ಇನ್ನು ಮುಂದೆ ಹೊರರಾಜ್ಯಕ್ಕೆ ತೆರಳುವಾಗ ವಾಹನದ ಮರು ನೋಂದಣಿ ಬಗ್ಗೆ ಚಿಂತಿಸಬೇಕಾಗಿಲ್ಲ!! | ಹೊಸದಾಗಿ ಬರುತ್ತಿದೆ ‘ಭಾರತ್ ಸೀರಿಸ್ ನಂಬರ್’ | ಇಲ್ಲಿದೆ ಈ ಕುರಿತು ಸಂಪೂರ್ಣ ಮಾಹಿತಿ

ಇನ್ನು ಮುಂದೆ ಖಾಸಗಿ ವಾಹನದಾರರು ಬೇರೆ ರಾಜ್ಯಕ್ಕೆ ತೆರಳುವಾಗ ವಾಹನದ ಮರು ನೋಂದಣಿ ಮಾಡುವ ಅಗತ್ಯ ಇರುವುದಿಲ್ಲ. ಇದೀಗ ಕೇಂದ್ರ ಸರ್ಕಾರ ‘ಬಿಎಚ್’ ಅಂದರೆ ಭಾರತ್ ಸೀರಿಸ್ ನಂಬರ್ ನೀಡಲು ಮುಂದಾಗಿದೆ.

ಮೊದಲು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಾಸ್ತವ್ಯ ಬದಲಿಸಿದರೆ ಮರು ನೋಂದಣಿ ಮಾಡಿಕೊಳ್ಳುವುದು ದೊಡ್ಡ ಸಮಸ್ಯೆಯಾಗಿತ್ತು.ಆದರೆ ಈ ಸಮಸ್ಯೆಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ.

ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯ ತನ್ನ ಆದೇಶದಲ್ಲಿ 2021ರ ಸೆ.15ರ ನಂತರ ಭಾರತ್ ಸೀರಿಸ್ ಅಡಿ ವಾಹನ ನೋಂದಣಿ ಮಾಡಲಾಗುವುದು ಎಂದು ಹೇಳಿದೆ.

Ad Widget
Ad Widget

Ad Widget

Ad Widget

ಈ ನಂಬರ್ ನಾಲ್ಕು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ತಮ್ಮ ಕಚೇರಿಗಳನ್ನು ಹೊಂದಿರುವ ಖಾಸಗಿ ಕಂಪನಿಗಳ ನೌಕಕರರಿಗೆ, ರಕ್ಷಣಾ ಪಡೆಗಳ ಸಿಬ್ಬಂದಿ, ಕೇಂದ್ರ/ರಾಜ್ಯ ಸರ್ಕಾರದ ನೌಕರರಿಗೆ, ಸರ್ಕಾರಿ ಸ್ವಾಮ್ಯದ ಉದ್ಯಮಗಳ ನೌಕರರ ಖಾಸಗಿ ವಾಹನಗಳಿಗೆ ಹೊಸ ಸರಣಿಯಲ್ಲಿ ನಂಬರ್ ನೀಡಲಾಗುತ್ತದೆ.

ಬಿಎಚ್ ಸೀರಿಸ್‍ನಡಿ ವಾಹನದ ಸಂಖ್ಯೆ YY BH #### XX ಮಾದರಿಯಲ್ಲಿ ಇರಲಿದೆ. YY ಅಂದರೆ ವಾಹನ ನೋಂದಣಿಯಾದ ವರ್ಷದ ಎರಡು ಸಂಖ್ಯೆಗಳು, ಬಿಎಚ್ ಅಂದರೆ ಭಾರತ್ ಸೀರಿಸ್ ಕೋಡ್‍ನ ಎರಡು ಸಂಖ್ಯೆಗಳು, #### ಅಂದರೆ ವಾಹನಕ್ಕೆ ನೀಡುವ ನಾಲ್ಕು ಅಂಕಿಗಳ ನೋಂದಣಿ ಸಂಖ್ಯೆ. XX ಜಾಗದಲ್ಲಿ ಎರಡು ಇಂಗ್ಲಿಷ್ ಅಕ್ಷರಗಳು ಇರಲಿವೆ.

