ಹೊಸ್ಮಠ ಬಲ್ಯ| 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ “ಬೆಳ್ಳಿ ಕೃಷ್ಣ” ಎಂಬ ಶೀರ್ಷಿಕೆಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ಮೊಸರು ಕುಡಿಕೆ ಉತ್ಸವ ಆಚರಣೆ

25ನೇ ವರ್ಷದ ಬೆಳ್ಳಿ ಹಬ್ಬದ “ಬೆಳ್ಳಿ ಕೃಷ್ಣ” ಎಂಬ ಶೀರ್ಷಿಕೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗು ಮೊಸರು ಕುಡಿಕೆ ಉತ್ಸವವನ್ನು ಶ್ರೀ ಅಯ್ಯಪ್ಪ ಭಜನಾ ಮಂದಿರ ಹೊಸ್ಮಠ ಬಲ್ಯದಲ್ಲಿ ಇಂದು ಮಹಾಮಾರಿಯ ಮುಂಜಾಗೃತ ಕ್ರಮಗಳ ಜೊತೆಗೆ ಸಾಂಕೇತಿಕವಾಗಿ ಆಚರಿಸಲಾಯಿತು.

ಪ್ರಗತಿಪರ ಕೃಷಿಕರಾದ ಶ್ರೀ ರಾಜಾರಾಮ್ ಭಟ್ ಹೊಸ್ಮಠ ತಮ್ಮ ದಿವ್ಯ ಹಸ್ತದಿಂದ ದೀಪ ಪ್ರಜ್ವಲನ ಮಾಡುವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.
ಸಣ್ಣ ಮಕ್ಕಳು ಮುದ್ದು ಕೃಷ್ಣ ವೇಷ ಪ್ರದರ್ಶನ ಮಾಡಿದ್ದು,ಲಕ್ಕಿ ಕೃಷ್ಣ ವೇಷಧಾರಿಯಿಂದ ಸಾಂಕೇತಿಕ ಮೊಸರು ಕುಡಿಕೆ ನಡೆಯುವ ಮೂಲಕ ಇಂದಿನ ಕಾರ್ಯಕ್ರಮ ನಡೆಯಿತು. 25 ನೇ ವರ್ಷದ ಬೆಳ್ಳಿ ಕೃಷ್ಣ ರಜತ ಸಂಭ್ರಮದ ಬ್ಯಾನೆರ್ ಬಿಡುಗಡೆ ಮಾಡಿ, ಬೆಳ್ಳಿ ಹಬ್ಬದ ಸವಿ ನೆನಪಿಗೆ ಭಜನಾ ಮಂದಿರದಲ್ಲಿ ತೆಂಗಿನ ಸಸಿ ನೆಡಲಾಯಿತು.
ಪ್ರಸಾದ ವಿತರಣೆಯ ಬಳಿಕ ಕಾರ್ಯಕ್ರಮವನ್ನು ಸಾಂಕೇತಿಕ ಕಾರ್ಯಕ್ರಮಕ್ಕೆ ಪೂರ್ಣವಿರಾಮ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷರಾದ ನಾರಾಯಣ ಎನ್ ಬಲ್ಯ, ಕಾರ್ಯದರ್ಶಿ ಪೂರ್ಣೇಶ್ ಬಿ ಎಂ ಬಾಬ್ಲುಬೆಟ್ಟು,
ಕೋಶಾಧಿಕಾರಿ ಶ್ರೀ ಕೃಷ್ಣ ಎಂ ಆರ್. ಹೊಸ್ಮಠ,
ಗೌರವಾಧ್ಯಕ್ಷರಾದ ರೇಜಯ್ಯ ದೇವಾಡಿಗ ಗಾಣದಕೊಟ್ಟಿಗೆ ಮತ್ತಿತರರು ಉಪಸ್ಥಿತರಿದ್ದರು.