ಪುತ್ತೂರು : ಪುರುಷರಕಟ್ಟೆಯಲ್ಲಿ ಮಹಾಲಿಂಗೇಶ್ವರ ಎಲೆಕ್ಟ್ರಾನಿಕ್ಸ್ 2ನೇ ಶಾಖೆ ಶುಭಾರಂಭ

Share the Article

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುರುಷರಕಟ್ಟೆಯೆಂಬ ಅಭಿವೃದ್ಧಿಹೊಂದುತ್ತಿರುವ ಪುಟ್ಟ ಊರಿನಲ್ಲಿ ಮಹಾಲಿಂಗೇಶ್ವರ ಎಲೆಕ್ಟ್ರಾನಿಕ್ಸ್ನ ಎರಡನೇ ಸುಸಜ್ಜಿತ ಶಾಖೆಯೊಂದು ಇಂದು ಉದ್ಘಾಟನೆಗೊಂಡಿದೆ.

ಶಾಂತಿಗೋಡಿನ ರಾಜೇಶ್ ಪೂಜಾರಿ ರೆಂಜಾಲ ಮಾಲಿಕತ್ವದ ಮಹಾಲಿಂಗೇಶ್ವರ ಎಲೆಕ್ಟ್ರಾನಿಕ್ಸ್ನ ಎರಡನೇ ಶಾಖೆಯು ಪುರುಷರಕಟ್ಟೆ ಸಿದ್ಧಣ್ಣ ಕಾಂಪ್ಲೆಕ್ಸ್ನಲ್ಲಿದ್ದು, ಇಂದು ಮಾಲೀಕರ ತಂದೆ ಶ್ರೀಧರ ಪೂಜಾರಿ ಮತ್ತು ತಾಯಿ ಪುಷ್ಪ ಅವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಖ್ಯಾತ ವಕೀಲರು ಮತ್ತು ಕುದ್ರೋಳಿ ದೇಗುಲದ ಕೋಶಾಧಿಕಾರಿಯಾದ ಪದ್ಮರಾಜ್ ಆರ್ ಮತ್ತು ನಿಸ್ವಾರ್ಥ ಸೇವಾ ಕರ್ತರಾದ ಚಂದ್ರಶೇಖರ್ ಪೂಜಾರಿ ಬಿ.ಸಿ. ರೋಡ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಹೊನ್ನಪ್ಪ ಪೂಜಾರಿ ಕೈದಾಂಡಿ, ಬಿಲ್ಡಿಂಗ್ ಮಾಲೀಕರಾದ ನವೀನ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.

ಪುಟ್ಟ ಎಲೆಕ್ಟ್ರಾನಿಕ್ಸ್ ವಸ್ತುಗಳಿಂದ ಹಿಡಿದು ಟೀವಿ, ಫ್ರಿಡ್ಜ್ ಸೇರಿದಂತೆ ಸಕಲ ಉತ್ಪನ್ನಗಳು, ಬಹುತೇಕ ಎಲ್ಲಾ ಕಂಪನಿಗಳ ಪ್ರಾಡಕ್ಟ್ಗಳು, ಇಎಂಐ ಸೌಲಭ್ಯ ಸೇರಿದಂತೆ ಸಕಲ ಸೌಲಭ್ಯವಿರುವ ಈ ಶಾಪ್ ಕುರಿತು ಊರು ಪರವೂರಿನ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂಪರ್ಕ: ರಾಜೇಶ್ ಪೂಜಾರಿ ರೆಂಜಾಲ: ದೂರವಾಣಿ ಸಂಖ್ಯೆ: 9740766726, 9741244726

Leave A Reply