ಇನ್ನು ಮುಂದೆ ಮದುವೆಗೆ ಬರ್ತೇನೆ ಎಂದು ಹೇಳಿ ತಪ್ಪಿಸಿಕೊಳ್ಳುವಂತೆಯೇ ಇಲ್ಲ!! ತಪ್ಪಿಸಿಕೊಂಡರೆ ಮನೆ ಬಾಗಿಲಿಗೆ ಬರಬಹುದು ಲಕ್ಷಾಂತರ ಬಿಲ್ ಇನ್ವಾಯ್ಸ್
ಮದುವೆ ಅಂದಮೇಲೆ ಮನೆತುಂಬಾ ನೆಂಟರು, ಬಂಧು ಬಳಗ ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಮದುವೆ ನಡೆಸಲು ಹೆಚ್ಚಿನ ಜನ ಬಯಸುತ್ತಿಲ್ಲ, ಅದರ ಬದಲಾಗಿ ಹಾಲ್ ಅಥವಾ ಓಪನ್ ಗ್ರೌಂಡ್ ಗಳು ಬೇಕಾದಷ್ಟಿವೆ.ಮದುವೆಗೆ ಅತಿಥಿಗಳನ್ನು ಆಹ್ವಾನಿಸುವಾಗ’ ಖಂಡಿತ ಬಂದೇ ಬರುತ್ತೇವೆ ‘ಎಂಬ ಆಶ್ವಾಸನೆಯನ್ನು ನಂಬಿ ಇಂತೀಷ್ಟು ಜನರಿಗೆ ಅಡುಗೆ, ಹಾಲ್ ಗಳನ್ನು ಬುಕ್ ಮಾಡುವುದು ವಾಸ್ತವದ ಸಂಗತಿ. ಆದರೆ ಆಶ್ವಾಸನೆ ನೀಡಿ ಮದುವೆಗೆ ಹೋಗದಿದ್ದರೆ ಏನಾಗುತ್ತದೆ?ಇದಕ್ಕೊಂದು ಉದಾಹರಣೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹೀಗೂ ಉಂಟೇ ಎಂದು ಆಶ್ವಾಸನೆ ನೀಡಿದಾತ ತಲೆಮೇಲೆ ಕೈ ಇಟ್ಟು ಕೂತಿದ್ದಾನೆ.
ಅಂದಹಾಗೆ ಅದೊಬ್ಬ ವ್ಯಕ್ತಿ ತನ್ನ ಮದುವೆಯ ದಿನ ಡಿನ್ನರ್ ಪಾರ್ಟಿ ನಡೆಸಲು ಎಲ್ಲಾ ಏರ್ಪಡು ನಡೆಸಿದ್ದ. ಆ ಪಾರ್ಟಿಗೆ ಗೆಳೆಯನೊಬ್ಬನನ್ನು ಆಹ್ವಾನಿಸಿದ್ದು, ಆತ ತನ್ನ ಪತ್ನಿಯ ಸಹಿತ ಪಾರ್ಟಿ ಗೇ ಬಂದೇ ಬರುತ್ತೇನೆಂದು ಮಾತು ಕೂಡಾ ಕೊಟ್ಟಿದ್ದ. ಅಂತೂ ಡಿನ್ನರ್ ದಿನ ಬಂದೇ ಬಿಟ್ಟಿತು, ಇತ್ತ ಮಾತುಕೊಟ್ಟ ವ್ಯಕ್ತಿಗೆ ವಿನಃ ಕಾರಣದಿಂದ ಹೋಗಲಸಾಧ್ಯವಾಗಿದ್ದು,ಇತ್ತ ಡಿನ್ನರ್ ಏರ್ಪಡಿಸಿದ್ದವರು ಇವರಿಬ್ಬರ ಪಾಲಿನ ಭೋಜನಕ್ಕೆ ತಗುಲಿದ ಖರ್ಚುನ್ನು ಭರಿಸಲು ಸುಮಾರು 17700 ರೂಪಾಯಿ ಬಿಲ್ ನ್ನು ಕಳುಹಿಸಿಕೊಟ್ಟಿದ್ದಾರೆ.
ಹೀಗೆ ಬಂದ ಬಿಲ್ ಜೊತೆಗೆ ಒಂದು ಕಾಗದ ಪತ್ರವೂ ಇದ್ದಿದ್ದು, ಅದರಲ್ಲಿ “ಮದುವೆಗೆ ನೀವು ಖಂಡಿತ ಬರುತ್ತೇವೆಂಬ ಮಾತು ಕೊಟ್ಟು, ನಿಮಗಾಗಿ ಬುಕ್ ಮಾಡಿದ್ದ ಸೀಟ್, ಭೋಜನ ಎಲ್ಲವೂ ವ್ಯರ್ಥವಾಯಿತು.ಬರುವುದಿಲ್ಲ ಎಂದು ಮೊದಲೇ ತಿಳಿಸಬಹುದಿತ್ತು,ಸದ್ಯ ಬಿಲ್ ನ್ನು ನಾವು ಪಾವತಿಸಲು ಸಾಧ್ಯವಾಗುತ್ತಿಲ್ಲ,ನೀವು ಪೆಪಾಲ್ ಅಥವಾ ಜೆಲ್ಲೆ ಪೇ ಆಪ್ ಮೂಲಕ ಪಾವತಿಸಿ ಎಂದು ಬರೆಯಲಾಗಿತ್ತು.
ಸದ್ಯ ಈ ಬಿಲ್ ಹಾಗೂ ಕಾಗದ ಪತ್ರವು ಸಾಮಾಜಿಕ ಜಾಲತಾದಲ್ಲಿ ಭಾರೀ ವೈರಲ್ ಆಗುತ್ತಿದ್ದು,ಕೇವಲ ಆಶ್ವಾಸನೆ ನೀಡಿ ಇಷ್ಟೆಲ್ಲಾ ಬಿಲ್ ಪಾವತಿಸಬೇಕಾ ಎಂದು ಮದುವೆಗೆ ಹೋಗದ ವ್ಯಕ್ತಿ ಗಾಬರಿಗೊಂಡಿದ್ದಾನೆ.ನಮ್ಮಲ್ಲಿಯೂ ಇಂತಹ ಘಟನೆ ನಡೆಯಬಹುದು, ಆದ್ದರಿಂದ ಮದುವೆಗೆ ಬರುತ್ತೇವೆ ಎಂದು ಭರವಸೆ ಕೊಟ್ಟು ಹೋಗದಿರಲು ಮರೆಯದಿರಿ ಎಂಬುವುದೇ ಆಶಯ.