ಬೋರ್ವೆಲ್ ಗೆ ಬಿದ್ದು ಮಗು ಮೃತ ಪಟ್ಟ ಪ್ರಕರಣಕ್ಕೆ ಇದೀಗ ಟ್ವಿಸ್ಟ್!!!|ತನಿಖೆಯ ಬಳಿಕ ಬಯಲಾಯಿತು ಪಾಪಿ ತಂದೆಯ ಹೀನ ಕೃತ್ಯ|ಮಗುವಿನ ತಂದೆ ಈಗ ಪೋಲಿಸರ ವಶಕ್ಕೆ!!

Share the Article

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಆಲಖನೂರ ಗ್ರಾಮದ ಬಳಿ ಬೋರ್ವೆಲ್ ಗೆ ಬಿದ್ದು ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಗುವಿನ ತಂದೆಯನ್ನು ಬಂಧಿಸಿದ್ದಾರೆ.

ಸಿದ್ದಪ್ಪ ಮತ್ತು ರಾಜಶ್ರೀ ದಂಪತಿಯ ಎರಡೂವರೆ ವರ್ಷದ ಮಗ ಶರತ್ ಸೆ. 17 ರಂದು ಸಂಜೆ ಆಟವಾಡುತ್ತಿದ್ದ ಸಂದರ್ಭದಲ್ಲಿ ನಾಪತ್ತೆಯಾಗಿದ್ದ.

ಶರತ್ ಬೋರ್ವೆಲ್ ಗೆ ಬಿದ್ದ ಮಾಹಿತಿ ಸೆ. 18 ರಂದು ಸಂಜೆ ಗೊತ್ತಾಗಿದ್ದು, ಮಾಹಿತಿ ತಿಳಿದ ಕೂಡಲೇ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದರು.

ಬೋರ್ವೆಲ್ ಗೆ ಬಿದ್ದಿರುವ ಬಾಲಕ ಮೃತಪಟ್ಟಿರುವುದು ಪರಿಶೀಲನೆ ಸಂದರ್ಭದಲ್ಲಿ ಗೊತ್ತಾಗಿದೆ. ಮೃತದೇಹ ತೆಗೆದ ಸಂದರ್ಭದಲ್ಲಿ ಪೊಲೀಸರಿಗೆ ಅನುಮಾನ ಬಂದಿದ್ದು, ಬಳಿಕ ಆತನ ತಂದೆ ಸಿದ್ದಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ.

ಮಗು ಆಟವಾಡುತಿದ್ದ ಸಂದರ್ಭದಲ್ಲಿ ಬಿದ್ದಿರಬಹುದು ಎಂದುಕೊಂಡಿದ್ದ ಮನೆಯವರಿಗೆ ಇದೀಗ ಶಾಕ್ ಆಗಿದೆ.ಪಾಪಿ ತಂದೆ ಎರಡುವರೆ ವರ್ಷದ ಕಂದನ ಕತ್ತು ಹಿಸುಕಿ ಕೊಲೆ ಮಾಡಿ ಕಾಲಿಗೆ ಹಗ್ಗ ಕಟ್ಟಿ ಬೋರ್ವೆಲ್ ಗೆ ಇಳಿಬಿಟ್ಟಿದ್ದಾನೆ. ಬಳಿಕ ಕಿಡ್ನಾಪ್ ದೂರು ದಾಖಲಿಸಿದ್ದಾನೆ.

ತನ್ನ ತಪ್ಪು ಯಾರಿಗೂ ತಿಳಿಯದಂತೆ ಆತನೂ ಕುಟುಂಬದವರೊಂದಿಗೆ ಸೇರಿ ಹುಡುಕಾಟ ನಡೆಸಿದ್ದಾನೆ. ಇದೀಗ ನಿಜರೂಪ ಬಯಲಾದ ಬಳಿಕ ಪೊಲೀಸರು ಸಿದ್ದಪ್ಪನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.ತಂದೆಯ ಕ್ರೂರ ಬುದ್ದಿಗೆ ಮಗುವಿನ ತಾಯಿ ಹಾಗೂ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ ಎನ್ನಲಾಗಿದೆ.

Leave A Reply