ಕಡಬ : ಮಸಾಜ್ ಸೆಂಟರ್‌ನಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ | ಓರ್ವನ ಬಂಧನ

Share the Article

ಕಡಬ:ಇಲ್ಲಿನ ಕಳಾರದಲ್ಲಿರುವ ಮಸಾಜ್ ಸೆಂಟರ್‌ನಲ್ಲಿ
ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಮಸಾಜ್ ಸೆಂಟರ್ ಮಾಲಕ ಅಬ್ರಹಾಂ ಎಂಬಾತನನ್ನು ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಕಳೆದ ಕೆಲವು ಸಮಯಗಳಿಂದ ಇಲ್ಲಿ ಮಸಾಜ್ ಸೆಂಟರ್ ಕಾರ್ಯಾಚರಿಸುತ್ತಿದ್ದು ಮಸಾಜ್‌ಗೆ ಬರುವ ಮಹಿಳೆಯರಿಗೆ ಮತ್ತು ಅಲ್ಲಿ ಕೆಲಸ ಮಾಡಿಕೊಂಡಿರುವ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊರಿಸಲಾಗಿದೆ.

ಮಾತ್ರವಲ್ಲದೆ ಕೇರಳ ಮೂಲದ ಹುಡುಗಿಯೋರ್ವರನ್ನು ಈತ ಜತೆಗೆ ಇಟ್ಟುಕೊಂಡಿರುವುದಾಗಿಯೂ ಆರೋಪವಿದೆ.ಘಟನೆಗೆ ಸಂಬಂಧಿಸಿ ನೊಂದ ಮಹಿಳೆಯರು ಇದೀಗ ಪೊಲೀಸರಿಗೆ ದೂರು ನೀಡಿದ್ದು ಆರೋಪಿಯನ್ನು ಪೋಲಿಸರು ರಾತ್ರಿ ವೇಳೆ ವಶಕ್ಕೆ ತೆಗೆದುಕೊಂಡಿರುವುದಾಗಿ ವರದಿಯಾಗಿದೆ.

ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ಠಾಣೆಯಲ್ಲಿ ಸೇರಿದ್ದ ಮಹಿಳೆಯರು ಮಾಧ್ಯಮಕ್ಕೆ ತಿಳಿಸಿದ್ದಾರೆ.

Leave A Reply