ಮೌಂಟ್ ಎವರೆಸ್ಟ್ ನಲ್ಲಿ ರಾರಾಜಿಸುತ್ತಿದೆ ತುಳುನಾಡ ಧ್ವಜ!!| ಎವರೆಸ್ಟ್ ಏರಿ ತುಳುನಾಡ ಧ್ವಜವನ್ನು ಪ್ರದರ್ಶಿಸಿ ತುಳುವರ ಹೆಮ್ಮೆಗೆ ಪಾತ್ರರಾದ ಪ್ರಸಾದ್ ವಿಜಯ್ ಶೆಟ್ಟಿ

Share the Article

ಕಾರ್ಕಳ: ಹಿಮಾಲಯ ಶ್ರೇಣಿಯ ಮೌಂಟ್ ಸತೊಪಂಥನ ಯಾತ್ರೆ ಕೈಗೊಂಡಿದ್ದ ನೆಲ್ಲಿಕಾರು ಪ್ರಸಾದ್ ವಿಜಯ್ ಶೆಟ್ಟಿ ಅವರು ಎತ್ತರದ ಎವರೆಸ್ಟ್ ಏರಿ ತುಳುನಾಡ ಧ್ವಜವನ್ನು ಪ್ರದರ್ಶಿಸುವ ಮೂಲಕ ತುಳುವರ ಹೆಮ್ಮೆಗೆ ಪಾತ್ರರಾಗಿದ್ದಾರೆ.

ಪ್ರಸಾದ್ 7075 ಮೀ. ಎತ್ತರದ ಎವರೆಸ್ಟ್ ಏರಿ ರಾಷ್ಟ್ರಧ್ವಜದ ಜೊತೆಗೆ ಹೆಮ್ಮೆಯ ತುಳುನಾಡ ಧ್ವಜವನ್ನೂ ಪ್ರದರ್ಶಿಸಿದ್ದು,ನನಗೆ ಇದು ಸಂತಸ ತಂದಿದೆ ಎಂದು ಅವರು ಖುಷಿ ವ್ಯಕ್ತಪಡಿಸಿದ್ದಾರೆ.

ಸಮುದ್ರ ಮಟ್ಟದಿಂದ 7,075 ಮೀ. ಎತ್ತರದ ಸತೊಪಂಥ್ ಹಿಮಾಲಯ ಪರ್ವತ ಶ್ರೇಣಿಗಳ ಉತ್ತರಾ ಖಂಡ್‌ನ ಗರ್ವಾಲ್ ವಿಭಾಗದಲ್ಲಿದೆ. ವೃತ್ತಿನಿರತ ಪರ್ವಾತ ರೋಹಿಗಳ ದಕ್ಷತೆ, ಕಠಿನ ಮನಸ್ಥೆರ್ಯದ ತರಬೇತಿಗಾಗಿ ಈ ವಿಶೇಷ ಯಾತ್ರೆಯನ್ನು ಪ್ರಸಾದ್ ವಿಜಯ್ ಶೆಟ್ಟಿ ನೇತೃತ್ವದ ಐದು ಮಂದಿಯ ತಂಡ
ಕೈಗೊಂಡಿತ್ತು.

21 ದಿನಗಳ ಯಾತ್ರೆಯನ್ನು ತೀವ್ರ ಹವಾಮಾನ ವೈಪರೀತ್ಯದ ಕಾರಣ ಸತೊಪಂಥ್ ಸಮ್ಮಿಟ್ ಬೇಸ್ ಕ್ಯಾಂಪ್ ನಲ್ಲಿ 6,000 ಮೀ.ವ್ಯಾಪ್ತಿಯಲ್ಲಿ ಸ್ಥಗಿತಗೊಳಿಸಿದರು.

Leave A Reply