ಎಮ್ ಡಬ್ಲ್ಯೂ ಪಿ ಕಾಯ್ದೆಯ ಪ್ರಕಾರ ಇನ್ನು ಮುಂದೆ ಹೆಂಡತಿಯ ಯಾವುದೇ ಆದಾಯದ ಹಕ್ಕನ್ನು ಗಂಡನಿಗೆ ನೀಡೋ ಹಾಗಿಲ್ಲ | ಏನಿದು ಎಮ್ ಡಬ್ಲ್ಯೂ ಪಿ ಕಾಯ್ದೆ ಅಂತೀರಾ? ಇಲ್ಲಿದೆ ಸಂಪೂರ್ಣ ಮಾಹಿತಿ
ಎಂಡಬ್ಲ್ಯೂಪಿ ಕಾಯ್ದೆಯ ಪ್ರಕಾರ ಇನ್ನು ಮುಂದೆ ಹೆಂಡತಿಯ ಯಾವುದೇ ಆದಾಯ ಅಥವಾ ಹೂಡಿಕೆಯ ಹಕ್ಕನ್ನು ಗಂಡನಿಗೆ ನೀಡುವ ಹಾಗಿಲ್ಲ ಎಂಬುದು ಕಾಯ್ದೆಯಲ್ಲಿ ಹೇಳಲಾಗಿದೆ.
ಎಂಡಬ್ಲ್ಯುಪಿ ಕಾಯ್ದೆ ಯು ವಿವಾಹಿತ ಮಹಿಳೆಯರ ರಕ್ಷಣಾ ಕಾಯ್ದೆ ಆಗಿದ್ದು, ಇದು ವಿವಾಹಿತ ಮಹಿಳೆಯರನ್ನು ರಕ್ಷಿಸಲೆಂದೇ ವಿನ್ಯಾಸಗೊಳಿಸಲಾಗಿದೆ.
ಎಂಡಬ್ಲ್ಯೂಪಿ ಕಾಯ್ದೆಯನ್ನು 1874 ರಲ್ಲಿ ಮಾಡಲಾಗಿದ್ದು, ವಿವಾಹಿತ ಮಹಿಳೆಯರಿಗೆ ಸಂಬಳ, ಗಳಿಕೆ, ಆಸ್ತಿ, ಹೂಡಿಕೆ ಮತ್ತು ಉಳಿತಾಯದ ಮಾಲೀಕತ್ವದ ಹಕ್ಕುಗಳನ್ನು ನೀಡುವ ಅಧಿಕಾರವನ್ನು ಈ ಕಾನೂನು ಹೊಂದಿದೆ.
ಈ ಕಾಯ್ದೆಯ ಪ್ರಕಾರ, ಹೂಡಿಕೆ, ಉಳಿತಾಯ, ಸಂಬಳ ಅಥವಾ ಆಸ್ತಿಯಿಂದ ಹೆಂಡತಿಗೆ ಯಾವುದೇ ಬಡ್ಡಿ ಸಿಕ್ಕರೆ ಮತ್ತು ಬಡ್ಡಿಯನ್ನು ಗಳಿಸಿದರೆ, ಪತಿ ಅದರಲ್ಲಿ ಪಾಲನ್ನು ತೆಗೆದುಕೊಳ್ಳಲು ಅವಕಾಶವನ್ನು ನೀಡಲಾಗಿಲ್ಲ.
ಮದುವೆಗೆ ಮೊದಲು ಮಹಿಳೆ ತನ್ನ ಕುಟುಂಬದಿಂದ ಆಸ್ತಿಯನ್ನು ಪಡೆದರೆ, ಅವಳ ಮಾಲೀಕತ್ವದ ಹಕ್ಕುಗಳನ್ನು ಕೂಡ ಆಕೆ ರಕ್ಷಿಸಿಕೊಳ್ಳಬಹುದಾಗಿದೆ.ಆಕೆಯ ಯಾವುದೇ ಆಸ್ತಿಯು ಗಂಡನ ಪಾಲಾಗಿರುವುದಿಲ್ಲ.ಅದರ ರಕ್ಷಣೆ ಆಕೆಯ ಕೈಯಲ್ಲಿರುತ್ತದೆ.