ಸರ್ಕಾರದ ಮುಖ್ಯ ಸಚೇತಕರಾಗಿ ಸಂಜೀವ ಮಠಂದೂರು ಆಯ್ಕೆ ಸಾಧ್ಯತೆ
ಪುತ್ತೂರು : ಬೆಂಗಳೂರಿನಲ್ಲಿ ವಿಧಾನ ಸಭೆ ಅಧಿವೇಶನ ಇಂದಿನಿಂದ ಆರಂಭಗೊಳ್ಳಲಿದ್ದು ಅದಕ್ಕೂ ಮೊದಲು ಸರ್ಕಾರದ ಮುಖ್ಯ ಸಚೇತಕ ಹುದ್ದೆ ಆಯ್ಕೆ ನಡೆಯುವ ಸಾಧ್ಯತೆಯಿದೆ.
ಈ ಸ್ಥಾನಕ್ಕೆ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರಿಗೆ ಲಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಆರು ತಿಂಗಳ ಬಳಿಕ ಹಾಗೂ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ ಈ ಅಧಿವೇಶನ ನಡೆಯಲಿದೆ . ಅದಕ್ಕೂ ಮೊದಲು ಬಿಜೆಪಿ ಶಾಸಕಾಂಗ ಸಭೆ ನಡೆಯುವ ನಿರೀಕ್ಷೆಯಿದೆ.
ಸಭೆಯಲ್ಲಿ ಅಥಾವ ಸಭೆಯ ಬಳಿಕ ಅಧಿವೇಶನ ಆರಂಭಕ್ಕೂ ಮೊದಲು ಸರ್ಕಾರದ ಮುಖ್ಯ ಸಚೇತಕ ಹುದ್ದೆಗೆ ನೇಮಕ ನಡೆಯುವ ಸಾಧ್ಯತೆ ದಟ್ಟವಾಗಿದೆ.
ಸರ್ಕಾರದ ಮುಖ್ಯ ಸಚೇತಕ ಹುದ್ದೆಗೆ ಆಡಳಿತ ಪಕ್ಷದ ಶಾಸಕರೊಬ್ಬರು ನೇಮಕವಾಗಲಿದ್ದೂ ಆ ಸ್ಥಾನ ಕರಾವಳಿ ಕರ್ನಾಟಕದ ಪಾಲಾಗುವ ಸಾಧ್ಯತೆ ಅಧಿಕ.
ಈ ಹಿಂದೆ ಈ ಹುದ್ದೆಯಲ್ಲಿದ್ದ ಕರಾವಳಿ ಜಿಲ್ಲೆಯವರೇ ಆದ ವಿ.ಸುನೀಲ್‌ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸಚಿವರಾಗಿದ್ದಾರೆ. ಇದರಿಂದ ಹುದ್ದೆ ಖಾಲಿಯಾಗಿದ್ದು, ಹೊಸಬರನ್ನು ಆಯ್ಕೆ ಮಾಡಬೇಕಿದೆ.
ಸೋಮವಾರ ನಡೆಯುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.