ಕರಾವಳಿಯತ್ತ ಶ್ರೀಲಂಕಾದ 12 ಶಂಕಿತ ಉಗ್ರರು | ಕರ್ನಾಟಕ ಹಾಗೂ ಕೇರಳ ಕರಾವಳಿಯಲ್ಲಿ ಹೈ ಅಲರ್ಟ್ !?

ಮಂಗಳೂರು: ಶ್ರೀಲಂಕಾದಿಂದ 12 ಶಂಕಿತ ಉಗ್ರರು ಎರಡು ಯಾಂತ್ರೀಕೃತ ದೋಣಿಗಳಲ್ಲಿ ಕೇರಳದ ಕರಾವಳಿಗೆ ಬಂದಿರಬಹುದು ಎಂದು ಗುಪ್ತಚರ ಇಲಾಖೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಕೇರಳದ ಕರಾವಳಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಈಗಾಗಲೇ ಕೇರಳದ ಆಲಪ್ಪುಝಕ್ಕೆ ಉಗ್ರರು ಶ್ರೀಲಂಕಾದಿಂದ ತಲಪಿದ್ದು, ಅಲ್ಲಿಂದ ಕರ್ನಾಟಕ ಅಥವಾ ಕೇರಳದ ಯಾವುದೇ ಕಡೆಗಳಿಂದ ಪಾಕಿಸ್ತಾನಕ್ಕೆ ತೆರಳುವ ಮಾಹಿತಿ ದೊರೆತಿದ್ದು, ಅದಕ್ಕಾಗಿ ಕರಾವಳಿ ಕಾವಲು ಪೊಲೀಸ್ ಭಾರತೀಯ ತಟರಕ್ಷಣಾ ಪಡೆಗಳನ್ನು ಎಚ್ಚರಿಕೆ ವಹಿಸುವ ಸೂಚನೆ ನೀಡಲಾಗಿದೆ.

ಕರಾವಳಿ ತೀರಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಬೋಟ್ ಕಂಡುಬಂದರೆ ಪೊಲೀಸರಿಗೆ ತಿಳಿಸುವಂತೆ ಸ್ಥಳೀಯ ಮೀನುಗಾರರಿಗೆ ಈಗಾಗಲೇ ಸೂಚನೆಯನ್ನು ನೀಡಲಾಗಿದೆ‌ ಎಂದು ತಿಳಿದುಬಂದಿದೆ.

Ad Widget
Ad Widget

Ad Widget

Ad Widget

Leave a Reply

error: Content is protected !!
Scroll to Top
%d bloggers like this: