ಬೆಂಗಳೂರು:ಮಗನನ್ನು ಶಾಲೆಗೆ ಸೇರಿಸಲು ಬಂದ ಮಹಿಳೆಯಿಂದ ಮುಖ್ಯ ಶಿಕ್ಷಕನಿಗೆ ಮಸಾಜ್!!ತನ್ನ ಶರ್ಟ್ ಬಿಚ್ಚಿ ಮೈ ಉಜ್ಜಿಸಿಕೊಂಡ ಶಿಕ್ಷಕನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್

Share the Article

ಮಗನನ್ನು ಶಾಲೆಗೆ ಸೇರಿಸಲು ಬಂದ ಮಹಿಳೆಯ ಬಳಿ, ಮುಖ್ಯ ಶಿಕ್ಷಕನೋರ್ವ ತನ್ನ ಮೈಗೆ ಮಸಾಜ್ ಮಾಡಿಸಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಮಸಾಜ್ ಮಾಡಿಸಿಕೊಳ್ಳುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿ ಸದ್ಯ ವೈರಲ್ ಆಗಿದೆ.

ಘಟನೆ ವಿವರ:ತನ್ನ ಮಗನನ್ನು ಬೆಂಗಳೂರಿನ ಕೋದಂಡರಾಮಪುರದ ಬಿಬಿಎಂಪಿ ಶಾಲೆಗೆ ಸೇರಿಸಲೆಂದು ಬಂದ ಮಹಿಳೆಯನ್ನು ತನ್ನ ಮೈ ಮಸಾಜ್ ಮಾಡಿಸಿಕೊಂಡ ಶಿಕ್ಷಕ ಲೋಕೇಶ್ ಎಂದು ಗುರುತಿಸಲಾಗಿದೆ. ಕೆಲ ಸಮಯದ ಹಿಂದೆ ವರ್ಗಾವಣೆಗೊಂಡು ಬಂದಿದ್ದ ಈ ಮುಖ್ಯ ಶಿಕ್ಷಕ ಅಂತಿಥ ಕಾಮುಕನಲ್ಲ. ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಶಾಲೆಯ ಸೆಕ್ಯೂರಿಟಿ ಗಾರ್ಡ್ ನ ಮಗಳನ್ನು, ಹಾಗೂ ಹಾಲು ಕರೆಯುತ್ತಿದ್ದ ಮಹಿಳೆಯನ್ನು ಕೆಡಿಸಿದ ಬಗ್ಗೆಯೂ ಈತನ ಮೇಲೆ ಆರೋಪಗಳಿವೆ.

ಸದ್ಯ ಈತನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೂಡಲೇ ಇಚ್ಚೆತ್ತ ಶಿಕ್ಷಣ ವಿಭಾಗದ ಆಯುಕ್ತರು ಈತನನ್ನು ಸೇವೆಯಿಂದ ಅಮಾನತು ಮಾಡಿ ವಿಚಾರಣೆಗೆ ನೋಟಿಸ್ ನೀಡಿದ್ದಾರೆ.ಈತನ ಕಾಮ ಚೇಷ್ಟೆಯಿಂದ ಶಿಕ್ಷಕ ಸಮುದಾಯಕ್ಕೆ ಒಂದು ಕಪ್ಪು ಚುಕ್ಕೆ ಬಂದಿರುವುದಂತೂ ಸಹಜ.

Leave A Reply