ಗಾನ ಗಾರುಡಿಗ ದಿ ||ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಪ್ರಥಮ ವರ್ಷದ ಸಂಸ್ಮರಣೆ ಮತ್ತು ಗಾನ ನಮನ ಕಾರ್ಯಕ್ರಮ

Share the Article

ಸುಳ್ಯ : ಇಂದು ಖ್ಯಾತ ಗಾಯಕ ದಿ|ಎಸ್ ಪಿ ಬಿ ಅವರ ಪ್ರಥಮ ವರ್ಷದ ಸಂಸಾರಾನಾ ಕಾರ್ಯಕ್ರಮವು ನಮ್ಮ ಫೈವ್ ಸ್ಟಾರ್ ಸಂಗೀತ ಬಳಗ ಮತ್ತು ತಮಿಳು ಕಲಾವಿದರ ವೇದಿಕೆ ವತಿಯಿಂದ ಸುಳ್ಯದ ಸಪ್ತಸ್ವರ ಸಂಗೀತ ಶಾಲೆಯಲ್ಲಿ ನಡೆಯಿತು.

ಎರಡು ಬಳಗದ ಅಧ್ಯಕ್ಷರುಗಳಾದ ಎಚ್ .ಭೀಮರಾವ್ ವಾಷ್ಠರ್ ಮತ್ತು ಕಣ್ಣಾದಾಸನ್ ಎಸ್ ರವರು ಎಸ್ ಪಿ ಬಾಲಸುಬ್ರಹ್ಮಣ್ಯ ಅವರ ಬಗ್ಗೆ ನುಡಿನಮನ ಸಲ್ಲಿಸಿದರು . ಮುತ್ತುಕುಮಾರಿ ಮತ್ತು ಗಾಯಕ ದೇವದಾಸ್ ರವರು ಉಪಸ್ಥಿತರಿದ್ದರು . ಖ್ಯಾತ ಗಾಯಕ ಮಿಥುನ್ ರಾಜ್ ವಿದ್ಯಾಪುರ್ ಅವರು ವಿಶೇಷ ಅತಿಥಿಯಾಗಿ ಆಗಮಿಸಿ ಹಾಡಿ ಗಾನನಮನ ಸಲ್ಲಿಸಿದರು. ಒಟ್ಟು 15 ಗಾಯಕರು ಗಾನಗಾರುಡಿಗ ಎಸ್ ಪಿ ಬಾಲಸುಬ್ರಹ್ಮಣ್ಯಂ ರವರು ಹಾಡಿದ ಹಾಡುಗಳನ್ನು ಹಾಡಿ ಗಾನ ನಮನ ನಡೆಸಿದರು . ಕಾರ್ಯಕ್ರಮದ ಮುಂಚೆ ಸ್ವರ ಸಾಮ್ರಾಟ ಎಸ್ ಪಿ ಅವರಿಗೆ ಪುಷ್ಪನಮನ ಸಲ್ಲಿಸಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿದರು .

ಗಾಯಕರಾದ ಪೆರುಮಾಳ್ ಲಕ್ಷ್ಮಣ್ ಐವರ್ನಾಡು , ಕುಸುಮಾಧರ್ ರೈ ಬೂಡು , ಗಣೇಶ್ ಬಿ ಎಸ್ , ಹರಿಪ್ರಸಾದ್ ಪಿ , ಸನೀಲ್ ಕಾಸರಗೋಡು , ಅಶ್ವಿಜ್ ಆತ್ರೇಯ ಜಿ ಆರ್ ಸುಳ್ಯ , ಅವನಿ ಎಮ್ ಎಸ್ ಸುಳ್ಯ , ವಂಶಿಕಾ ಐವರ್ನಾಡು , ಕಾವ್ಯಶ್ರೀ ಗಣೇಶ್ , ಗಾನವಿ , ನವ್ಯ ಎಮ್ ಆರ್ ಪುತ್ತೂರು ಇನ್ನಿತರರು ಈ ಗಾನ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು . ಪರಿಮಳ ಐವರ್ನಾಡು ಮತ್ತು ರಮೇಶ್ ಬಿ ಐವರ್ನಾಡು ಕಾರ್ಯಕ್ರಮ ನಿರೂಪಿಸಿದರು .

Leave A Reply