ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ಸಾಕಾಣಿಕೆ, ಅವುಗಳ ಆಹಾರ ಪದ್ಧತಿಯ ಅರಿವು ಮೂಡಿಸುತ್ತಿರುವ ಉತ್ಸಾಹಿ ಯುವಕ,ಪ್ರಾಣಿಪ್ರಿಯ ಸೌರಭ್ ಕಡಬ!!

ಸಾಮಾಜಿಕ ಜಾಲತಾಣವೆಂದರೆ ಸಾಕು,ನಿತ್ಯ ಜೀವನಕ್ಕೆ ಬೇಕಾದ ಉತ್ತಮ ಅಂಶಗಳು ಅಲ್ಲಿ ಸಿಗುತ್ತವೆ. ಮುಂದುವರಿದ ಭಾರತದಲ್ಲಿ ಎಲ್ಲವೂ ಡಿಜಿಟಲ್ ಆಗಿದ್ದು, ಇದರಿಂದ ಹಲವರು ತಮ್ಮ ಪ್ರತಿಭೆ ಪ್ರದರ್ಶಿಸಲು, ತಿಳುವಳಿಕೆ ನೀಡಲು ಸಾಮಾಜಿಕ ಜಾಲತಾಣವನ್ನು ಬಳಸುತ್ತಿದ್ದಾರೆ. ಅಡುಗೆ ವಿಚಾರದಲ್ಲಿ ತರಬೇತಿ,ಕಲೆಗಾರಿಕೆಯ ತರಬೇತಿ, ಸದ್ಯ ಶಾಲಾ ಪಠ್ಯ ಕ್ರಮಗಳು ಕೂಡಾ ಆನ್ಲೈನ್ ಮುಖಾಂತರವೇ ನಡೆಯುತ್ತಿದೆ.

 

ಸದ್ಯ ಇಲ್ಲೊಬ್ಬ ಯುವಕ ಪ್ರಾಣಿಗಳ ಸಾಕಾಣಿಕೆ, ಅವುಗಳ ಆಹಾರ ಹಾಗೂ ಅವುಗಳ ಆರೋಗ್ಯದ ಬಗೆಗಿನ ಕಾಳಜಿ ಹೊತ್ತ ವೀಡಿಯೋಸ್ ಗಳನ್ನು ಮಾಡಿ ತನ್ನ ಸ್ವಂತ ಯು ಟ್ಯೂಬ್ ಚಾನೆಲ್ ನಲ್ಲಿ ಹರಿಯಬಿಡುತ್ತಿದ್ದು, ಆ ಮೂಲಕ ಪ್ರಾಣಿ ಪ್ರಿಯರ ಮನಗೆದ್ದಿದ್ದಾರೆ.

ಹೌದು. ಸೌರಭ್ ಎನ್ನುವ ಯುವಕ ಕಡಬದ ಮುಖ್ಯ ಪೇಟೆಯಲ್ಲಿ ತನ್ನ ಪೆಟ್ ಶಾಪ್ ಒಂದನ್ನು ತೆರೆದು, ಪ್ರಾಣಿ ಪಕ್ಷಿ, ಮತ್ಸ್ಯಗಳ ಸಹಿತ ಅವುಗಳ ಆಹಾರವನ್ನು ಮಾರಾಟ ನಡೆಸುತ್ತಿದ್ದೂ,ಜನರ ವಿಶ್ವಾಸ ಗಳಿಸಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಶಾಪ್ ಓಪನ್ ಮಾಡಲು ಅನುಮತಿ ಇಲ್ಲದ ಕಾರಣದಿಂದಾಗಿ, ತನ್ನ ಗೆಳೆಯ ಅಭಿಷಯ್ ಜೊತೆಗೂಡಿ ಆನ್ ಲೈನ್ ಮುಖಾಂತರವೇ ಪ್ರಾಣಿಗಳ ಆಹಾರ ಪದ್ಧತಿ ಅವುಗಳ ಸಾಕಾಣಿಕೆಯನ್ನು ಪ್ರಾಣಿ ಪ್ರಿಯರಿಗೆ ತಿಳಿಸಿಕೊಡುವಲ್ಲಿ ಪ್ರಯತ್ನನಿಸುತ್ತಿದ್ದಾರೆ. ‘ಫೀಟ್ ಇನ್ ಕುಡ್ಲ’ ಎಂಬ ಹೆಸರಿನ ಯು ಟ್ಯೂಬ್ ಚಾನೆಲ್ ಸದ್ಯ ಎಲ್ಲಾ ಜಾಲತಾಣ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ಸದ್ಯ ಲಕ್ಕಿ ಲವ್ ಸ್ಟೋರಿ ಎಂಬ ಹೊಸ ಪ್ರಯತ್ನವನ್ನು ನಡೆಸಿದ್ದು, ನಾಯಿ ಮರಿಗಳು ಪರಸ್ಪರ ಪ್ರೀತಿಸುವ ಸನ್ನಿವೇಶಗಳು ಈ ಕಥೆಯಲ್ಲಿದ್ದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಮೆಚ್ಚುಗೆ ಗಳಿಸಿದೆ. ಈ ಪ್ರದರ್ಶನದಲ್ಲಿ ಮಾತುಗಾರಿಕೆ ಅಷ್ಟಿಲ್ಲದಿದ್ದರೂ, ನಾಯಿ ಮರಿಗಳ ಮೂಕ ಪ್ರೀತಿ ವೀಕ್ಷಕರಿಗೆ ಹೆಚ್ಚಿನ ಖುಷಿ ನೀಡಿರುವುದಂತೂ ಸತ್ಯ.ಹಳ್ಳಿ ಯುವಕನ ಪ್ರಯತ್ನಕ್ಕೆ ಫಲ ಸಿಗಲಿ, ಆ ಮೂಲಕ ಹತ್ತಾರು ಜನರು ಪ್ರಾಣಿ ಸಾಕಾಣಿಕೆಯ ಬಗೆಗೆ ಅರಿವು ಮೂಡಿಸಿಕೊಳ್ಳಲಿ, ಅತೀ ಹೆಚ್ಚು ವೀಕ್ಷಣೆ ಪಡೆದು ಮೆಚ್ಚುಗೆ ಗಳಿಸಲಿ ಎಂಬುವುದೇ ನಮ್ಮ ಆಶಯ.

Leave A Reply

Your email address will not be published.