NISER ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ ವಿವೇಕಾನಂದ ಪ.ಪೂ ಕಾಲೇಜಿನ ಚಂದನ ಶಂಕರ್‌ಗೆ 86.914% ಅಂಕ
ಪುತ್ತೂರು: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಮತ್ತುರಿಸರ್ಚ್ ಸೆಂಟರ್ (NISER)ಮೂಲ ವಿಜ್ಞಾನ ವಿಷಯಕ್ಕಾಗಿ ಅಗಸ್ಟ್ 14 ರಂದು ನಡೆಸಿದ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಚಂದನ ಶಂಕರ್ 86.914% ಅಂಕ ಗಳಿಸಿ ಮುಂದಿನ ಹಂತಕ್ಕೆ ತೇರ್ಗಡೆಗೊಂಡಿದ್ದಾರೆ.
ಈಕೆ ನೆಹರೂನಗರದ ಶಂಕರ್ ಎಸ್ ಮತ್ತು ಗೀತಾ ಎ ದಂಪತಿಗಳ ಪುತ್ರಿ. ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್ ಭಾರತದ ಒಡಿಶಾದ ಜಟಾನಿಯಲ್ಲಿರುವ ಸ್ವಾಯತ್ತ ಪ್ರಧಾನ ಸಾರ್ವಜನಿಕ ಸಂಶೋಧನಾ ಸಂಸ್ಥೆಯಾಗಿದ್ದು, ಹೋಮಿ ಭಾಭಾ ರಾಷ್ಟ್ರೀಯ ಸಂಸ್ಥೆಯ ಒಂದು ಘಟಕವಾಗಿದೆ.