ಪ್ರೀತಿಯ ನಾಟಕವಾಡಿ ಆಕೆಯ ಹೊಟ್ಟೆ ತುಂಬಿಸಿ ಆ ಬಳಿಕ ಕೈಕೊಟ್ಟ ಯುವಕ!!ಇತ್ತ ಮೋಸಹೋದ ಯುವತಿಯಿಂದ ಠಾಣೆಯಲ್ಲಿ ಯುವಕನ ಮುಖಕ್ಕೆ ಮಂಗಳಾರತಿ
ಮದುವೆಯಾಗುವುದಾಗಿ ನಂಬಿಸಿ,ಸಿಕ್ಕ ಸಿಕ್ಕಲ್ಲಿಗೆ ಸುತ್ತಾಡಿ, ಪುಸಲಾಯಿಸಿ ದೈಹಿಕ ಸಂಪರ್ಕ ಬೆಳೆಸಿ, ಆ ಬಳಿಕ ಅಬೋರ್ಷನ್ ಕೂಡಾ ಮಾಡಿಸಿ ಕೊನೆಗೆ ಮದುವೆಯಾಗುವುದಿಲ್ಲ ಯಾವ ಸಂಬಂಧವೂ ಬೇಡವೆಂದ ಯುವಕನಿಗೆ ಮೋಸ ಹೋದ ಯುವತಿ ಪೊಲೀಸ್ ಠಾಣೆಯಲ್ಲೇ ಕಪಾಳ ಮೋಕ್ಷ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಘಟನೆ ವಿವರ:ಬೆಂಗಳೂರಿನ ಕಾರ್ ಶೋ ರೂಮ್ ಒಂದರಲ್ಲಿ ಕೆಲ ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ ಕಲಬುರಗಿ ನಿವಾಸಿ ಇರ್ಫಾನ್ ಎಂಬಾತ ಬೆಂಗಳೂರಿನ ನಿವಾಸಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ರಹೀನ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಇಬ್ಬರ ಪ್ರೀತಿಯು ಐದು ವರ್ಷಗಳಿಂದ ಅನ್ಯೋನ್ಯವಾಗಿತ್ತು. ಈ ಮಧ್ಯೆ ಜಾಲಿ ರೈಡ್, ಟ್ರಿಪ್, ಪಾರ್ಕ್ ಗೆಲ್ಲಾ ಆಕೆಯೊಂದಿಗೆ ಸುತ್ತಾಡಿದ್ದ ಇರ್ಫಾನ್ ಆಕೆಯನ್ನು ಪುಸಲಾಯಿಸಿ ಹೊಟ್ಟೆ ತುಂಬಿಸಿದ್ದ.ಮದುವೆಗೆ ಮುಂಚೆ ಮಗು ಬೇಡ ಎಂದು ನಿರ್ಧರಿಸಿ ಆಕೆಗೆ ಅಬೋರ್ಷನ್ ಕೂಡಾ ಮಾಡಿಸಿದ್ದ.
ಆ ಬಳಿಕ ಕಲಬುರಗಿಯ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಇಬ್ಬರ ಮದುವೆ ನೋಂದಣಿಯೂ ನಡೆದಿತ್ತು ಎಂದು ಹೇಳಲಾಗಿದೆ.ಆದರೆ ಈಗ ಇದ್ಯಾವುದೂ ನಡೆದೇ ಇಲ್ಲ, ನಾನು ಆಕೆಯನ್ನು ಪ್ರೀತಿಸಿರಲಿಲ್ಲ ಎಂದು ಕಥೆ ಕಟ್ಟಿದ ಇರ್ಫಾನ್, ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಯುವತಿ, ಕಲಬುರಗಿ ಪೊಲೀಸ್ ಠಾಣೆಗೆ ತೆರಳಿ ದೂರನ್ನು ನೀಡಿದ್ದು, ಇರ್ಫಾನ್ ನ ಕಚಡಾ ಮುಖಕ್ಕೆ ಸರಿಯಾಗಿ ಬಾರಿಸಿದ್ದಾಳೆ. ಸದ್ಯ ಇವರಿಬ್ಬರ ಲವ್, ಸೆಕ್ಸ್, ದೋಖಾ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಪೊಲೀಸರಿಂದ ನ್ಯಾಯ ದೊರೆಯಬೇಕಾಗಿದೆ.