ರಾಜ್ಯದಲ್ಲಿ ಹೊಸ ನೋಂದಣಿ ಮಾಡಬೇಕಾದರೆ ಮೊದಲು ವಾಹನ ಮಾಲೀಕರು ನೋ ಆಬ್ಜೆಕ್ಷನ್ ಸರ್ಟಿಫಿಕೇಟ್(ಎನ್‍ಒಸಿ) ಮಾಡಬೇಕಾಗುತ್ತದೆ. ಮೋಟಾರು ವಾಹನ ಕಾಯ್ದೆ 1988ರ ಸೆಕ್ಷನ್ 47ರ ಪ್ರಕಾರ ಒಂದು ರಾಜ್ಯದಲ್ಲಿ ನೋಂದಣಿಯಾದ ವಾಹನ ಮತ್ತೊಂದು ರಾಜ್ಯದಲ್ಲಿ ಬಳಸುವುದಿದ್ದರೆ ಅದಕ್ಕೆ ಆ ರಾಜ್ಯದಲ್ಲಿ ತೆರಿಗೆ ಪಾವತಿಸಬೇಕು. ಆ ರಾಜ್ಯದ ತೆರಿಗೆ ಪಾವತಿಸಲು 12 ತಿಂಗಳ ಗಡುವು ನೀಡಲಾಗುತ್ತಿದೆ.

ಇಷ್ಟೇ ಅಲ್ಲದೇ ಇನ್ನೊಂದು ರಾಜ್ಯಕ್ಕೆ ಸ್ಥಳಾಂತರವಾದರೆ, ಮತ್ತೆ ಹೊಸದಾಗಿ ರಸ್ತೆ ತೆರಿಗೆ ಕಟ್ಟಬೇಕು. ಇದರ ಜೊತೆ ಹಿಂದೆ ಇದ್ದ ರಾಜ್ಯದಲ್ಲಿ ಕಟ್ಟಲಾಗಿದ್ದ ತೆರಿಗೆಯನ್ನು ವಾಪಸ್ ಪಡೆಯಬೇಕಾದರೆ ಅರ್ಜಿ ಸಲ್ಲಿಸಬೇಕು. ಇದೊಂದು ದೀರ್ಘ ಪ್ರಕ್ರಿಯೆ ಆಗಿತ್ತು.

ಸರ್ಕಾರದ ಅಧಿಸೂಚನೆಯ ಪ್ರಕಾರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಿಎಚ್ ಸರಣಿಯ ವಾಹನಗಳಿಗೆ ಮಾತ್ರ ಈ ತೆರಿಗೆ ಅನ್ವಯವಾಗುತ್ತದೆ. 10 ಲಕ್ಷ ರೂ.ವರೆಗಿನ ವಾಹನಕ್ಕೆ ಶೇ.8 ರಷ್ಟು ತೆರಿಗೆ, 10 ರಿಂದ 20 ಲಕ್ಷ ರೂ. ಬೆಲೆ ಇರುವ ವಾಹನಕ್ಕೆ ಶೇ. 10, 20 ಲಕ್ಷಕ್ಕಿಂತ ಮೇಲ್ಪಟ್ಟ ವಾಹನಕ್ಕೆ ಶೇ.12 ರಷ್ಟು ತೆರಿಗೆ ವಿಧಿಸಲಾಗುತ್ತದೆ.

ಇದರಲ್ಲೂ ಎಲೆಕ್ಟ್ರಿಕ್ ವಾಹನಕ್ಕೆ ಶೇ.2 ರಷ್ಟು ಕಡಿಮೆ, ಡೀಸೆಲ್ ವಾಹನಕ್ಕೆ ಶೇ.2ರಷ್ಟು ಹೆಚ್ಚು ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಬಿಎಚ್ ಸರಣಿಯಲ್ಲಿ 2 ವರ್ಷ ಅವಧಿ ಅಥವಾ 4/6/8 ವರ್ಷ ಹೀಗೆ ಮಲ್ಟಿಪಲ್ ಮಾದರಿಯಲ್ಲಿ ರಸ್ತೆ ತೆರಿಗೆ ಪಾವತಿಸಬಹುದು. 14ನೇ ವರ್ಷದ ನಂತರ ವಾರ್ಷಿಕವಾಗಿ ವಿಧಿಸಲಾಗುತ್ತದೆ. ಈ ವೇಳೆ ಆ ವಾಹನಕ್ಕೆ ಈ ಹಿಂದೆ ಸಂಗ್ರಹಿಸಿದ ಮೊತ್ತದ ಅರ್ಧದಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಈ ಎಲ್ಲ ಪ್ರಕ್ರಿಯೆ ಆನ್‍ಲೈನ್ ಮೂಲಕವೇ ನಡೆಯಲಿದೆ.

Leave a Reply

error: Content is protected !!
Scroll to Top
%d bloggers like this: