ಬೈಕ್ ಸವಾರರಿಗೆ ಮಹತ್ವದ ಆದೇಶ ನೀಡಿದ ಹೈಕೋರ್ಟ್|ಇನ್ನು ಮುಂದೆ ಬೈಕ್ ಅಪಘಾತವಾದರೆ ಮೂರನೇ ಸವಾರನಿಗೂ ದೊರೆಯಲಿದೆ ವಿಮೆ!!
ಬೆಂಗಳೂರು : ಇನ್ನು ಮುಂದೆ ಬೈಕ್ ನಲ್ಲಿ ಮೂವರು ಸವಾರಿ ಮಾಡುತ್ತಿರುವ ಸಂದರ್ಭದಲ್ಲಿ ಬೈಕ್ ಅಪಘಾತವಾದರೆ ಮೂರನೇ ಸವಾರನಿಗೂ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
2011ರಲ್ಲಿ ಕಲಬುರ್ಗಿಯಲ್ಲಿ ನಡೆದಿದ್ದ ಅಪಘಾತ ಪ್ರಕರಣದಲ್ಲಿ ಮೂರನೇ ಸವಾರರಿಗೂ ವಿಮೆ ನೀಡಬೇಕು ಎಂದು ಮೋಟಾರು ವಾಹನ ನ್ಯಾಯಮಂಡಳಿ 2012ರಲ್ಲಿ ನೀಡಿದ್ದ ಆದೇಶವನ್ನು ವಿಮಾ ಕಂಪನಿ ಪ್ರಶ್ನಿಸಿತ್ತು.
ಒಂದೇ ಬೈಕ್‌ನಲ್ಲಿ ಮೂವರು ಪ್ರಯಾಣಿಸುವ ಮೂಲಕ ವಿಮಾ ಷರತ್ತು ಉಲ್ಲಂಘಿಸಲಾಗಿದೆ. ಬೈಕ್ ಸವಾರ ಸರಿಯಾದ ಚಾಲನಾ ಪರವಾನಗಿಯನ್ನೂ ಹೊಂದಿಲ್ಲ ಎಂದು ವಿಮಾ ಕಂಪನಿ ಕಂಪನಿ ಆರೋಪಿಸಿತ್ತು.
ಆದರೆ ಇದೀಗ,ನ್ಯಾಯಮೂರ್ತಿ ನಟರಾಜ್ ರಂಗಸ್ವಾಮಿ ಅವರಿದ್ದ ಪೀಠ,ಬೈಕ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಮೂವರು ವ್ಯಕ್ತಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹೇಳಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ಮೂರನೇ ವ್ಯಕ್ತಿಯಿಂದ ಅಪಘಾತವಾಗಿದೆ ಎಂದು ಸಾಬೀತು ಪಡಿಸಲು ಆಗುವುದಿಲ್ಲ. ಆದ್ದರಿಂದ ಬೈಕ್ ಅಪಘಾತ ಸಂದರ್ಭದಲ್ಲಿ ಮೂವರು ಸವಾರಿ ಮಾಡುತ್ತಿದ್ದರೆ, ಮೂರನೇ ಸವಾರನಿಗೂ ಪರಿಹಾರ ನೀಡಬೇಕು ಎಂದು ವಿಮಾ ಕಂಪನಿಗೆ ಆದೇಶಿಸಿದೆ.