಕಳಿಗೆ ಹೆಸರಿಡುವ ಮೊದಲು ಅದರ ಅರ್ಥ ಪಾಲಕರಿಗೆ ತಿಳಿದಿರಬೇಕಾಗಿದ್ದು ಕರ್ತವ್ಯ.ಇಲ್ಲವಾದ್ರೆ ಈ ಮಹಿಳೆ ಅನುಭವಿಸಿದ ಕಷ್ಟವನ್ನು ಅನುಭವಿಸಬೇಕಾಗುತ್ತದೆ.ಅಂದಾ ಹಾಗೇ ಇವರು ಮಾಡಿದ ಎಡವಟ್ಟು ನೀವೇ ನೋಡಿ.
ಮಹಿಳೆಯೊಬ್ಬಳು ಮಗುವಿಗೆ ಹೆಸರಿಟ್ಟು, ಇಕ್ಕಟ್ಟಿಗೆ ಸಿಲುಕಿದ್ದಾಳೆ. ಮಗುವಿಗೆ ಸಾಂಪ್ರದಾಯಿಕ ಹಂಗೇರಿಯನ್ ಹೆಸರನ್ನು ಮಹಿಳೆ ಇಡಲು ಬಯಸಿದ್ದಳಂತೆ. ಆಕೆ ಹಾಗೂ ಆಕೆ ಸಂಗಾತಿ ಮೂಲತಃ ಹಂಗೇರಿಯವರು. ಮಗುವಿಗೆ Nimród ಎಂದು ನಾಮಕರಣ ಮಾಡಲು ಮುಂದಾಗಿದ್ದಳಂತೆ. ಇದು ಹಂಗೇರಿಯನ್ ಜನಪ್ರಿಯ ಹೆಸರಿನಲ್ಲಿ ಒಂದು.
ಆದ್ರೆ ಇದಕ್ಕೆ ಇಂಗ್ಲೀಷ್ ನಲ್ಲಿ ಬೇರೆ ಅರ್ಥವಿದೆ. ಮಹಿಳೆ ಮಗುವಿಗೆ ಇಡಬೇಕೆಂದುಕೊಂಡಿದ್ದ ಹೆಸರು ನಗೆಪಾಟಲಿಗೆ ಕಾರಣವಾಗಿತ್ತಂತೆ. ಇಂಗ್ಲೀಷ್ ನಲ್ಲಿ ನಿಮ್ರಾದ್ ಎಂದ್ರೆ ಈಡಿಯಟ್ ಎಂದರ್ಥ. ಇಂಗ್ಲೀಷ್ ಅರ್ಥ ತಿಳಿಯುತ್ತಿದ್ದಂತೆ ದಂಪತಿ ಮಗುವಿಗೆ ಬೇರೆ ಹೆಸರಿಡಲು ನಿರ್ಧರಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಕಮೆಂಟ್ ಬರ್ತಿದೆ. ನಿಮ್ರಾದ್ ಎಂದು ಹೆಸರಿಡಲು ಬಯಸಿದ್ದೇ ಕೆಟ್ಟ ಆಲೋಚನೆ. ಯುಕೆಯಲ್ಲಿ ನಿಮ್ರಾದ್ ಹೆಸರನ್ನು ಅವಹೇಳನ ಮಾಡಲು ಬಳಸಲಾಗುತ್ತದೆ ಎಂದು ಕೆಲಸವರು ಕಮೆಂಟ್ ಮಾಡಿದ್ದಾರೆ.