ಚಾರ್ಮಾಡಿ | ಅಕ್ರಮ ಗೋಸಾಗಾಟ ಮಾಡುತ್ತಿದ್ದವರ ಬಂಧನ | ಎಷ್ಟೇ ಕಠಿಣ ಕಾನೂನು ಬಂದರೂ ಏಕೆ ನಿಲ್ಲುತ್ತಿಲ್ಲ ಗೋ ಕಳ್ಳಸಾಗಾಟ??
ಚಾರ್ಮಾಡಿ:ಗೋವುಗಳು ಪವಿತ್ರವಾದದ್ದು ಅವುಗಳ ಸಂರಕ್ಷಣೆ ನಮ್ಮಿಂದ ಆಗಬೇಕೆ ಹೊರತು ಅವುಗಳ ಹತ್ಯೆ ಅಲ್ಲ. ಇತ್ತೀಚೆಗಷ್ಟೇ ಗೋವು ರಾಷ್ಟೀಯ ಪ್ರಾಣಿ ಆಗಬೇಕೆಂದು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ. ಇದರ ನಡುವೆಯೂ ಅಕ್ರಮ ಜಾನುವಾರು ಸಾಗಾಟ, ಹತ್ಯೆ ಹೆಚ್ಚಾಗಿದೆ.
ಇಂತಹುದೇ ಕಾಯಿದೆಗೆ ವಿರುದ್ಧವಾಗಿ ಘಟನೆ ನಡೆದಿದ್ದು,ವಾಹನವೊಂದರಲ್ಲಿ ಅಕ್ರಮವಾಗಿ ಜಾನುವಾರುಗಳ ಸಾಗಾಟ ಮಾಡುತ್ತಿದ್ದವರನ್ನು ಪೊಲೀಸರು ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ಬಂಧಿಸಿದ್ದಾರೆ.
ಸೆಪ್ಟೆಂಬರ್ 2 ರಂದು ಧರ್ಮಸ್ಥಳ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಚಂದ್ರಶೇಖರ ಕೆ ರವರು ತಮ್ಮ ಸಿಬ್ಬಂದಿಗಳೊಂದಿಗೆ ರಾತ್ರಿ 08-30 ರ ಸುಮಾರಿಗೆ ಚಾರ್ಮಾಡಿ ಚೆಕ್ ಪೊಸ್ಟ್ ಬಳಿ ಕೆ.ಎ. 18 ಸಿ 3170 ನೊಂದಣಿಯ ಟಾಟಾ -ಎಸ್ ವಾಹನವನ್ನು ಪರಿಶೀಲಿಸಿದ್ದಾರೆ.
ಆ ವಾಹನದ ಹಿಂಬದಿಯಲ್ಲಿ 1 ಕೋಣ 2 ಎಮ್ಮೆಗಳನ್ನು ಹಿಂಸಾತ್ಮಕ ರೀತಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.ಜಾನುವಾರುಗಳನ್ನು ಸಾಗಟ ಮಾಡಲು ಪರವಾನಿಗೆಯ ಬಗ್ಗೆ ವಿಚಾರಿಸಿದಾಗ ಆರೋಪಿಗಳು ಯಾವುದೇ ದಾಖಲಾತಿಗಳನ್ನು ಹಾಜರು ಪಡಿಸುವುದಿಲ್ಲ.
ಜಾನುವಾರುಗಳನ್ನು ಆರೋಪಿಗಳು ಕೊಂದು ಮಾಂಸಮಾಡಿ ಅದರ ಮಾಂಸವನ್ನು ಹಣಕ್ಕಾಗಿ ಮಾರಾಟ ಮಾಡುವ ಉದ್ದೇಶಕ್ಕಾಗಿ ಜಾನುವಾರು ಸಾಗಾಟ ಮಾಡುವುದು ಕಂಡು ಬಂದಿದೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಗೋ ಹತ್ಯೆ ನಿಷೇಧಕಾಯಿದೆ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ -2020 ಯಂತೆ ಪ್ರಕರಣ ದಾಖಲಾಗಿದೆ.