ಇನ್ನು ಮುಂದೆ ಫ್ರಿಡ್ಜ್, ಟಿವಿ ಇರುವ ಮನೆಯ ಬಿಪಿಎಲ್ ಕಾರ್ಡ್ ರದ್ದು ! | ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
ಬೆಂಗಳೂರು : ಬಡ ಕುಟುಂಬಗಳಿಗೆ ಇದೀಗ ಸಂಕಷ್ಟದ ಪರಿಸ್ಥಿತಿ ಎದುರಾಗಿದ್ದು,ಇದೀಗ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ದಾರರಿಗೆ ಬಿಗ್ ಶಾಕ್ ನೀಡಿದೆ.
ಇನ್ನು ಮುಂದೆ ಬೈಕ್, ಟಿವಿ, ಫ್ರೀಡ್ಜ್ ಇರುವ ಮನೆಯ ಬಿಪಿಎಲ್ ಕಾರ್ಡ್ ರದ್ದು ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು,3 ಹೆಕ್ಟೇರ್ ಗಿಂತ ಹೆಚ್ಚು ಭೂಮಿಯನ್ನು ಹೊಂದಿದ್ದರೆ ಅಥವಾ ವಾರ್ಷಿಕ ಆದಾಯ 1.28 ಲಕ್ಷ ರೂ. ಇದ್ದರೂ ಬಿಪಿಎಲ್ ಕಾರ್ಡ್ ರದ್ದು ಮಾಡಲಿದೆ.
ಮೊದಲು ಮೂರು ಹೆಕ್ಟೇರ್ ಭೂಮಿಯನ್ನು ಹೊಂದಿದ್ದರೆ ಅಥವಾ ವಾರ್ಷಿಕ ಆದಾಯವು 1.28 ಲಕ್ಷ ರೂ. ಇದ್ದವರ ಬಿಪಿಎಲ್ ಕಾರ್ಡ್ ನ್ನು ಮಾತ್ರ ರದ್ದು ಮಾಡಲಾಗುತ್ತಿತ್ತು. ಆದ್ರೆ ಈಗ ಫ್ರಿಡ್ಜ್, ಟಿವಿ ಇರುವ ಬಡವರ ಬಿಪಿಎಲ್ ಕಾರ್ಡ್ ರದ್ದು ಗೊಳಿಸಲಾಗಿದೆ. ಅಲ್ಲದೆ ಸ್ಥಳೀಯ ರಾಜಕಾರಣಿಗಳ ಕುಮ್ಮಕ್ಕಿನಿಂದಲೂ ಕಾರ್ಡ್ ರದ್ದುಗೊಳಿಸಲಾಗುತ್ತಿದೆ.
ಇತ್ತೀಚಿಗೆ ಎಲ್ಲರ ಮನೆಯಲ್ಲೂ ಟಿವಿ ಇದ್ದು, ಈ ಬದಲಾವಣೆ ಎಲ್ಲರಿಗೂ ಬೇಸರ ತಂದಿದೆ. ಎಲ್ಲಾ ಬಿಪಿಲ್ ಕಾರ್ಡ್ ದಾರರು ಇಂತಹ ಯಾವುದೇ ಸವಲತ್ತು ಇದ್ದರೂ ತಮ್ಮ ಕಾರ್ಡ್ಗಳನ್ನು ಹಿಂದಿರುಗಿಸಲು ಸೂಚನೆ ನೀಡಿದೆ.