ಎರಡು ಗಂಟೆಗಳ ಕಾಲ ಬಾಲಕಿಯ ಕೊರಳಿಗೆ ಸುತ್ತಿಕೊಂಡ ನಾಗರ ಹಾವು | ಉರಗ ತಜ್ಞನಿಂದಲೂ ಕಾಪಾಡಲು ಆಗಲಿಲ್ಲ ಆ ಬಾಲಕಿಯನ್ನು !!

ಮಲಗಿದ್ದ ಬಾಲಕಿಯ ಕುತ್ತಿಗೆಗೆ ಸುಮಾರು ಎರಡು ಗಂಟೆಗಳ ಕಾಲ ನಾಗರಹಾವು ಸುತ್ತಿಕೊಂಡಿದ್ದು,ಕೊನೆಗೆ ಆಕೆಯನ್ನು ಕಚ್ಚಿ ರಭಸದಿಂದ ಹಾವು ಹೋದ ಘಟನೆ ಮಹಾರಾಷ್ಟ್ರದ ವಾರ್ಧಾದಲ್ಲಿ ನಡೆದಿದೆ.

 

ಬಾಲಕಿ ನಿದ್ದೆಯಲ್ಲಿ ಇದ್ದ ಕಾರಣ ಆಕೆಗೆ ಇದರ ಅರಿವೇ ಇರಲಿಲ್ಲ. ಕೊನೆಗೆ ಸುಮಾರು ಎರಡು ಗಂಟೆ ಅಲ್ಲಿಯೇ ಇದ್ದ ಹಾವು ಆಕೆ ಎಚ್ಚರವಾದ ಬಳಿಕ ಅಲ್ಲಾಡಿದ್ದರಿಂದ ಹಾವು ಆಕೆಗೆ ಕಚ್ಚಿ ಓಡಿದೆ.ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು,ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಮಧ್ಯರಾತ್ರಿ ಸುಮಾರು 12-1 ಗಂಟೆಯವೇಳೆ ಈ ಘಟನೆ ನಡೆದಿದ್ದು, ಏಳು ವರ್ಷದ ಬಾಲಕಿ ಮಲಗಿದ್ದಾಗ ಈ ಹಾವು ಬಂದಿದೆ. ಅದರ ಬುಸ್ ಬುಸ್ ಸದ್ದಿನಿಂದ ಆಕೆಯ ಪಾಲಕರಿಗೆ ಎಚ್ಚರವಾಗಿದೆ. ಎದ್ದು ನೋಡಿದಾಗ ಗಾಬರಿಬಿದ್ದಿದ್ದಾರೆ.

ಅಷ್ಟರಲ್ಲಿಯೇ ಹಾವು ಹೆಡೆ ಎತ್ತಿ ನಿಂತಿದ್ದು, ಮನೆಯವರಿಗೆ ಏನು ಮಾಡುವುದು ಎಂದು ತಿಳಿಯದೆ ಅವರು ಕೂಡಲೇ ಉರಗ ತಜ್ಞನಿಗೆ ಕರೆ ಮಾಡಿದ್ದಾರೆ. ಆದರೆ ಹೆಡೆ ಒಂದು ಬಿಟ್ಟು ಸಂಪೂರ್ಣ ಹಾವು ಕುತ್ತಿಗೆಗೆ ಸುತ್ತಿಕೊಂಡಿದ್ದರಿಂದ ಆ ಸಮಯದಲ್ಲಿ ಅದನ್ನು ಹಿಡಿಯುವುದು ತಜ್ಞನಿಗೂ ಕಷ್ಟವಾಯಿತು. ಸ್ವಲ್ಪ ಹತ್ತಿರ ಹೋದರೂ ಹಾವು ಬಾಲಕಿಗೆ ಕಚ್ಚುವ ಸಾಧ್ಯತೆ ಇತ್ತು. ಆದರೂ ತನ್ನ ಕೈಯಲ್ಲಾದದ್ದನ್ನು ಆತ ಮಾಡಿದರೂ ಹಾವನ್ನು ಹಿಡಿಯಲು ಆಗಲಿಲ್ಲ.

ಈ ಘಟನೆ ತಿಳಿಯುತ್ತಿದ್ದಂತೆಯೇ ಅಕ್ಕಪಕ್ಕದ ಮನೆಯವರ ಸ್ಥಳಕ್ಕೆ ಬಂದು ಅದರ ವಿಡಿಯೋ ಮಾಡಿದ್ದಾರೆ. ಅದರ ವಿಡಿಯೋ ವೈರಲ್ ಆಗಿದೆ.

ಎಲ್ಲರೂ ಅಸಹಾಯಕರಾಗಿ ಬಿಟ್ಟಿದ್ದರು.ಬಾಲಕಿಯ ಸ್ಥಿತಿ ಗಂಭೀರವಾಗಿದ್ದರಿಂದ ಬೇರೊಂದು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.

Leave A Reply

Your email address will not be published.