ಶಿರ್ವ ಸಂತ ಮೇರಿ ಮಹಾವಿದ್ಯಾಲಯ ಸಾಧಕ ವಿದ್ಯಾರ್ಥಿಗಳಿಗೆ ಸಮ್ಮಾನ ಹಾಗೂ ಬಹುಮಾನ ವಿತರಣೆ
ಶಿರ್ವ: ಇದು ಸ್ಪರ್ಧಾತ್ಮಕ ಜಗತ್ತು ಎಂದು ನಮಗೆಲ್ಲರಿಗೂ ತಿಳಿದಿದೆ ಇಂದಿನ ಯುವಪೀಳಿಗೆ ಗಳು ಬದಲಾಗುತ್ತಿರುವ ಜೀವನಶೈಲಿಯನ್ನು ಅಳವಡಿಸಿಕೊಳ್ಳುತ್ತಾ ಗತಕಾಲದ ವೈಭವಗಳ ಮೌಲ್ಯಗಳನ್ನು, ಜೀವನದ ಪಾಠಗಳನ್ನು ತಿಳಿದು ಮುಂದಿನ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಹಾಗೆ ವಿದ್ಯೆ ಕಲಿಸಿದ ಗುರುಗಳಿಗೆ ಮತ್ತು ಸಂಸ್ಥೆಗಳಿಗೆ ತಮ್ಮ ಅಮೂಲ್ಯವಾದ ಕೊಡುಗೆಗಳನ್ನು ನೀಡಬೇಕೆಂದು ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದ ಬಹುಮಾನ ವಿತರಣೆ ಹಾಗೂ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ಸೆಪ್ಟಂಬರ್ 25ರಂದು ಏರ್ಪಡಿಸಿದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಸಂತ ಮೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಹಾಗೂ ಸಂತ ಮೇರಿ ಪದವಿ ಕಾಲೇಜಿನ ಪ್ರಥಮ ಬ್ಯಾಚಿನ ಹಳೆ ವಿದ್ಯಾರ್ಥಿನಿ ಶ್ರೀಮತಿ ಐರಿನ್ ಮೆಂಡೋನ್ಸಾ ಕಳೆದ ವರ್ಷ ಮಂಗಳೂರು ವಿಶ್ವವಿದ್ಯಾನಿಲಯದ ರ್ಯಾಂಕ್ ಪಡೆದ ಸತ್ಯ ಸುಬ್ರಹ್ಮಣ್ಯ ವಿ.ಎಸ್ (ಬಿ.ಸಿ.ಎ) 4ನೇ ರ್ಯಾಂಕ್, ಸ್ನಾತಕೋತ್ತರ ವಾಣಿಜ್ಯದಲ್ಲಿ 9ನೇ ರ್ಯಾಂಕ್ ಪಡೆದ ಲವಿಟಾ ಮೊರಾಸ್ ಹಾಗೂ ಸಾಧನೆ ಮಾಡಿದ ಅಧ್ಯಾಪಕ ವೃಂದದ ಅವರನ್ನು ಕಾಲೇಜಿನ ವತಿಯಿಂದ ಸಮ್ಮಾನಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ವಿಶ್ವನಾಥ್ ರವರು ಕಾಲೇಜಿನ ಸರ್ವತೋಮುಖ ಬೆಳವಣಿಗಾಗಿ ಸಂಘದ ವತಿಯಿಂದ ತಮ್ಮ ಅಮೂಲ್ಯವಾದ ಕೊಡುಗೆಗಳನ್ನು ನಗದು ಮೂಲಕ ಕಾಲೇಜಿನ ಸಂಚಾಲಕರು ಹಾಗೂ ಪ್ರಾಂಶುಪಾಲರಿಗೆ ಹಸ್ತಾಂತರಿಸಿ ವಿದ್ಯೆ ಕಳಿಸಿದ ಸಂಸ್ಥೆಗಳಿಗೆ ತಾವು ಸದಾ ಋಣಿ, ಕಾಲೇಜಿನ ಕೀರ್ತಿ ಬೆಳೆಸಿದ ರ್ಯಾಂಕ್ ವಿದ್ಯಾರ್ಥಿಗಳನ್ನು ಅಭಿನಂದಿಸಿ ಇನ್ನು ತಮ್ಮಿಂದ ಆಗುವಂತಹ ಒಳ್ಳೆಯ ಕಾರ್ಯಕ್ರಮಗಳನ್ನು ಆಯೋಜಿಸಲು ಕಾಲೇಜಿನ ವತಿಯಿಂದ ಅನುವುಮಾಡಿಕೊಡಬೇಕು ಎಂದು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂತ ಮೇರಿ ಸಮೂಹ ಸಂಸ್ಥೆಗಳ ಸಂಚಾಲಕರಾದ ಅತಿ ವಂದನೀಯ ಧರ್ಮಗುರುಗಳಾದ ಡೇನ್ನಿಸ್ ಅಲೆಕ್ಸಾಂಡರ್ ಡೇಸ ರವರು ನವೀಕೃತಗೊಂಡ ಸುಸಜ್ಜಿತ ಕಂಪ್ಯೂಟರುಗಳನ್ನು ಉದ್ಘಾಟಿಸಿ ಆಶೀರ್ವದಿಸಿದ್ದರು. ಕಾಲೇಜಿನ ದೊಡ್ಡ ಆಸ್ತಿ ಎಂದರೆ ಅದು ವಿದ್ಯಾರ್ಥಿಗಳೇ. ಎಲ್ಲಾ ವಿದ್ಯಾರ್ಥಿಗಳು ಅವರವರ ವಿವಿಧ ಚಟುವಟಿಕೆಗಳಲ್ಲಿ ಪ್ರತಿಭಾವಂತರಾಗಿರುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಗಳ ಬೆಳವಣಿಗೆಗಳಲ್ಲಿ ಶಿಕ್ಷಕರು, ಹೆತ್ತವರು ಹಾಗೂ ಪೋಷಕರ ಪಾತ್ರ ಮಹತ್ವದಾಗಿದೆ. ಹಳೆವಿದ್ಯಾರ್ಥಿ ಸಂಘ ವತಿಯಿಂದ ಕಲ್ಪಿಸುವ ಪ್ರತಿಯೊಂದು ಕೊಡುಗೆಯು ಶಿಕ್ಷಣ ಸಂಸ್ಥೆಯ ಬೆಳವಣಿಗೆ ಹಾಗೂ ಅವರ ಪ್ರೀತಿಪಾತ್ರ ದೊಡ್ಡದಾಗಿದೆ, ಎಲ್ಲರಿಗೂ ಒಳಿತಾಗಲಿ ಈ ಕೋವಿಡ್ ಅಂತ ಸಂಕಷ್ಟಗಳು ದೂರವಾಗಿ ಎಲ್ಲರೂ ನೆಮ್ಮದಿಯಿಂದ ಸುಖ ಜೀವನ ನಡೆಸಲಿ ಎಂದು ಹಾರೈಸಿದರು.
ಕಾಲೇಜಿನ ವಾರ್ಷಿಕ ಚಟುವಟಿಕೆಗಳನ್ನು ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ವಾಚಿಸಿದರು. ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಬಗ್ಗೆ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಹಾಗೂ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕರಾದ ಶ್ರೀ ಜಗದೀಶ್ ಆಚಾರ್ಯ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಸನ್ಮಾನ ಪಡೆದ ವಿದ್ಯಾರ್ಥಿಗಳು ಮಾತನಾಡಿದರು. ಶೈಕ್ಷಣಿಕ ಬಹುಮಾನಗಳ ಪಟ್ಟಿಯನ್ನು ಶ್ರೀ ವಿಠಲ್ ನಾಯಕ್ ರವರು ವಾಚಿಸಿದರು. ದತ್ತಿ ಬಹುಮಾನಗಳ ಪಟ್ಟಿಯನ್ನು ಶ್ರೀಮತಿ ದಿವ್ಯಶ್ರೀ ರವರು ವಾಚಿಸಿದರು.ಕ್ರೀಡೆ ಮತ್ತು ಆಟಗಳ ಬಹುಮಾನಗಳ ಪಟ್ಟಿಯನ್ನು ಶ್ರೀ ಜೆಫ್ ಡಿಸೋಜಾ ವಾಚಿಸಿದರು. ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಮುಖ್ಯ ಅತಿಥಿಗಳು ಹಾಗೂ ಅಧ್ಯಕ್ಷರು ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಕಚೇರಿ ಅಧ್ಯಕ್ಷಕಿ ಶ್ರೀಮತಿ ಡೊರಿನ್ ಡಿ’ಸಿಲ್ವ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷಕಿ ಜೆಸಿಂತಾ ಡಿಸೋಜ, ಆಡಳಿತ ಮಂಡಳಿಯ ಸದಸ್ಯ ಲೀನಾ ಮಚಾದೊ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶೈಲ ವಿಯೋಲ ಕ್ಯಾಸ್ಟಲಿನೋ ಹೆತ್ತವರು ಹಾಗೂ ಪೋಷಕರು, ಶಿಕ್ಷಕ ಶಿಕ್ಷಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿರ್ದೇಶಕಿ ಕು.ಯಶೋದಾ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ವಿದ್ಯಾರ್ಥಿ ನಾಯಕಿ ದಾಕ್ಷಾಯಿಣಿ ವಂದಿಸಿದರು. ಶ್ರೀಮತಿ ಸುಷ್ಮಾ ಕಾರ್ಯಕ್ರಮ ನಿರೂಪಿಸಿದರು.